KEA FORTHCOMING RECRUITMENT EXAM Dates 2024
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆಗಳ ವಿವಿಧ ಹುದ್ದೆಗಳ ಭರ್ತಿಗಾಗಿ ಈಗಾಗಲೇ ಅರ್ಜಿ ಆಹ್ವಾನ ಮಾಡಿ, ಅರ್ಜಿ ಸಲ್ಲಿಸಲು ದಿನಾಂಕಗಳು ಪೂರ್ಣಗೊಂಡಿವೆ. ಅರ್ಜಿ ಆಹ್ವಾನ ಮಾಡಿದ ಹುದ್ದೆಗಳ ಪರೀಕ್ಷೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆ/ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂಬರುವ ದಿನಗಳಲ್ಲಿ ನಡೆಸಲು ಉದ್ದೇಶಿಸಿರುವ ನೇಮಕಾತಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಲೆಕ್ಕಿಗ ಸೇರಿದಂತೆ 36 ಹುದ್ದೆಗಳಿಗೆ ಜುಲೈ 12, 13 ಮತ್ತು 14ರಂದು ಪರೀಕ್ಷೆ ನಡೆಯಲಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿ ಯರ್ ಮತ್ತು ಗ್ರೂಪ್ - ಸಿ 64 ಹುದ್ದೆಗಳಿಗೆ ಆ.11 ರಂದು, ಬಿಎಂಟಿಸಿಯಲ್ಲಿ 2,500 ನಿರ್ವಾಹಕ ಹುದ್ದೆಗಳಿಗೆ ಸೆ.1ರಂದು ಪರೀಕ್ಷೆ ನಡೆಯಲಿದೆ. 402 ಪಿಎಸ್‌ಐ ಹುದ್ದೆಗಳಿಗೆ ಸೆ.22ರಂದು ಮತ್ತು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ 1,000 ಹುದ್ದೆಗಳಿಗೆ ಅ.27 ರಂದು ಪರೀಕ್ಷೆ ನಡೆಯಲಿದೆ ಎಂದು ಕೆಇಎ ತಿಳಿಸಿದೆ.
ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ.
★ 402 Civil PSI Exam Date:
2024 ಸೆಪ್ಟೆಂಬರ್-22
★ Village Accountant Exam Date:
2024 ಅಕ್ಟೋಬರ್-27
★ BMTC Conductor Exam Date:
2024 ಸೆಪ್ಟೆಂಬರ್-01
★ KKRTC Exam Date:
2024 ಜುಲೈ-12-14
★ KUWSDB ದಲ್ಲಿನ 50 AE (Civil) & 14 FDA ಒಟ್ಟು 64 ಹುದ್ದೆಗಳ Exam Date:
2024 ಅಗಸ್ಟ್-11
☞☞☞☞☞☞
No comments:
Post a Comment
If You Have any Doubts, let me Comment Here