Subject: Regarding the transfer process for the year 2023-24...
2023-24ನೇ ಸಾಲಿನ ವರ್ಗಾವಣಾ ಪ್ರಕ್ರಿಯೆಯ ಭಾಗವಾಗಿ “ವಲಯ (ಕಡ್ಡಾಯ) ವರ್ಗಾವಣೆ (Zonal transfer)” ಗೆ ಅರ್ಹ ಇರುವ ಶಿಕ್ಷಕರ ತಾತ್ಕಾಲಿಕ ಪಟ್ಟಿಯನ್ನು ತಮ್ಮ BEO ಲಾಗಿನ್‌ನಲ್ಲಿ ಪ್ರಕಟಿಸಲಾಗಿದೆ.
ವಿನಾಯಿತಿ ಪಡೆಯಲು ಇಚ್ಛಿಸುವ ಶಿಕ್ಷಕರು ಕೆಳಕಂಡ ದಾಖಲೆಗಳೊಂದಿಗೆ 20/4/2024 ರೊಳಗೆ BEO ಕಚೇರಿಯನ್ನು ಸಂಪರ್ಕಿಸಲು ತಿಳಿಸಿರಿ
(ZONAL TRANSFER Exemptions)
ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹಳೇ ಕಾಯಿದೆ ಅನ್ವಯವೇ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಈ ಮೂಲಕ 2024ನೇ ಸಾಲಿನ ವರ್ಗಾವಣೆಗೆ ಚಾಲನೆ ನೀಡಿದೆ.
ನೂತನ ಶಿಕ್ಷಕರ ವರ್ಗಾವಣೆ ಕಾಯಿದೆ ಜಾರಿಗೊಳಿಸಿ, ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಶಿಕ್ಷಣ ಇಲಾಖೆ ಪ್ರಯತ್ನಿಸಿತ್ತು. ಆದರೆ, ಸಮಯದ ಅಭಾವದ ಹಿನ್ನೆಲೆಯಲ್ಲಿ ಇದೀಗ ಹಳೇ ಕಾಯಿದೆ ಮಾದರಿಯಲ್ಲೇ ವರ್ಗಾವಣೆ ನಡೆಸಲಿದ್ದು, ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಹಿನ್ನೆಲೆಯಲ್ಲಿಸದ್ಯ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿ, ನಂತರ ಕೌನ್ಸೆಲಿಂಗ್‌ಗೆ ದಿನಾಂಕ ನಿಗದಿಪಡಿಸಲು ಇಲಾಖೆ ನಿರ್ಧರಿಸಿದೆ.
ಶಿಕ್ಷಕರು ವರ್ಗಾವಣೆಯ ಅಧಿನಿಯಮ ಮತ್ತು ನಿಯಮಗಳನ್ನು ಎಲ್ಲಹಂತದ ವರ್ಗಾವಣಾ ಪ್ರಾಧಿಕಾರಿಗಳು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ಮಾರ್ಗಸೂಚಿಯಲ್ಲಿತಿಳಿಸಿರುವಂತೆ ಹಾಗೂ ಶಿಕ್ಷಕರ ವರ್ಗಾವಣೆ ಕಾಯಿದೆ/ನಿಯಮಗಳು-2020 ಮತ್ತು ತಿದ್ದುಪಡಿ 2022ರ ಪ್ರಕಾರ ಕ್ರಮವಹಿಸಲು ಸಕ್ಷಮ ಪ್ರಾಧಿಕಾರಕ್ಕೆ ಇಲಾಖೆಯು ಸೂಚಿಸಿದೆ.
ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ
ಈ ಅಧಿಸೂಚನೆಯು ತಾಂತ್ರಿಕ, ಆಡಳಿತಾತ್ಮಕ ಕಾರಣಗಳಿಂದಾಗಿ ವ್ಯತ್ಯಯಗಳುಂಟಾದಲ್ಲಿಅವಶ್ಯಕತೆಗೆ ಅನುಗುಣವಾಗಿ ವೇಳಾಪಟ್ಟಿಯಲ್ಲಿಬದಲಾವಣೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟಿರುತ್ತದೆ. ಇಲಾಖೆಯ ಅದೇಶಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು, ಪ್ರಸ್ತಾಪಿತ ವರ್ಗಾವಣಾ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಗೆ ಎಡೆಮಾಡಿಕೊಡದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ.
ಒಂದೊಮ್ಮೆ ಇಲಾಖಾ ಮಾರ್ಗಸೂಚಿಗಳನ್ನು ಉಲ್ಲಂಘಿಘಿಸಿ ಅರ್ಜಿಗಳ ಅನುಮೋದನೆ ಮತ್ತು ವರ್ಗಾವಣಾ ಕೌನ್ಸೆಲಿಂಗ್‌ನಲ್ಲಿಅಕ್ರಮಗಳು ಕಂಡುಬಂದಲ್ಲಿ ಅಂತಹ ಸಕ್ಷಮ ಪ್ರಾಧಿಕಾರದ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು,'' ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ. ಕಾವೇರಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಕರ ವರ್ಗಾವಣೆ ಸಂಬಂಧ ಸಕ್ಷಮ ಪ್ರಾಧಿಕಾರವನ್ನು ನಿಗದಿಪಡಿಸಲಾಗಿದೆ. ಶಿಕ್ಷಕರು ಯಾವುದೇ ಕುಂದು-ಕೊರತೆ ಇದ್ದಲ್ಲಿ, ಸಂಬಂಧಪಟ್ಟ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ.
ಮಾ.18ರಿಂದ ಆರಂಭ
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು ಅಧಿಕೃತವಾಗಿ ಮಾ.18ರಿಂದ ಆರಂಭವಾಗಲಿವೆ. ಶಾಲೆಗಳ ವಲಯಗಳ ಇಂದೀಕರಣಕ್ಕೆ ಮಾ.26ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‌ಸೈಟ್ ಸಂಪರ್ಕಿಸಬಹುದು. ಚುನಾವಣೆ ಮುನ್ನವೇ ವರ್ಗಾವಣೆಗೆ ಮಾಡಲು ಶಿಕ್ಷಣ ಇಲಾಖೆಯು ಅಧಿಸೂಚನೆ ಹೊರಡಿಸಿರುವುದಕ್ಕೆ ಶಿಕ್ಷಣ ಸಚಿವರಿಗೆ ಕರ್ನಾಟಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಭಿನಂದನೆ ಸಲ್ಲಿಸಿದೆ.
ಪ್ರಮುಖ ದಿನಾಂಕಗಳು
ವರ್ಗಾವಣೆ ಪೂರ್ವ ಭಾವಿ ಕ್ರಮಗಳು ಮಾ.18 ರಿಂದ ಏ.20
ವಲಯ ವರ್ಗಾವಣೆ ಕ್ರಮಗಳು ಏ.8 ರಿಂದ ಏ. 22
ನಿರ್ದಿಷ್ಟಪಡಿಸಿದ ಹುದ್ದೆಗಳ ಶಿಕ್ಷಕರ ವರ್ಗಾವಣೆ ಏ.8 ರಿಂದ ಏ.22
ಕೋರಿಕೆ/ಪರಸ್ಪರ ವರ್ಗಾವಣೆ ಏ.15 ರಿಂದ ಮೇ 31
ವರ್ಗಾವಣೆ ವಿಧ ಉಪ ಪರಿಮಿತಿ ಪರಿಗಣಿಸಬೇಕಾದ ವೃಂದ ಬಲ
ವಲಯ ವರ್ಗಾವಣೆ ಶೇ.4 ಶೈಕ್ಷಣಿಕ ತಾಲೂಕು
ಕೋರಿಕೆ ವರ್ಗಾವಣೆ (ಜಿಲ್ಲೆಒಳಗೆ) ಶೇ.7 ಶೈಕ್ಷಣಿಕ ಜಿಲ್ಲೆ
ಕೋರಿಕೆ ವರ್ಗಾವಣೆ (ವಿಭಾಗ ಒಳಗೆ) ಶೆ.2 ವಿಭಾಗ
ಕೋರಿಕೆ ವರ್ಗಾವಣೆ (ವಿಭಾಗ ಹೊರಗೆ) ಶೇ.2 ವಿಭಾಗ
ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು, ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು/ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಜೂನ್ 6ರಿಂದ ಆರಂಭಗೊಳ್ಳಲಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು, ಸರ್ಕಾರಿ ಪ್ರೌಢಶಾಲಾ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರು/ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಾಳೆಯಿಂದ ಆರಂಭಗೊಳ್ಳಲಿದೆ. ಇದಕ್ಕೆ ಸಂಬಂಧಪಟ್ಟಂತೆ ಸರಕಾರವು ಈಗಾಗಲೇ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 (2020ರ ಕರ್ನಾಟಕ ಅಧಿನಿಯಮ ಸಂಖ್ಯೆ: 04) ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು-2020ರ ನಿಯಮಗಳಂತೆ, ಹಾಗೂ ವರ್ಗಾವಣಾ ತಿದ್ದುಪಡಿ ಕಾಯ್ದೆ ಮತ್ತು ನಿಯಮ-2022ರ ಪ್ರಕಾರ ಉಲ್ಲೇಖ-1ರಲ್ಲಿ ಈಗಾಗಲೇ ಅಧಿಸೂಚನೆ ಸಹಿತ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸರ್ಕಾರದ ಆದೇಶದಂತೆ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ಇದೀಗ ಹೆಚ್ಚುವರಿ ಶಿಕ್ಷಕರ ಹಾಗೂ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆಯನ್ನು ಮುಂದುವರೆಸಲು ಸರ್ಕಾರವು ಅನುಮತಿಯನ್ನು ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಗಾವಣಾ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
ಪರಿಷ್ಕೃತ ವೇಳಾಪಟ್ಟಿಯಲ್ಲಿರುವ ಪ್ರಮುಖ 10 ಅಂಶಗಳು
ಹೆಚ್ಚುವರಿ ಶಿಕ್ಷಕರ ಪರಿಷ್ಕೃತ ಕರಡು ಪ್ರಕಟವಾಗುವ ದಿನಾಂಕ: ಜೂನ್ 6, 2023. ಪ್ರಾಥಮಿಕ ಮತ್ತು ಪ್ರೌಢಶಾಲ ಶಿಕ್ಷಕರ ವೃಂದಕ್ಕೆ ಅನ್ವಯ.
ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಆನ್‌ಲೈನ್‌ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ: ಜೂನ್ 6ರಿಂದ ಜೂನ್ 10ರವರೆಗೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದಕ್ಕೆ ಅನ್ವಯ. ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯವಾಗುವುದಿಲ್ಲ.
ಹೆಚ್ಚುವರಿ ಶಿಕ್ಷಕರು ಸಲ್ಲಿಸಿರುವ ಆಕ್ಷೇಪಣೆಯಲ್ಲಿನ ದಾಖಲೆಗಳ ಪರಿಶೀಲನೆ, ಅಂಗೀಕಾರ, ತಿರಸ್ಕಾರ: ಜೂನ್ 6ರಿಂದ ಜೂನ್ 13ರವರೆಗೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದಕ್ಕೆ ಅನ್ವಯ. ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯವಾಗುವುದಿಲ್ಲ.
ಅಂತಿಮ ತಾತ್ಕಾಲಿಕ ಆದ್ಯತಾ ಪಟ್ಟಿ ಪ್ರಕಟಿಸುವ ದಿನಾಂಕ: ಜೂನ್ 14, 2023. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದಕ್ಕೆ ಅನ್ವಯ. ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯವಾಗುವುದಿಲ್ಲ.
ಆದೇಶದಿಂದ ಭಾದಿತರಾದ ಶಿಕ್ಷಕರು ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ಸಂಪರ್ಕಿಸಲು ಅವಕಾಶ: ಜೂನ್ 15. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದಕ್ಕೆ ಅನ್ವಯ. ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯವಾಗುವುದಿಲ್ಲ.
ಆದೇಶದಿಂದ ಭಾದಿತರಾದ ಶಿಕ್ಷಕರು ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ಸಂಪರ್ಕಿಸಲು ಅವಕಾಶ: ಜೂನ್ 15. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದಕ್ಕೆ ಅನ್ವಯ. ಪ್ರೌಢಶಾಲಾ ಮುಖ್ಯಶಿಕ್ಷಕ ವೃಂದಕ್ಕೆ ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯವಾಗುವುದಿಲ್ಲ.
ಅಂತಿಮ ಆದ್ಯತಾ ಪಟ್ಟಿಗೆ ಸಲ್ಲಿಕೆಯಾಗುವ ಆಕ್ಷೇಪಣೆಗಳ ಪರಿಶೀಲನೆ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಿಸುವ ಪಟ್ಟಿಯಿಂದ ಭಾಧಿತರು ಸಲ್ಲಿಸಿರುವ ಮನವಿಯ ಇತ್ಯರ್ಥ: ಸಂಬಂಧಪಟ್ಟ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಆಯಾ ಕಚೇರಿ ಮುಖ್ಯಸ್ಥರು ಆಲಿಕೆ ದಿನಾಂಕ ಜೂನ್ 16ರಂದು ವಿಭಾಗೀಯ ಸಹ ನಿರ್ದೇಶಕರು ವ್ಯಾಪ್ತಿಯ ಉಪನಿರ್ದೇಶಕರೊಂದಿಗೆ ಸಮಾಲೋಚಿಸಿ, ಲಿಖಿತ ಸಮಜಾಯಿಷಿಯನ್ನು ಸಂಬಂಧಪಟ್ಟವರಿಗೆ ನೀಡತಕ್ಕದು.
ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ ಕೌನ್ಸಿಲಿಂಗ್‌ಗೆ ಅರ್ಹರಿರುವ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿ ಪ್ರಕಟ: ಜೂನ್ 17. ಕೌನ್ಸಿಲಿಂಗ್‌ಗೆ ಲಭ್ಯವಿರುವ ವೃಂದವಾರು ವಿಷಯವಾರು ಖಾಲಿ ಹುದ್ದೆಗಳ ಪ್ರಕಟಣೆ: ಜೂನ್ 17
ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಕೌನ್ಸಿಲಿಂಗ್: ಜೂನ್ 20, ಪೂರ್ವಾಹ್ನ(ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ), ಅಪರಾಹ್ನ (ಪ್ರೌಢಶಾಲಾ ಶಿಕ್ಷಕರ ವೃಂದ).
ಬ್ಲಾಕ್ ಹಂತದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆಯ ನಂತರ ತಾಲೂಕಿನಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದೆ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್: ಜೂನ್ 23. ಪೂರ್ವಾಹ್ನ(ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ), ಅಪರಾಹ್ನ (ಪ್ರೌಢಶಾಲಾ ಶಿಕ್ಷಕರ ವೃಂದ).
ಜಿಲ್ಲಾ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ನಂತರ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿಟಿಆರ್ ಪ್ರಕಾರ ಅತಿಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಾಣಿಕೆ: ಜೂನ್ 22. ಪೂರ್ವಾಹ್ನ(ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ), ಅಪರಾಹ್ನ (ಪ್ರೌಢಶಾಲಾ ಶಿಕ್ಷಕರ ವೃಂದ).
No comments:
Post a Comment
If You Have any Doubts, let me Comment Here