Karnataka SSLC Result 2024
The Karnataka School Examination and Assessment Board (KSEAB) on May 9 will release the Secondary School Leaving Certificate (SSLC) Class 10 results for the 2024 exams. Students who appeared in the Karnataka SSLC 2024 Class 10 board exams can check and download the results through the official website
ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್ ಮಂಜುಶ್ರೀ ಮಾಹಿತಿ ನೀಡಿದ್ದಾರೆ.
ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡು, ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಗಣಕೀಕರಣ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ.25ರಿಂದ ಏ.6ರವರೆಗೆ 2750 ಕೇಂದ್ರಗಳಲ್ಲಿ ನಡೆದಿತ್ತು. ಸುಮಾರು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 4,41,910 ವಿದ್ಯಾರ್ಥಿ ಮತ್ತು 4,28,058 ವಿದ್ಯಾರ್ಥಿನಿಯರು ಆಗಿದ್ದಾರೆ.
SSLC ಫಲಿತಾಂಶ ಪ್ರಕಟವಾಗುತ್ತಿರುವ ಸಮಯದಲ್ಲಿ ಮುದ್ದು ಮಕ್ಕಳಿಗೆ ಮತ್ತು ಪಾಲಕರಿಗೆ ಒಂದಿಷ್ಟು ಕವಿಮಾತು*
*ವಿದ್ಯಾರ್ಥಿಗಳಿಗೆ ಕಿವಿಮಾತು*
👉 ಮೊದಲನೆಯದಾಗಿ ಪರೀಕ್ಷೆ ಬರೆದಿರುವ ನನ್ನ ಮುದ್ದು ಎಲ್ಲ ಮಕ್ಕಳಿಗೂ ಶುಭಾಶಯಗಳು.
👉 ನಿರೀಕ್ಷಿತ ಫಲಿತಾಂಶ ಬರಲಿ ಅಥವಾ ಬಾರದಿರಲಿ, ಎದೆಗುಂದಬೇಡಿ.
👉 ಪಾಸಾಗಲಿ ಅಥವಾ ಫೇಲಾಗಲಿ, ಫಲಿತಾಂಶವನ್ನು ಧೈರ್ಯವಾಗಿ ಸ್ವೀಕರಿಸಿ.
👉 ಶಾಲೆಯ ಪರೀಕ್ಷೆಗಳಿಗಿಂತ ಬದುಕಿನ ಪರೀಕ್ಷೆಯಲ್ಲಿ ಪಾಸಾಗೋದು ಮುಖ್ಯ ಎಂಬುದು ತಿಳಿದಿರಲಿ.
👉 ನಿಮಗೆ ಒತ್ತಡಗಳಿರಬಹುದು, ಪರವಾಗಿಲ್ಲ. ಅದನ್ನು ಜಾಣತನದಿಂದ ಎದುರಿಸಿ.
👉 ಮೂರ್ಖರಂತೆ ಎಂದೂ ತಪ್ಪು ತೀರ್ಮಾನ ಕೈಗೊಳ್ಳಬೇಡಿ, ಅಡ್ಡದಾರಿ ಹಿಡಿಯಬೇಡಿ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ.
👉 ನಿಮಗಿಂತ ಕಡಿಮೆ ಕಲಿತು ಅಥವಾ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿ ಸಾಧನೆ ಮತ್ತು ದುಡ್ಡು ಸಂಪಾದನೆ ಮಾಡಿರುವ ಅನೇಕ ಜನರು ನಿಮ್ಮ ಸುತ್ತಮುತ್ತ ಇದ್ದಾರೆ.
👉 ನಿಮ್ಮಲ್ಲೂ ಪ್ರತಿಭೆ, ಕೌಶಲ್ಯಗಳಿವೆ. ಆತ್ಮವಿಶ್ವಾಸವೊಂದಿದ್ದರೆ, ನೀವೂ ಎತ್ತರಕ್ಕೆ ಬೆಳೆಯಬಹುದು, ನೆನಪಿರಲಿ.
👉 ನಾಳೆ ಪ್ರಕಟವಾಗುವ ಫಲಿತಾಂಶವನ್ನು ಸ್ವೀಕರಿಸಲು ನೀವು ತಯಾರಿಲ್ಲ ಎಂದಾದರೆ ಚಾಲೆಂಜ್ ಮಾಡಿ.
👉 ನಿಮ್ಮ ಉತ್ತರ ಪತ್ರಿಕೆ ತರಿಸಿಕೊಳ್ಳಿ.
👉 ರೀ ಟೋಟಲಿಂಗ್, ರೀ ವ್ಯಾಲ್ಯುವೇಶನ್'ಗೆ ಅರ್ಜಿ ಹಾಕಿ.
👉 ಅಥವಾ ಪೂರ್ತಿ ಫಲಿತಾಂಶವನ್ನೆ ಧಿಕ್ಕರಿಸಿ ಮರು ಪರೀಕ್ಷೆ ಬರೆಯಿರಿ.
*ಯಾವುದೇ ಕಾರಣಕ್ಕೂ ಫಲಿತಾಂಶದಿಂದ ಹತಾಶರಾಗಬೇಡಿ.*
👍👍👍👍👍
*ಪಾಲಕರಿಗೆ ಕಿವಿಮಾತು*
👉 ದಯವಿಟ್ಟು ಮಕ್ಕಳ ಮೇಲೆ ಒತ್ತಡ ಹೇರಬೇಡಿ.
👉 ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿರಿ.
👉 ಫಲಿತಾಂಶ ಹೇಗೆ ಬಂದರು ಸ್ವೀಕರಿಸಿ.
👉 ಫಲಿತಾಂಶ ನಿಮಗೆ ತೃಪ್ತಿ ನೀಡದೆ ಇದ್ದರೆ ಪರೀಕ್ಷೆ - 2 ಮರು ಪರೀಕ್ಷೆಗೆ ತಯಾರಾಗಲು ತಿಳಿಸಿ.
👉 ವಿಷಯವಾರು ಅಂಕಗಳು ತೃಪ್ತಿ ಆಗದೆ ಇದ್ದಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿ.
*ಯಾವುದೇ ಕಾರಣಕ್ಕೂ ಮಕ್ಕಳಿಗೆ ಬೈಯುವುದು, ಕೋಪ ಮಾಡಿಕೊಳ್ಳುವುದು ಮಾಡಬೇಡಿ.*
ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ ? ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ 1: KSEAB ಗೆ ಭೇಟಿ ನೀಡಿ, karresults.nic.in ನಲ್ಲಿ ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ.
ಹಂತ 2: ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ
ಹಂತ 3: ನಿಮ್ಮ ಫಲಿತಾಂಶವನ್ನು ವೀಕ್ಷಿಸಿ ಮತ್ತು ಆ ಪುಟವನ್ನು ಡೌನ್‌ಲೋಡ್ ಮಾಡಿ
ಹಂತ 4: ಪ್ರಿಂಟ್‌ಔಟ್ ತೆಗೆದುಕೊಳ್ಳಿ
ನಿಮ್ಮ ಫಲಿತಾಂಶ ಚೆಕ್ ಮಾಡಲು ಲಿಂಕ್ ಕ್ಲಿಕ್ ಮಾಡಿ.
👉👉👉👉👉
ಕರ್ನಾಟಕ SSLC ಫಲಿತಾಂಶ 2024 ಅನ್ನು SMS ಮೂಲಕ ಪರಿಶೀಲಿಸಿ
1. ನಿಮ್ಮ ಮೊಬೈಲ್ ಫೋನ್‌ನ ಸಂದೇಶ ಕಳುಹಿಸುವ ಅಪ್ಲಿಕೇಶನ್ ತೆರೆಯಿರಿ
2. KSEEB10 (ರೋಲ್ ಸಂಖ್ಯೆ) ಟೈಪ್ ಮಾಡಿ
3. ರೋಲ್ ಸಂಖ್ಯೆ 56263 ಗೆ SMS ಮಾಡಿ
4. SSLC ಫಲಿತಾಂಶದ ಅಂಕಗಳನ್ನು ಅದೇ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ
ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಆನ್‌ಲೈನ್ ಮಾರ್ಕ್ ಶೀಟ್ ತಾತ್ಕಾಲಿಕವಾಗಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಶಾಲೆಗಳ ಅಧಿಕೃತ ಸೂಚನೆಯ ಪ್ರಕಾರ ಫಲಿತಾಂಶಗಳನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ತಮ್ಮ ಶಾಲೆಗಳಿಂದ ಕರ್ನಾಟಕ SSLC ಮಾರ್ಕ್‌ಶೀಟ್ ಪಡೆಯಬೇಕು.
No comments:
Post a Comment
If You Have any Doubts, let me Comment Here