Karnatak CET Hall Ticket 2024
ಕರ್ನಾಟಕ ಸಿಇಟಿ 2024ರ
ಪರೀಕ್ಷೆ ಏಪ್ರಿಲ್ 18, 19ರಂದು ಮತ್ತು ಕನ್ನಡ ಬಾಷಾ ಪರೀಕ್ಷೆ ಏಪ್ರಿಲ್ 20 ರಂದು ನಡೆಯಲಿದೆ. ಸಿಇಟಿ 2024ರ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು (ಏಪ್ರಿಲ್ 3) ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ 2024-25ನೇ ಸಾಲಿನ ಇಂಜಿನಿಯರಿಂಗ್ ಹಾಗೂ ಇತರೆ ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕರ್ನಾಟಕ ಸಿಇಟಿ) ಯನ್ನು ನಡೆಸುತ್ತದೆ.
ಈ ಮೊದಲು ಕರ್ನಾಟಕ ಸಿಇಟಿಯನ್ನು ಏಪ್ರಿಲ್ 20, 21 ಕ್ಕೆ ನಡೆಸುವುದಾಗಿ ಪ್ರಾಧಿಕಾರ ಘೋಷಿಸಿತ್ತು. ಗಡಿನಾಡ ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಏಪ್ರಿಲ್ 19ಕ್ಕೆ ನಿಗದಿ ಮಾಡಿತ್ತು. ಆದರೆ, ಏಪ್ರಿಲ್ 21ರಂದೇ ರಕ್ಷಣಾ ಇಲಾಖೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಎನ್‌ಡಿಎ ಪರೀಕ್ಷೆಯೂ ಇದೆ ಎಂಬುದು ಮನವರಿಕೆಯಾಗುತ್ತಿದ್ದಂತೆ ಸಿಇಟಿ ವೇಳಾಪಟ್ಟಿಯನ್ನು ಪರಿಷ್ಕರಿಸಿತು.
ಕೆಸಿಇಟಿ 2024ರ ವೇಳಾಪಟ್ಟಿ
ಏಪ್ರಿಲ್ 18 - ಬೆಳಿಗ್ಗೆ 10-30 ರಿಂದ ಜೀವಶಾಸ್ತ್ರ ಮಧ್ಯಾಹ್ನ 2.30 ರಿಂದ ಗಣಿತ,
ಏಪ್ರಿಲ್ 19 - ಬೆಳಿಗ್ಗೆ 10-30 ರಿಂದ ಭೌತಶಾಸ್ತ್ರ ಮಧ್ಯಾಹ್ನ ರಸಾಯನ ಶಾಸ್ತ್ರ
ಏಪ್ರಿಲ್ 20 - ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಭಾಷಾ ಪರೀಕ್ಷೆ
ಕರ್ನಾಟಕ ಸಿಇಟಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೀಗೆ
ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ (http://kea.kar.nic.in) ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
1) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ (http://kea.kar.nic.in) ಗೆ ಭೇಟಿ ನೀಡಿ
2) ಅಡ್ಮಿಷನ್ ಟಿಕೆಟ್ ಡೌನ್‌ಲೋಡಲು ನಿಗದಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
3) ಆಗ ತೆರೆದುಕೊಳ್ಳುವ ಪುಟದಲ್ಲಿ ಅರ್ಜಿ ಸಂಖ್ಯೆ, ಅರ್ಜಿದಾರರ ಮೊದಲ ಹೆಸರು (ಮೊದಲ ಐದು ಅಕ್ಷರಗಳು) ಮತ್ತು ಜನ್ಮ ದಿನಾಂಕ ನಮೂದಿಸಬೇಕು.
4) ಆಗ ಸಿಇಟಿ 2024ರ ಪ್ರವೇಶ ಪತ್ರ ತೆರೆದುಕೊಳ್ಳುತ್ತದೆ.
5) ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು, ಪರೀಕ್ಷೆಯ ಸಂದರ್ಭದ ಬಳಕೆಗಾಗಿ ಪ್ರಿಂಟ್ ತೆಗೆದು ಇರಿಸಿಕೊಳ್ಳಬಹುದು.
ಸಿಇಟಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರದ ಸೂಚನೆ
ಪ್ರವೇಶ ಪತ್ರದ ಜೊತೆಯಲ್ಲಿ ಅಭ್ಯರ್ಥಿಗಳಿಗೆ ನೀಡಲಾಗಿರುವ ಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಹಾಗು ಮಾರ್ಗದರ್ಶನಗಳನ್ನು / ಕಾರ್ಯವಿಧಾನಗಳನ್ನು ತಪ್ಪದೆ ಅನುಸರಿಸಲು ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ, ನಿಗದಿತ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕು ಎಂದು ಅದು ಹೇಳಿದೆ.
ಹೊರನಾಡು ಮತ್ತು ಗಡಿನಾಡು, ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.
No comments:
Post a Comment
If You Have any Doubts, let me Comment Here