All officers/employees of the State Govt. are required to register themselves in the ESS portal of HRMS
ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ/ನೌಕರರು ಕಡ್ಡಾಯವಾಗಿ ಹೆಚ್‌ಆರ್‌ಎಂಎಸ್‌ನ ನೌಕರರ ಸ್ವಯಂ ಸೇವೆ (Employee Self Service-ESS) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸದಂತೆ, ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲು ಹೆಚ್‌ಆರ್ ಎಂಎಸ್ ನಿರ್ದೇಶನಾಲಯವು ನೌಕರರ ಸ್ವಯಂ ಸೇವೆ (Employee Self Service-ESS) ಪೋರ್ಟಲ್‌ಅನ್ನು ಸಿದ್ಧಪಡಿಸಿದೆ.
ಸದರಿ ಪೋರ್ಟಲ್ ಬಳಕೆದಾರರ ಸ್ನೇಹಿಯಾಗಿದ್ದು, ಈ ಕೆಳಕಂಡಂತೆ ಹಲವು ರೀತಿಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಮುಂದುವರೆದು, ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ, ರಾಜ್ಯ ಸರ್ಕಾರದ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ಬರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಯೋಜನೆಗಳಡಿ ಮಾಡಿಸಿದ ವಿಮಾ ಪಾಲಿಸಿಗಳ ಮಾಹಿತಿಯನ್ನು HRMS-ESS Login ನಲ್ಲಿ ಭರ್ತಿ ಮಾಡಲು ಸಹ ಈಗಾಗಲೇ ತಿಳಿಸಿರುತ್ತಾರೆ.
ಆದುದರಿಂದ ರಾಜ್ಯ ಸರ್ಕಾರದ ಪ್ರತಿ ಸಿಬ್ಬಂದಿಗಳ ತಮ್ಮದೇ ಆದ ವೇತನ ಚೀಟಿ, ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸದುಪಯೋಗವನ್ನು ಪಡೆದುಕೊಳ್ಳಲು HRMSESS Login (https://hrmsess.karnataka.gov.in) ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಹಾಗೂ ಪ್ರತಿ ಸಿಬ್ಬಂದಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ಸದರಿ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಲು ಈ ಮೂಲಕ ತಿಳಿಸಿದೆ. ಹಾಗೂ ತಮ್ಮ ಎಲ್ಲಾ ಉದ್ಯೋಗಿಗಳು ಮೇ-2024 ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.
No comments:
Post a Comment
If You Have any Doubts, let me Comment Here