JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Tuesday, April 23, 2024

World Book and Copyright Day 2024

  Jnyanabhandar       Tuesday, April 23, 2024
📚📚📚📚📚📚📚📚
*ಇಂದು (ಏಪ್ರಿಲ್ 𝟐𝟑) ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ:*


_✍🏻 ಇಂದು ವಿಶ್ವ ಪುಸ್ತಕ ದಿನ, ಈ ದಿನವನ್ನು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಅಥವಾ ಅಂತಾರಾಷ್ಟ್ರೀಯ ಪುಸ್ತಕ ದಿನ ಎಂದು ಹೆಸರಿಸಿ  ಪ್ರತಿ ವರ್ಷ ಏಪ್ರಿಲ್‌ 𝟐𝟑 ರಂದು ಆಚರಿಸಲಾಗುತ್ತದೆ._

*★ ಏಪ್ರಿಲ್ 𝟐𝟑 ರಂದೇ ಏಕೆ..??*
  _ಆರಂಭದಲ್ಲಿ ವೆಲೆನ್ಸಿಯಾದ ಬರಹಗಾರ ವಿಸೆಂಟ್‌ ಕ್ಲವೆಲ್‌ ಆಂಡ್ರ್ಯೂ ಅವರ ಜನ್ಮದಿನವಾದ ಅಕ್ಟೋಬರ್‌  𝟕 ರಂದು ಪುಸ್ತಕ ದಿನವನ್ನು ಆಚರಿಸಲಾಯಿತು. ಬಳಿಕ ಅವರು ಮರಣ ಹೊಂದಿದ ದಿನವಾದ ಏಪ್ರಿಲ್‌ 𝟐𝟑 ಅನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಯ್ಕೆ ಮಾಡಲಾಯಿತು._
    *ವಿಶ್ವವು ಸಾಕಷ್ಟು ಬರಹಗಾರರು ಜನ್ಮ ತಾಳಿದ ಮತ್ತು ಕಳೆದುಕೊಂಡ ದಿನ:-*
  _𝟏𝟗𝟗𝟓 ರಲ್ಲಿ ಯುನೆಸ್ಕೊ ಸಹ ಏಪ್ರಿಲ್‌ 𝟐𝟑 ಅನ್ನು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಯ್ಕೆ ಮಾಡಿತು. ಏಪ್ರಿಲ್‌ 𝟐𝟑 ವಿಲಿಯಂ ಷೇಕ್ಸ್‌ಪಿಯರ ಮತ್ತು ಇಕಾಗಾಸಿಲಸ್ಕೊ ಡೆ ಲಾ ವೆಗಾ ಅವರು ಮರಣ ಹೊಂದಿದ ದಿನವಾಗಿದೆ. ಜೊತೆಗೆ, ಸಾಕಷ್ಟು ಬರಹಗಾರರ ಜನ್ಮದಿನವೂ ಹೌದು. ಹೀಗಾಗಿ ಯುನೆಸ್ಕೊ ಏಪ್ರಿಲ್‌ 𝟐𝟑 ಅನ್ನು ಪುಸ್ತಕ ದಿನವನ್ನಾಗಿ ಆಯ್ಕೆ ಮಾಡಿತ್ತು._
   *ಉದ್ದೇಶ:-..*
   _ಜನರಲ್ಲಿ ಓದುವ, ಪುಸ್ತಕ ಪ್ರಕಟಿಸುವ ಅಭಿರುಚಿ ಹೆಚ್ಚಿಸಲು ಮತ್ತು ಕೃತಿಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಇದನ್ನು ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಆಚರಿಸುತ್ತವೆ. ಶಾಲಾ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಏರ್ಪಡಿಸಿ ಬಹುಮಾನದ ರೂಪದಲ್ಲಿ ಉಚಿತವಾಗಿ ಪುಸ್ತಕಗಳನ್ನು ನೀಡಲಾಗುತ್ತದೆ._
    *ಕೃತಿಸ್ವಾಮ್ಯ (𝑪𝒐𝒑𝒚 𝒓𝒊𝒈𝒉𝒕)  ಎಂದರೇನು.??.*
  _ಸಾಹಿತ್ಯ, ನಾಟಕ, ಸಂಗೀತ ಮತ್ತು ಕಲಾಕೃತಿಗಳನ್ನು ಅಧಿಕಾರವಿಲ್ಲದೆ ನಕಲು ಮಾಡುವುದು, ರೂಪಾಂತರಿಸುವುದು, ಮರುಪ್ರಕಟಿಸುವುದು, ಪ್ರದರ್ಶಿಸುವುದು ಮುಂತಾದುವುಗಳ ವಿರುದ್ಧ ಅವುಗಳ ಕರ್ತೃಗಳಿಗೆ ಕಾನೂನು ರೀತ್ಯಾ ನೀಡಲಾಗಿರುವ ರಕ್ಷಣೆಯ ಹಕ್ಕು. (ಕಾಪಿರೈಟ್) ಒಂದು ಸಾಹಿತ್ಯ, ನಾಟಕ, ಸಂಗೀತ ಇಲ್ಲವೇ ಕಲಾಕೃತಿಯ ಪ್ರತಿಗಳನ್ನು ಮಾಡುವ, ಮಾರುವ ಇಲ್ಲವೇ ನಿಯಂತ್ರಿಸುವ, ಅನನ್ಯ ಹಕ್ಕು ಇದು._
    *ಕಾನೂನಿನ ಅಡಿ ನೀಡಲಾದ ಹಕ್ಕು:-*
   _ಇದು ಕಾನೂನಿನಿಂದ ನೀಡಲಾದ ಹಕ್ಕು. ಈ ಹಕ್ಕು ಒಂದು ಕಾಲಾವಧಿಗೆ ಸೀಮಿತವಾಗಿರುತ್ತದೆ. ಒಂದು ಕೃತಿ ಮೊದಲ ಬಾರಿಗೆ ಪ್ರಕಟವಾದ ಮೇಲೆ ಅದನ್ನು ಮರುಪ್ರಕಟಿಸಲು, ಪ್ರತಿಗಳನ್ನು ಮಾಡಿ ಮಾರಲು, ರೂಪಾಂತರಗೊಳಿಸಲು, ಮಾರ್ಪಡಿಸಲು, ಪ್ರದರ್ಶಿಸಲು, ಇಲ್ಲವೇ ನಿರೂಪಿಸಲು ಕಾನೂನು ನೀಡುವ ಅನನ್ಯ ಅಧಿಕಾರ, ಇನ್ನೊಂದು ಸಾಹಿತ್ಯ ಕೃತಿಯ ಪ್ರತಿಗಳನ್ನು ಮುದ್ರಿಸಿ ಪ್ರಕಟಿಸುವ ಅನನ್ಯ ಅಧಿಕಾರ; ಕಾನೂನುಮನ್ನಿತ ಸಾಹಿತ್ಯ ಸ್ವಾಮ್ಯಾಧಿಕಾರ;_
    *𝑻𝒉𝒆𝒎𝒆 𝒐𝒇 2024 𝒊𝒔 :-*

_ಪುಸ್ತಕ ಉದ್ಯಮದ ಮೂಲಸೌಕರ್ಯಗಳ ಅಭಿವೃದ್ಧಿ, ಅಂತರ್ಗತತೆ ಮತ್ತು ಡಿಜಿಟಲ್ ಪ್ರವೇಶ, ಮತ್ತು ಓದುವ ಮೂಲಕ ಮಕ್ಕಳ ಸಬಲೀಕರಣ._
 
logoblog

Thanks for reading World Book and Copyright Day 2024

Previous
« Prev Post

No comments:

Post a Comment

If You Have any Doubts, let me Comment Here