Private unaided authorized schools list
ಶಾಲಾ ಶಿಕ್ಷಣ ಇಲಾಖೆಯೂ ರಾಜ್ಯದಲ್ಲಿರುವ ಅಧಿಕೃತ ಖಾಸಗಿ ಶಾಲೆಗಳ ಪಟ್ಟಿಯನ್ನು ತನ್ನ ವೆಬ್ಸೈಟ್ನಲ್ಲಿ ಬುಧುವಾರ ಪ್ರಕಟಿಸಿದ್ದು, ಪೋಷಕರು ತಮ್ಮ ಮಕ್ಕಳನ್ನು ದಾಖಲಿಸುವ ಅಥವಾ ದಾಖಲಿಸಿರುವ ಶಾಲೆಗಳು ಅಧಿಕೃತವೇ, ಅನಧಿಕೃತವೇ ಎಂದು ತಮ್ಮ ಮೊಬೈಲ್ ಅಲ್ಲಿಯೇ ಪರಿಶೀಲಿಸಿಕೊಳ್ಳಬಹುದು.
ರಾಜ್ಯದ ಪ್ರತಿಯೊಂದು ಜಿಲ್ಲೆಯ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿರುವ ಅಧಿಕೃತ ಶಾಲೆಗಳ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಪೋಷಕರು ಶಾಲೆಗಳು ಇಲಾಖೆಯ ಮಾನ್ಯತೆ ಪಡೆದಿವೆ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಅಧಿಕೃತ ಶಾಲೆಗಳ ಪಟ್ಟಿಯನ್ನು ಪರಿಶೀಲಿಸುವದು ಹೇಗೆ?
ಹಂತ-1 ಮೊದಲು ಶಾಲಾ ಶಿಕ್ಷಣ ಇಲಾಖೆಯ schooleducation.karnataka.gov.in ವೆಬ್ಸೈಟ್'ಗೆ ಬೇಟಿ ನೀಡಬೇಕು.
ಹಂತ-2 ನಂತರ Private unaided authorized schools list ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
ಹಂತ-3 ನಿಮ್ಮ ಜಿಲ್ಲೆ ಮತ್ತು ತಾಲೂಕು ಅನ್ನು ಆಯ್ಕೆ ಮಾಡಿಕೊಂಡು View ಮೇಲೆ ಕ್ಲಿಕ್ ಮಾಡಬೇಕು.
ಕ್ಲಿಕ್ ಮಾಡಿದ ನಂತರ ನಿಮ್ಮ ತಾಲ್ಲೂಕಿನಲ್ಲಿರುವ ಎಲ್ಲ ಅಧಿಕೃತ ಶಾಲೆಗಳ ಪಟ್ಟಿ ನಿಮಗೆ ದೊರೆಯುವದು.
ಅಧಿಕೃತ ಶಾಲೆಗಳ ಪಟ್ಟಿಯನ್ನು ನೋಡಲು ಈ ಕೆಳಗಿನ ನೇರ ಲಿಂಕ್ ಕ್ಲಿಕ್ ಮಾಡಿರಿ.
No comments:
Post a Comment
If You Have any Doubts, let me Comment Here