Karnataka TET Psychology Notes
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯುವ ಎಲ್ಲ ಅಭ್ಯರ್ಥಿಗಳಿಗೆ ಉಪಯುಕ್ತವಾದ ಮನೋ ವಿಜ್ಞಾನದ ನೋಟ್ಸ್ ಡೌನ್ಲೋಡ್ ಮಾಡಿಕೊಳ್ಳಲು TET ಪರೀಕ್ಷೆ ಮಾಹಿತಿಯನ್ನು ಓದಿಕೊಂಡು ಮಾಹಿತಿ ಕೆಳಗೆ ಇರುವ ನೋಟ್ಸ್ ಡೌನ್ಲೋಡ್ ಮಾಡಿಕೊಳ್ಳಿ.
2024ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ( KARTET-2024)ಯು ದಿನಾಂಕ 30-06-2024ರಂದು ರಾಜ್ಯಾಧ್ಯಂತ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ವೆಬ್ ಸೈಟ್ https://schooleducation.karnataka.gov.in ಜಾಲತಾಣಕ್ಕೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದು.
ಇದೇ ವೆಬ್ ಲಿಂಕ್ ನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-05-2024 ಆಗಿರುತ್ತದೆ ಎಂದು ಹೇಳಿದ್ದಾರೆ.
2024ರ ಕರ್ನಾಟಕ ಶಿಕ್ಷಕರ ಅರ್ಹತಾ (KARTET-2024) ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು
1. ಕೆ.ಎ.ಆರ್.ಟಿ.ಇ.ಟಿ-2024 ಪರೀಕ್ಷೆಗೆ ದಿನಾಂಕ:15/04/2024 ರಿಂದ 15/05/2024 ರವರೆಗೆ ಅರ್ಹ ಅಭ್ಯರ್ಥಿಗಳು https://schooleducation.karnataka.gov.in ಅರ್ಜಿ ಸಲ್ಲಿಸುವುದು.
2. ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಈ ಕೆಳಕಂಡ ಸೂಚನೆಗಳನ್ನು ತಪ್ಪದೇ ಓದಿಕೊಂಡು ನಂತರ ಭರ್ತಿ ಮಾಡುವುದು.
3. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:15/05/2024 ಆಗಿರುತ್ತದೆ.
4. ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಈ ಕಛೇರಿಯ ಸ್ಥಿರ ದೂರವಾಣಿ ಸಂಖ್ಯೆಗಳಾದ 080-22483140, 080-22228805, 080- 22483145 ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯುವುದು.
5. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸುವುದು.
6. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಸಮಯದಲ್ಲಿ ವಿದ್ಯುತ್ ಕಡಿತಗೊಂಡಲ್ಲಿ ಅಥವಾ ಇತರೆ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಮತ್ತೆ ಅರ್ಜಿಯನ್ನು ಭರ್ತಿ ಮಾಡುವ ಕಾರ್ಯವನ್ನು ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ.
7. ಅರ್ಜಿಯಲ್ಲಿ ಭರ್ತಿ ಮಾಡಿರುವ ಮಾಹಿತಿಗಳು ದೋಷಪೂರಿತ ಹಾಗೂ ತಪ್ಪು ಮಾಹಿತಿಗಳನ್ನು ಒಳಗೊಂಡಿದ್ದಲ್ಲಿ ಅಭ್ಯರ್ಥಿಗಳೇ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ.
8. ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ದಿನಾಂಕ:16/05/2024 ಬ್ಯಾಂಕ್ ಅವಧಿಯವರೆಗೆ ಅವಕಾಶ ಇರುತ್ತದೆ.
9. F ដ "ONLINE" INTERNET BANKING/CREDIT CARD /DEBIT CARD/WALLE20 ಅಥವಾ ಬ್ಯಾಂಕ್ ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಮಾತ್ರ ಚಲನ್ ಮೂಲಕ ಶುಲ್ಕ ಪಾವತಿಸುವುದು) ಮೂಲಕವೇ ಪಾವತಿಸತಕ್ಕದ್ದು.
10. ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸುವವರು ಚಲನ್ ಅನ್ನು ಡೌನ್ ಲೋಡ್ ಮಾಡಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕಿನಲ್ಲಿ ಅರ್ಜಿ ಶುಲ್ಕ ಪಾವತಿಸುವುದು. ಶುಲ್ಕ ಪಾವತಿಸಿದ ನಂತರ ಆನ್‌ಲೈನ್ ಅರ್ಜಿಯಲ್ಲಿ Challan No (ATRN) 0 GENERATE . Challan No (ATRN) ನಂಬರ್ GENERATE ಆಗಲು 24 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುವುದು. ನಂತರವಷ್ಟೇ ಅರ್ಜಿಯ Printout ತೆಗೆದುಕೊಳ್ಳುವುದು.
ವಿ.ಸೂ:ಅಭ್ಯರ್ಥಿಗಳು ಒಮ್ಮೆ ಶುಲ್ಕ ಪಾವತಿಸಿದ ನಂತರ ಕನಿಷ್ಟ 12 ಗಂಟೆ ಸಮಯ ಕಾಯಬೇಕು.
11. ಇನ್ಯಾವುದೇ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ. INTERNET Crash ಅನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆವಿಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು.
12. ಅಭ್ಯರ್ಥಿಯು ಅರ್ಜಿ ಶುಲ್ಕ ಪಾವತಿಸಿ, Submit ಮಾಡುವ ಮೊದಲು ತನ್ನ ಅರ್ಜಿಯಲ್ಲಿನ ಮಾಹಿತಿಗಳನ್ನು ತಿದ್ದುಪಡಿ ಮಾಡಬಹುದು, ಆದ್ದರಿಂದ ಅಭ್ಯರ್ಥಿಯು ಶುಲ್ಕ ಪಾವತಿಸಿ, Submit ಮಾಡುವ ಮೊದಲು ಅರ್ಜಿಯಲ್ಲಿನ ಮಾಹಿತಿಗಳನ್ನು ಜಾಗರೂಕತೆಯಿಂದ ಓದಿ ಭರ್ತಿಮಾಡಿ. ಸರಿಯಾಗಿ ನಮೂದಿಸಿರುವುದನ್ನು ಖಚಿತಪಡಿಸಿಕೊಂಡು Submit ಮಾಡುವುದು.
13. ಅಭ್ಯರ್ಥಿಯು ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು ಒಮ್ಮೆ Submit ಮಾಡಿದ ಮೇಲೆ ಯಾವುದೇ ಮಾಹಿತಿಗಳನ್ನು ಭರ್ತಿ ಮಾಡಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಈ ಸಂಬಂಧ ಅಭ್ಯರ್ಥಿಗಳಿಂದ ಯಾವುದೇ ಮನವಿಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಸ್ವೀಕರಿಸಲಾಗುವುದಿಲ್ಲ.
ಸೂಚನೆ: ಅಭ್ಯರ್ಥಿಯು ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸುವ ಸಂದರ್ಭದಲ್ಲಿ ಅರ್ಜಿ ಶುಲ್ಕವು ಅಭ್ಯರ್ಥಿಯ ಉಳಿತಾಯ ಖಾತೆಯಲ್ಲಿ DEBIT ಆಗಿ ಕೇಂದ್ರೀಕೃತ ದಾಖಲಾತಿ ಘಟಕದ ಬ್ಯಾಂಕ್ ಖಾತೆಗೆ ಜಮೆ ಆಗದೆ Transaction Failure ಆದಾಗ ಅರ್ಜಿಯ Printout ಬರುವುದಿಲ್ಲ ಇದಕ್ಕೆ ಈ ಕಛೇರಿಯು ಜವಾಬ್ದಾರಿಯಾಗಿರುವುದಿಲ್ಲ.
14. ಒಮ್ಮೆ ಪಾವತಿಸಿದ ಅರ್ಜಿಯ ಶುಲ್ಕವನ್ನು ಯಾವುದೇ ಕಾರಣಗಳಿಗೂ ಹಿಂದಿರುಗಿಸಲಾಗುವುದಿಲ್ಲ ಅಥವಾ ಹೊಂದಾಣಿಕೆ ಮಾಡಲಾಗುವುದಿಲ್ಲ.
15. ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್ ಲೋಡ್ ಮಾಡಬೇಕು. ಇದರೊಂದಿಗೆ ಶುಲ್ಕ ವಿನಾಯಿತಿ ಬಯಸಿ ಅರ್ಜಿ ಸಲ್ಲಿಸುವ ವಿಕಲಚೇತನ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ PH Cetificate ನ್ನು ತಪ್ಪದೆ ಸ್ಕ್ಯಾನ್ (JPEG Format Below 500KB) ಮಾಡಿ ಅಪ್‌ಲೋಡ್ ಮಾಡಬೇಕು. ಇಲ್ಲದಿದ್ದಲ್ಲಿ ವಿಕಲಚೇತನ ಅಭ್ಯರ್ಥಿ ಎಂದು ಪರಿಗಣಿಸಲಾಗುವುದಿಲ್ಲ.
16. Online ಅರ್ಜಿಯ ಮೂಲಕ ನೀಡಿರುವ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಗಳ ಪರೀಕ್ಷೆಯನ್ನು ಬರೆಯುವ ಅರ್ಹತೆ, ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಪರೀಕ್ಷೆಯಲ್ಲಿ ಅರ್ಹತೆ ಗೊಂಡಲ್ಲಿ ಅರ್ಹತಾ ಪ್ರಮಾಣ ಪತ್ರವನ್ನು ನಿರ್ಧರಿಸುವುದರಿಂದ ಯಾವುದೇ ಹಂತದಲ್ಲಿ ಅಪೂರ್ಣ / ಅಸ್ಪಷ್ಟ / ತಪ್ಪು ಮಾಹಿತಿ ನೀಡಿದಲ್ಲಿ ಅಭ್ಯರ್ಥಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ.
17. Online ಅರ್ಜಿಯಲ್ಲಿ ಮೀಸಲಾತಿ ಸೌಲಭ್ಯಕ್ಕಾಗಿ ಇರುವ ಅಂಕಣವನ್ನು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು, ಅಂಕಣವನ್ನು ಖಾಲಿ ಬಿಟ್ಟಲ್ಲಿ ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗುವುದು. ನಂತರ ಯಾವುದೇ ಹಂತದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಮಾಹಿತಿಗಳ ಸೇರ್ಪಡೆ ಮತ್ತು ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.
18. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಮುಂದಿನ ಉಪಯೋಗಕ್ಕಾಗಿ ಸಂರಕ್ಷಿಸಿ ಇಟ್ಟುಕೊಳ್ಳುವುದು.
19. ಮುದ್ರಿತ ಅರ್ಜಿಯು ಒಂದು ವೇಳೆ ಕಳೆದು ಹೋದಲ್ಲಿ ಮೇಲೆ ತಿಳಿಸಿದ ವೆಬ್‌ಸೈಟ್‌ನಲ್ಲಿ ನಿಮ್ಮ "User ID and Password" ಗಳನ್ನು ಭರ್ತಿ ಮಾಡಿ ಪ್ರತಿಯನ್ನು ಪಡೆದುಕೊಳ್ಳಬಹುದು.
TET ಪರೀಕ್ಷೆಗೆ ಸಂಬಂಧಿಸಿದ ಮನೋ ವಿಜ್ಞಾನದ ವಿಷಯದ ನೋಟ್ಸ್ ಡೌನ್ಲೋಡ್ ಮಾಡಿಕೊಳ್ಳಲು ಚಿತ್ರದ ಕೆಳಗೆ ಇರುವ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here