Second PUC Hall Ticket 2024
ಏಪ್ರಿಲ್.29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭಗೊಳ್ಳಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣ, ಉತ್ತರ ಅಂಕ ಗಳಿಸೋದಕ್ಕೆ ಪರೀಕ್ಷೆ ರಿಜೆಕ್ಟ್ ಮಾಡಿರೋರು, ಪರೀಕ್ಷೆ ಬರೆಯದೇ ಇರೋರು ಈಗ ಪರೀಕ್ಷೆ-2ಕ್ಕೆ ಹಾಜರಾಗಿ ಬರೆಯಬಹುದಾಗಿದೆ.
ಈ ವಿದ್ಯಾರ್ಥಿಗಳಿಗಾಗಿ ಪ್ರವೇಶ ಪತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಶಾಲಾ ಪರೀಕ್ಷೆಗಳ ಇಲಾಖೆಯಿಂದ ಈ ಮಾಹಿತಿ ನೀಡಲಾಗಿದ್ದು, ಏಪ್ರಿಲ್.29ರಿಂದ ಆರಂಭಗೊಳ್ಳಲಿರುವಂತ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪ್ರವೇಶ ಪತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಇಲಾಖೆಯ ವೆಬ್ ಸೈಟ್ https://kseab.karnataka.gov.inಕ್ಕೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದೆ.
ಹೀಗೆ ಆನ್ ಲೈನ್ ನಲ್ಲೇ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಿ
ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡಿರುವಂತ ವಿದ್ಯಾರ್ಥಿಗಳು https://kseab.karnataka.gov.in ಜಾಲತಾಣಕ್ಕೆ ಭೇಟಿ ನೀಡಿ.
-ಈ ಮೇಲ್ಕಂಡ ಲಿಂಕ್ ಗೆ ಭೇಟಿ ನೀಡಿ, ದ್ವಿತೀಯ ಪಿಯುಸಿ ಪರೀಕ್ಷೆ-2ರ ಪ್ರವೇಶ ಪತ್ರ ಡೌನ್ ಲೋಡ್ ಎನ್ನುವಲ್ಲಿ ಕ್ಲಿಕ್ ಮಾಡಿ.
-ನೀವು ಈ ಬಳಿಕ ನಿಮಗೆ ನೀಡಲಾಗಿರುವಂತ ಹನ್ನೊಂದು ಅಂಕಿಗಳನ್ನೊಳಗೊಂಡ ನೋಂದಣಿ ಸಂಖ್ಯೆಯನ್ನು ನೀಡಬೇಕು.
-ಇದಾದ ನಂತ್ರ ನೀವು ನಿಮ್ಮ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ನಿಮ್ಮ ಬಳಿ ಹನ್ನೊಂದು ಅಂಕೆಯ ನೋಂದಣಿ ಸಂಖ್ಯೆ ಇಲ್ಲದಿದ್ದರೇ ಹೀಗೆ ಮಾಡಿ
ಒಂದು ವೇಳೆ ನಿಮಗೆ ಹನ್ನೊಂದು ಅಂಕಿಗಳನ್ನೊಳಗೊಂಡ ನೋಂದಣಿ ಸಂಖ್ಯೆಯನ್ನು ನೀಡದೇ ಇದ್ದರೇ, ನೀವು ನೇರವಾಗಿ ನಿಮ್ಮ ಕಾಲೇಜಿಗೆ ತೆರಳಿ, ಪ್ರಾಂಶುಪಾಲರನ್ನು ಭೇಟಿಯಾಗಿ, ನಿಮ್ಮ ಪ್ರವೇಶ ಪತ್ರವನ್ನು ಆಫ್ ಲೈನ್ ಮೂಲಕ ಪಡೆಯಬಹುದಾಗಿದೆ.
No comments:
Post a Comment
If You Have any Doubts, let me Comment Here