*ವಿಶ್ವ ಪಾರಂಪರಿಕ ದಿನ*
💐💐💐💐💐💐💐💐
ಏಪ್ರಿಲ್ 18 ವಿಶ್ವ ಪಾರಂಪರಿಕ ದಿನ. ವಿಶ್ವದಾದ್ಯಂತ ಇರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ರಕ್ಷಿಸಿ ಕಾಪಾಡುವ ಉದ್ದೇಶದಿಂದ ಈ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ. ಸ್ಮಾರಕಗಳ ಇತಿಹಾಸ, ವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ಪಾರಂಪರಿಕೆ ತಾಣಗಳನ್ನು ರಕ್ಷಣೆ ಮಾಡುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪಾರಂಪರಿಕೆ ದಿನ ಅಥವಾ ವಿಶ್ವ ಪರಂಪರೆ ದಿನವನ್ನು ಆಚರಣೆ ಮಾಡಲಾಗುತ್ತದೆ.
🌹ವಿಶ್ವ ಪರಂಪರೆ ಎಂದರೇನು?
ಮನುಕುಲಕ್ಕೆ ಸಾರ್ವತ್ರಿಕ ಮೌಲ್ಯವನ್ನು ತಂದುಕೊಟ್ಟು ಭೂಮಿ ಮೇಲಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳಗಳನ್ನು ವಿಶ್ವಪರಂಪರೆ ತಾಣಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಿಡಬೇಕಾದ ಉದ್ದೇಶದಿಂದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿಕೊಳ್ಳಲಾಗುತ್ತದೆ. ವೈವಿಧ್ಯಮಯವಾಗಿರುವ ಮತ್ತು ವೈಶಿಷ್ಟ ಹೊಂದಿರುವ ಈಜಿಪ್ಟ್ ನ ಪಿರಾಮಿಡ್, ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್, ಈಕ್ವೆಡಾರ್‌ನ ಗ್ಯಾಲಪಗೋಸ್, ಭಾರತದ ತಾಜ್‌ಮಹಲ್ ಸೇರಿದಂತೆ ಹಲವಾರು ಸ್ಥಳಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
🌹ಶುರುವಾಗಿದ್ದು ಯಾವಾಗ ?
ಟುನಿಷಿಯಾದಲ್ಲಿ ICOMOS ಗಳ 1982 ಏಪ್ರಿಲ್ 18 ರಂದು ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಸ್ಮಾರಕ ಮತ್ತು ತಾಣ ಮಂಡಳಿ ಮೂಲಕ ಮೊತ್ತ ಮೊದಲ ಬಾರಿಗೆ ವಿಶ್ವ ಪರಂಪರೆ ದಿನವನ್ನು ಆಚರಿಸಲಾಯಿತು. ಬಳಿಕ ಯುನೆಸ್ಕೊ 1983 ರಲ್ಲಿ ಇದನ್ನು ಅಂಗೀಕರಿಸಿತು. ಇದೀಗ ಇದನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ.
🌹ಸೇರ್ಪಡೆಯಾಗುವುದು ಹೇಗೆ?
ಮೊದಲಿಗೆ ವಿಶ್ವ ಪಾರಂಪರಿಕ ಸಮಿತಿಗೆ ಪಟ್ಟಿಗೆ ಸೇರಿಸಬೇಕೆಂದಿರುವ ಸ್ಥಳದ ನಾಮ ನಿರ್ದೇಶನ ಮಾಡಬೇಕಾಗುತ್ತದೆ. ಈ ಕೆಲಸವನ್ನು ಆ ಸ್ಥಳ ಇರುವ ದೇಶಗಳು ಮಾಡುತ್ತವೆ. ನಂತರ ಸಮಿತಿಯು ಆ ಸ್ಥಳದ ಪರಿಶೀಲನೆ ನಡೆಸಿ ಪಟ್ಟಿಗೆ ಸೇರಿಸಬೇಕೋ, ಬೇಡವೋ ಎಂಬ ತೀರ್ಮಾನ ತೆಗೆದುಕೊಳ್ಳುತ್ತದೆ.
🌹ಯುನೆಸ್ಕೋ ಕೆಲಸ.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ ) ಪ್ರತಿನಿಧಿಗಳು ಪ್ರತಿ ವರ್ಷ ಸಭೆ ಸೇರಿ, ಅಳಿವಿನಂಚಿನಲ್ಲಿರುವ ಸಂರಕ್ಷಿಸಬೇಕಾಗಿರುವ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳ ಬಗ್ಗೆ ವರದಿ ತರಿಸಿಕೊಂಡು, ಅವುಗಳನ್ನು ಪಟ್ಟಿಗೆ ಸೇರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರತಿ ವರ್ಷ ಪಟ್ಟಿಯಲ್ಲಿರುವ ಸ್ಥಳಗಳಿಗೆ 4 ಮಿಲಿಯನ್ ಎಂದರೆ 40 ಲಕ್ಷ ಡಾಲರ್ ಒದಗಿಸಲಾಗುತ್ತದೆ. (ಹೆಚ್ಚು ಕಡಿಮೆ 20 ಕೋಟಿ ರೂಪಾಯಿ). ಈ ಫಂಡ್ ಬಿಡುಗಡೆಯಾಗಬೇಕಾದರೆ ಸ್ಥಳೀಯ ಸರಕಾರ, ಖಾಸಗಿ ದಾನಿಗಳು ಕೂಡ ಪಾಲು ಕೊಡಬೇಕು. ಇಲ್ಲದಿದ್ದರೆ ಇಲ್ಲ. ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಯುನೆಸ್ಕೊ ಸೂಚನೆಯಂತೆಯೇ ಎಲ್ಲ ಅಭಿವೃದ್ಧಿ ಅಥವಾ ಸಂರಕ್ಷಣಾ ಕೆಲಸಗಳು ನಡೆಯಬೇಕು.
🌹ಉದ್ದೇಶ :
ಪಾರಂಪರಿಕ ಸ್ವತ್ತುಗಳು ಮತ್ತು ತಾಣಗಳ ಪ್ರಾಮುಖ್ಯತೆಯನ್ನು ಗುರುತಿಸಿ ಸಂರಕ್ಷಿಸುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಗುರಿಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಘಿಕ ಪ್ರಯತ್ನಗಳನ್ನು ಮಾಡುವ ಮೂಲಕ ವಿಶ್ವದ ಪ್ರತಿಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ.!!
No comments:
Post a Comment
If You Have any Doubts, let me Comment Here