KAS Officer Transfer Order Dated 29-05-2024
ರಾಜ್ಯ ಸರ್ಕಾರದಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಭಾರಿ ಎಂಡಿಯಾಗಿ ಡಾ.ಕೆಆರ್ ರಾಜ್ ಕುಮಾರ್ ನೇಮಕ ಮಾಡಿ ಆದೇಶಿಸಿದೆ. ಈ ಮೊದಲು ಇದ್ದಂತ ಎಂಡಿ ಜೆ.ಜಿ ಪದ್ಮನಾಭ ಅವರನ್ನು ಅಮಾನತುಗೊಳಿಸಿತ್ತು. ಈ ಬೆನ್ನಲ್ಲೇ ಆ ಖಾಲಿ ಸ್ಥಾನಕ್ಕೆ ಪ್ರಭಾರಿ ಎಂಡಿಯಾಗಿ ಡಾ.ಕೆ ಆರ್ ರಾಜ್ ಕುಮಾರ್ ನೇಮಕ ಮಾಡಿ ಆದೇಶಿಸಿದೆ.
ಈ ಕುರಿತಂತೆ ಇಂದು ಪರಿಶಿಷ್ಯ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಭವ್ಯ ಎಂ.ಜೆ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಡಾ|| ಕೆ.ಆರ್ ರಾಜ್‌ಕುಮಾರ್, ಜಂಟಿ ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಬೆಂಗಳೂರು ಇಲ್ಲಿ ಖಾಲಿ ಇರುವ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದ್ದಾರೆ.
No comments:
Post a Comment
If You Have any Doubts, let me Comment Here