International No Diet Day 2024
International No Diet Day falls on May 6. The day promotes and celebrates body positivity, raises awareness around body image issues and fatphobia, and embraces diversity and respecting all body shapes and sizes.
*ಮೇ 06-‘ಇಂಟರ್ನ್ಯಾಷನಲ್ ನೋ ಡಯಟ್ ಡೇ’(International No Diet Day):*
*ಡಯಟ್ಗೆ (Diet) ನೋ ಎನ್ನಲು ಒಂದು ವಿಶೇಷ ದಿನವೇಕೆ ಎನ್ನುವ ಕುತೂಹಲ ನಿಮ್ಮಲ್ಲಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.* *ಸಾಮಾನ್ಯವಾಗಿ ಸೌಂದರ್ಯವನ್ನು ಕಾಪಾಡಿಕೊಳ್ಳಲು ಡಯಟ್ ಮಾಡಲಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಅದು ತಪ್ಪೆಂದು ತಿಳಿದವರು ಹೇಳುತ್ತಲೇ ಇರುತ್ತಾರೆ. ಫಿಟ್ನೆಸ್ಗಾಗಿ, ಆರೋಗ್ಯದ ದೃಷ್ಟಿಯಿಂದ ಡಯಟ್ ಮಾಡಿ. ಬೊಜ್ಜು ಅಥವಾ ದೇಹದ ತೂಕದ ಬಗ್ಗೆ ಕೀಳರಿಮೆ ಇಟ್ಟುಕೊಂಡು ಡಯಟ್ ಮೊದಲಾದ ಕ್ರಮಗಳನ್ನು ಅಂಧವಾಗಿ ಅನುಕರಿಸಬೇಡಿ. ಸೌಂದರ್ಯಕ್ಕೆ ಮಾನದಂಡಗಳಿಲ್ಲ. ಹೇಗಿದ್ದರೂ ಚಂದವೇ ಎನ್ನುವುದು ತಜ್ಞರು ಹೇಳುವ ಕಳಕಳಿಯ ಮಾತು. ಅದಾಗ್ಯೂ ಅಂಧಾನುಕರಣೆಯಿಂದ ಡಯಟ್ ಮೊರೆಹೋಗುವವರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದ್ದರಿಂದ ಈ ಬಗ್ಗೆ ತಿಳುವಳಿಕೆ ಮೂಡಿಸಲು ಇಂಟರ್ನ್ಯಾಷನಲ್ ಡಯಟ್ ಡೇ ಆಚರಿಸಲಾಗುತ್ತದೆ.*
*1992 ರಲ್ಲಿ ಮೇರಿ ಇವಾನ್ಸ್ ಯಂಗ್ ಅವರು ‘ಅಂತರರಾಷ್ಟ್ರೀಯ ನೊ ಡಯಟ್ ದಿನ’ವನ್ನು ಪ್ರಾರಂಭಿಸಿದರು. ಬ್ರಿಟನ್ನಲ್ಲಿ ಮೊದಲು ಆಚರಿಸಿದ ಈ ದಿನವನ್ನು ಇದೀಗ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಭಾರತ, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಸ್ರೇಲ್, ಡೆನ್ಮಾರ್ಕ್, ಸ್ವೀಡನ್ ಮತ್ತು ಬ್ರೆಜಿಲ್ಗಳಲ್ಲಿ ಆಚರಿಸಲಾಗುತ್ತದೆ.*
*ನಮ್ಮ ದೇಹವನ್ನು ಇದ್ದಂತೆಯೇ ಸ್ವೀಕರಿಸೋಣ. ದೇಹದ ಕೊಬ್ಬನ್ನು, ದೇಹದ ಆಕಾರವನ್ನು ಒಪ್ಪೋಣ’ ಎನ್ನುವುದು ಡಯಟ್ಗೆ ನೋ ಎನ್ನುವ ದಿನದ ಪ್ರಮುಖ ಆಶಯ. ಒಬ್ಬೊಬ್ಬರು ಒಂದೊಂದು ರೀತಿಯ ದೇಹವನ್ನು ಹೊಂದಿರುತ್ತಾರೆ. ಅದನ್ನು ಒಪ್ಪಬೇಕು. ಹಾಗೆಯೇ ಡಯಟ್ ಎನ್ನುವುದು ಫಿಟ್ನೆಸ್ಗಾಗಿಯಷ್ಟೇ ಇರಬೇಕು ಎಂದು ಜನರಿಗೆ ತಿಳುವಳಿಕೆ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಹಾಗೆಯೇ ಡಯಟ್ನಿಂದ ಉಂಟಾಗುವ ಪರಿಣಾಮದ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ.*
No comments:
Post a Comment
If You Have any Doubts, let me Comment Here