JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, April 20, 2024

UPSC Toppers Marks List 2023

  Jnyanabhandar       Saturday, April 20, 2024
UPSC Toppers Marks List 2023

ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC) ಆಯ್ಕೆಯಾಗುವುದು ಲಕ್ಷಾಂತರ ಜನರ ಕನಸು. ಆದರೆ ಇದನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ಲಕ್ಷಗಟ್ಟಲೆ ಜನ ಪ್ರಿಲಿಮ್ಸ್ (Prelims) ಬರೆದರೆ ನೂರಾರು ಮಂದಿ ಮಾತ್ರ ಸಿವಿಲ್ ಸೇವೆಗೆ (Civil Service) ಆಯ್ಕೆಯಾಗುತ್ತಾರೆ.

ಇದನ್ನು ಸಾಧಿಸಲು ಸಾಕಷ್ಟು ಪ್ರಯತ್ನ, ಪರಿಶ್ರಮ, ಕಠಿಣ ಪರಿಶ್ರಮ ಮತ್ತು ಸೂಕ್ತ ಯೋಜನೆ ಅಗತ್ಯವಿರುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಾಗರಿಕ ಸೇವಾ ಪರೀಕ್ಷೆ-2023 ರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ವಿವರಗಳನ್ನು ಬಹಿರಂಗಪಡಿಸಿದೆ. ಯುಪಿಯ ಆದಿತ್ಯ ಶ್ರೀವಾಸ್ತವ (Adithya Srivastav) ಪ್ರಥಮ ರ‍್ಯಾಂಕ್ ಪಡೆದರೆ, ಒಡಿಶಾದ ಅನಿಮೇಶ್ ಪ್ರಧಾನ್ ದ್ವಿತೀಯ ಹಾಗೂ ಪಾಲಮೂರಿನ ಡೋಣೂರು ಅನನ್ಯಾ ರೆಡ್ಡಿ ದೇಶದಲ್ಲೇ ತೃತೀಯ ರ‍್ಯಾಂಕ್‌ ಪಡೆದು ಸುದ್ದಿಯಾಗಿದ್ದರು. ಇದೀಗ ಟಾಪರ್‌ಗಳು ಪಡೆದಿರುವ ಈ ಅಂಕಗಳತ್ತಾ ಕಣ್ಣಾಡಿಸಿದರೆ ಸಿವಿಲ್ಸ್ ಪರೀಕ್ಷೆ ಎಷ್ಟು ಕಠಿಣ ಎಂಬುದು ಅರ್ಥವಾಗುತ್ತದೆ.

ಮೊದಲ 10 ಟಾಪರ್‌ಗಳು ಪಡೆದ ಅಂಕಗಳು 

ಸಿವಿಲ್ಸ್ ಪರೀಕ್ಷೆಯಲ್ಲಿ ಮೆಯನ್ಸ್ ಮತ್ತು ಸಂದರ್ಶನ ಸೇರಿ ಒಟ್ಟು 2025 ಅಂಕಗಳನ್ನು ಹೊಂದಿರುತ್ತದೆ. ಇದರಲ್ಲಿ 1750 ಅಂಕಗಳನ್ನು ಮೆಯಿನ್ಸ್/ಲಿಖಿತ ಪರೀಕ್ಷೆಗೆ ಮತ್ತು 275 ಅಂಕಗಳನ್ನು ಸಂದರ್ಶನಕ್ಕೆ ನಿಗದಿಪಡಿಸಲಾಗುತ್ತದೆ. 2023 ರ ಸಿವಿಲ್ಸ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುವ ಆದಿತ್ಯ ಶ್ರೀವಾಸ್ತವ ಅವರು ಒಟ್ಟು 1099 ಅಂಕಗಳನ್ನು ಗಳಿಸಿದ್ದಾರೆ. ಶ್ರೀವಾಸ್ತವ್ ಲಿಖಿತ ಪರೀಕ್ಷೆಯಲ್ಲಿ 899 ಮತ್ತು ಸಂದರ್ಶನದಲ್ಲಿ 200 ಗಳಿಸಿದ್ದಾರೆ ಎಂದು ಯುಪಿಎಸ್‌ಸಿ ಬಹಿರಂಗಪಡಿಸಿದೆ.

ಟಾಪ್ 10ರಲ್ಲಿರುವವರು

ಶ್ರೀವಾಸ್ತವ್ ನಂತರ ಎರಡನೇ ರ‍್ಯಾಂಕ್ ಪಡೆದ ಒಡಿಶಾದ ಅನಿಮೇಶ್ ಪ್ರಧಾನ್ 1067 ಅಂಕ (892, 175) ಗಳಿಸಿದ್ದಾರೆ. ಇನ್ನು ಮೊದಲ ಪ್ರಯತ್ನದಲ್ಲಿ ತೃತೀಯ ಸ್ಥಾನ ಪಡೆದ ತೆಲಂಗಾಣದ ಡೋಣೂರು ಅನನ್ಯ ರೆಡ್ಡಿ (ಇಡಬ್ಲ್ಯುಎಸ್ ಕೋಟಾ) 1065 ಅಂಕ (875, 190) ಪಡೆದಿದ್ದಾರೆ. ಪಿ.ಕೆ.ಸಿದ್ಧಾರ್ಥ್ ರಾಮ್‌ಕುಮಾರ್ 1059 ಅಂಕ (874, 185), ಹಾನಿ 1049 ಅಂಕ (856, 193), ಸೃಷ್ಟಿ ದಾಬಸ್ 1048 ಅಂಕ (862, 186), ಅನ್ಮೋಲ್ ರಾಥೋಡ್ 1045 (839, 206) ಮತ್ತು ಆಸಿಸ್ ಕುಮಾರ್ 1045 (866, 179), ನೌಶೀನ್ 1045 (863, 182) ಮತ್ತು ಐಶ್ವರ್ಯಂ ಪ್ರಜಾಪತಿ (ಒಬಿಸಿ ಕೋಟಾ) 1044 (890, 154) ಅಂಕಗಳನ್ನು ಪಡೆದು ಟಾಪ್ 10 ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಮೂರು ಹಂತಗಳ ಪರೀಕ್ಷೆ ಹೇಗಿತ್ತು

ಐಎಎಸ್, ಐಪಿಎಸ್, ಐಎಫ್‌ಎಸ್ ಇತ್ಯಾದಿ ಅಖಿಲ ಭಾರತದ ಅತ್ಯುನ್ನತ ಸೇವೆಗಳ ಆಯ್ಕೆಗಾಗಿ ಯುಪಿಎಸ್‌ಸಿ ಪ್ರತಿ ವರ್ಷ ಮೂರು ಹಂತಗಳಲ್ಲಿ ಸಿವಿಲ್ಸ್ ಪರೀಕ್ಷೆಯನ್ನು ನಡೆಸುತ್ತದೆ. ಪ್ರಿಲಿಮ್ಸ್, ಮೆಯಿನ್ಸ್ ಮತ್ತು ಸಂದರ್ಶನ ಸೇರಿ ಮೂರು ಹಂತಗಳಿವೆ. ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ-2023 ಕಳೆದ ವರ್ಷ ಮೇ 28 ರಂದು ನಡೆದಿತ್ತು. ಒಟ್ಟು 10,16,850 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ 5,92,141 ಮಂದಿ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 14,624 ಮಂದಿ ಮೆಯಿನ್ಸ್​ ಪರೀಕ್ಷೆ ಬರೆದಿದ್ದು, ಅಂತಿಮವಾಗಿ 2,855 ಮಂದಿ ಮಾತ್ರ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಇದರಲ್ಲಿ 1016 ಮಂದಿ ಮಾತ್ರ ಯುಪಿಎಸ್​ಸಿಗೆ ಯಶಸ್ವಿಯಾಗಿದ್ದಾರೆ.

ಕಟ್​ ಆಫ್ ಅಂಕಗಳ​ ವಿವಿರ

ಯುಪಿಎಸ್​ಸಿ ಸಿವಿಲ್ ಪರೀಕ್ಷೆಯ ಜಾತಿವಾರು ಕಟ್ ಆಫ್ ಮಾರ್ಕ್ಸ್​ ಲಿಸ್ಟ್​ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಜನರಲ್ ಕೆಟಗರಿಯವರು​ ಪ್ರಿಲಿಮ್ಸ್​ನಲ್ಲಿ ಶೇ. 75.41, ಒಬಿಸಿ 74.75, EWS (ಆರ್ಥಿಕವಾಗಿ ಹಿಂದುಳಿದ ವರ್ಗ) 68.02, ಎಸ್​ಸಿ 59.25, ಎಸ್​ಟಿ 47.82ಕ್ಕೆ ಕಟ್​ ಆಫ್​ ನಿಗಧಿ ಮಾಡಿತ್ತು.

ಮೆಯಿನ್ಸ್​ ಕಟ್​ ಆಫ್​ನಲ್ಲಿ ಜನರಲ್​ಗೆ 741, ಒಬಿಸಿಗೆ 712,EWS 706, ಎಸ್​ಸಿ 694 ಹಾಗೂ ಎಸ್​ಟಿ 692 ಅಂಕಗಳನ್ನ ನಿಗಧಿ ಮಾಡಲಾಗಿತ್ತು.

ಫೈನಲ್ ಫಲಿತಾಂಶದಲ್ಲಿ ಕಟ್​ ಆಫ್​ ಜನರಲ್​ಗೆ 953, ಒಬಿಸಿಗೆ 919, EWSಗೆ 923, ಎಸ್​ಸಿ 890, ಎಸ್​ಟಿ 891 ಅಂಕಗಳನ್ನ ನಿಗಧಿ ಮಾಡಲಾಗಿತ್ತು.
logoblog

Thanks for reading UPSC Toppers Marks List 2023

Previous
« Prev Post

No comments:

Post a Comment

If You Have any Doubts, let me Comment Here