*ಮೇ 19-ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯)ಅವರ ಜನ್ಮ ಜಯಂತಿಯಂದು ಶತ ಶತ ಅಗಣಿತ ಗೌರವ ನಮನಗಳು...*
*ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು.ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.*
*ಗಿರೀಶ ಕಾರ್ನಾಡರು ಹುಟ್ಟಿದ್ದು ಮಹಾರಾಷ್ಟ್ರದ ಮಾಥೆರಾನ್‌ನಲ್ಲಿ. ತಂದೆ ವೈದ್ಯ ವೃತ್ತಿಯಲ್ಲಿದ್ದ ರಘುನಾಥ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಉತ್ತರ ಕನ್ನಡ ಜಿಲ್ಲೆಗೆ ಸೇರಿದವರು.*
*ಮನೆಮಾತು ಕೊಂಕಣಿಯಾದರೂ ಮರಾಠಿ, ಇಂಗ್ಲಿಷ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಹೈಸ್ಕೂಲು ಸಿರಸಿಯಲ್ಲಿ. ಧಾರವಾಡದಲ್ಲಿ ಕಾಲೇಜು ವ್ಯಾಸಂಗ. ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಬಿ.ಎ. ಪದವಿ. ಮುಂಬಯಿಯಲ್ಲಿ ಎಂ.ಎ. ವಿದ್ಯಾರ್ಥಿಯಾಗಿದ್ದಾಗ ರೋಡ್ಸ್ ವಿದ್ಯಾರ್ಥಿ ವೇತನದಿಂದ ಇಂಗ್ಲೆಂಡ್‌ಗೆ ಪ್ರಯಾಣ.*
*ಆಕ್ಸ್‌ಫರ್ಡ್‌ನಲ್ಲಿ ಆಕ್ಸ್‌ಫರ್ಡ್ ಯೂನಿಯನ್ನಿನ ಅಧ್ಯಕ್ಷ ಪದವಿ.* *ಇವರ ಕಾಲದಲ್ಲಿ ಮಹಿಳೆಯರಿಗೂ ಯೂನಿಯನ್ನಿನಲ್ಲಿ ದೊರೆತ ಪ್ರವೇಶ. ಭಾರತಕ್ಕೆ ಹಿಂದಿರುಗಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಮದರಾಸು ಶಾಖೆಯ ಉಪವ್ಯವಸ್ಥಾಪಕ, ವ್ಯವಸ್ಥಾಪಕರ ಹುದ್ದೆ. ನಡುವೆ ‘ಮದ್ರಾಸ್ ಪ್ಲೇಯರ್ಸ್’ ನಾಟಕ ಸಂಸ್ಥೆಯ ಸಂಪರ್ಕ.ಪುರಾಣದ ಯಯಾತಿಯನ್ನು ಆಧುನಿಕ ದೃಷ್ಟಿಕೋನದಿಂದ ಬರೆದ ಯಯಾತಿ, ವಾದಗ್ರಸ್ತ ಸುಲ್ತಾನನ ಸುತ್ತ ಹೆಣೆದ ತುಘಲಕ್, ಹೋಮಿಬಾಬಾ ಸ್ಕಾಲರ್‌ಶಿಪ್ ಪಡೆದ ಅವಯಲ್ಲಿ ರಚಿಸಿದ ಹಯವದನ, ಜಾನಪದ ಕಥೆಯಾಧಾರಿತ ನಾಗಮಂಡಲ ಮತ್ತು ಹಿಟ್ಟಿನ ಹುಂಜ, ಅಂಜುಮಲ್ಲಿಗೆ, ತಲೆದಂಡ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳನ್ನು ಬರೆದು ನಿರ್ದೇಶಿಸಿದ ಖ್ಯಾತಿ ಇವರದು.
No comments:
Post a Comment
If You Have any Doubts, let me Comment Here