VAO Important Updates
1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಈಗಾಗಲೇ ಅನೇಕರು ಅರ್ಜಿಯನ್ನು ಸಲ್ಲಿಸಿದ್ದೀರಿ. ಅರ್ಜಿ ಸಲ್ಲಿಸಿದ ನಂತ್ರ ಶುಲ್ಕ ಪಾವತಿಸಿದಂತ ಅನೇಕರು ಕೆಲ ಸಮಸ್ಯೆ ಎದುರಿಸುತ್ತಿದ್ದಾರೆ.
ಅದಕ್ಕೆ ಕೆಇಎ ಪರಿಹಾರ ನೀಡಿದ್ದು, ಆ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಇಂದು ಎಕ್ಸ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, VAO ಶುಲ್ಕ ಪಾವತಿಗೆ ಪರಿಹಾರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದ ನಂತರವೂ ಪಾವತಿ ಬಗ್ಗೆ ಅಪ್ ಡೇಟ್ ಆಗದಿದ್ದರೆ ಈ ವಿಳಾಸಕ್ಕೆ ಇ-ಮೇಲ್ (vaopayment@gmail.com) ಮಾಡುವುದು. ಅದಾದ ಎರಡು ದಿನಗಳ ನಂತರ ಆಪ್ ಡೇಟ್ ಆಗಲಿದೆ. ಬಳಿಕ ಅದರ ಪ್ರಿಂಟ್ ತೆಗೆದುಕೊಳ್ಳಬಹುದು ಎಂದಿದೆ.
ಅಂದಹಾಗೆ ದಿನಾಂಕ 05-04-2024ರ ಇಂದಿನಿಂದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಂಡಿದೆ. ದಿನಾಂಕ 04-05-2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದಿನಾಂಕ 07-05-2024 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ. http://kea.kar.nic.in ಈ ವೆಬ್ ಸೈಟ್ ವಿಳಾಸದಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
No comments:
Post a Comment
If You Have any Doubts, let me Comment Here