Circular Regarding Deduction of Compulsory Life Insurance Premiums in Pay Bills.
ಕರ್ನಾಟಕ ಸರ್ಕಾರಿ ಜೀವ ವಿಮೆ ವೇತನ ಬಿಲ್ಲುಗಳಲ್ಲಿ ಕಡ್ಡಾಯ ಜೀವ ವಿಮೆ ಕಂತುಗಳನ್ನು ಕಡಿತಗೊಳಿಸುವ ಕುರಿತು. ಆದೇಶವನ್ನು ಹೊರಡಿಸಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ನಿರ್ದೇಶಕರು, ಕರ್ನಾಟಕ ಸರ್ಕಾರಿ ಜೀವ ವಿಮೆ ಇಲಾಖೆ, ಇವರು ಉಲ್ಲೇಖಿತ ಪತ್ರದಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8 ರಂತೆ ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರ/ಅಧಿಕಾರಿಯು, ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇ 6.25 ರಷ್ಟು ಮಾಸಿಕ ವಿಮಾ ಕಂತಿಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯವಾಗಿ ಜೀವವಿಮ ಪಡೆಯಬೇಕಿರುತ್ತದೆ.
ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 6 (i) ರನ್ವಯ 50 ವರ್ಷ ವಯಸ್ಸು ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಜೀವ ವಿಮಾ ಪಾಲಿಸಿಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಿರುತ್ತಾರೆ.
2. ಈ ಪ್ರಕಾರ ಪರಿಶೀಲಿಸಲಾಗಿ ದಿನಾಂಕ 31-03-2024 ರ ಅಂತ್ಯಕ್ಕೆ 50 ವರ್ಷ ವಯಸ್ಸು ಪೂರ್ಣಗೊಂಡಿರುವ ನೌಕರರನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಸುಮಾರು 72,754 ಅಧಿಕಾರಿ/ನೌಕರರು ಕಡ್ಡಾಯ ಜೀವ ವಿಮಾ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಸರಾಸರಿ ವೇತನದ ಕನಿಷ್ಠ ಶೇ 6.25 ರಷ್ಟು ಮಾಸಿಕ ವಿಮಾ ಕಂತಿಗೆ ವಿಮಾ ಇಲಾಖೆಯಲ್ಲಿ ಜೀವ ವಿಮೆ ಪಡೆಯದೇ ಇರುವುದು ಕಂಡುಬಂದಿರುವುದಾಗಿ ಸಹ ತಿಳಿಸಿರುತ್ತಾರೆ. ಈ ಕುರಿತು ವಿವರಗಳು ಕೆಜಿಐಡಿ ವೆಬ್‌ಸೈಟ್ https://kgidonline.karnataka.gov.in/kgid- note ನಲ್ಲಿ ಲಭ್ಯವಿರುವುದಾಗಿ ತಿಳಿಸಿರುತ್ತಾರೆ.
3. ಮೇಲ್ಕಂಡ ಅಂಶದ ಹಿನ್ನೆಲೆಯಲ್ಲಿ, ಈಗಾಗಲೇ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವವಿಮಾ ನಿಯಮಾವಳಿಗಳ ನಿಯಮ 8 ನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಕರ್ನಾಟಕ ಆರ್ಥಿಕ ಸಂಹಿತ ಅನುಚ್ಛೇದ 26 (1) ಮತ್ತು ಕರ್ನಾಟಕ ಖಜಾನ ಸಂಹಿತೆಯ ಅನುಚ್ಛೇದ 87 (1) ರಲ್ಲಿ ಅವಕಾಶವಿರುವಂತ, ಕಡ್ಡಾಯ ಜೀವ ವಿಮಾ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿರುವಷ್ಟು ಶೇಕಡಾವಾರು ವಿಮಾ ಕಂತನ್ನು ನೌಕರರ ವೇತನದಲ್ಲಿ ಕಟಾವಣೆ ಮಾಡಿರುವ ಬಗ್ಗೆ ವೇತನ ಬಿಲ್ಲುಗಳನ್ನು ತೀರ್ಣಗೊಳಿಸುವಾಗ ಖಜಾನ ಅಧಿಕಾರಿಗಳು ಖಚಿತಪಡಿಸಿಕೊಳ್ಳುವಂತೆ ಸೂಚಿಸಲು ಸಹ ಕೋರಿರುತ್ತಾರೆ.
4. ಈ ಕುರಿತು ಖಜಾನೆಗಳಲ್ಲಿ ವೇತನ ಬಿಲ್ಲುಗಳನ್ನು ಪಾವತಿಗಾಗಿ ತೀರ್ಣಗೊಳಿಸುವಾಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8 ರಂತೆ, ಪ್ರತಿಯೊರ್ವ ಅರ್ಹ ಅಧಿಕಾರಿ/ಸಿಬ್ಬಂದಿಗಳಿಂದ ಕನಿಷ್ಠ ವಿಮಾ ಕಂತನ್ನು ಕಡಿತಗೊಳಿಸಿರುವ ಕುರಿತು ಖಚಿತಪಡಿಸಿಕೊಳ್ಳುವಂತೆ, ಒಂದು ವೇಳೆ ಕಡಿತಗೊಳಿಸದೆ ಅಥವಾ ಕಡಿಮೆ ಕಡಿತಗೊಳಿಸಿದ್ದಲ್ಲಿ ಬಿಲ್ಲನ್ನು ಆಕ್ಷೇಪಿಸಿ ಹಿಂದುರುಗಿಸುವಂತೆ
ಸೂಚಿಸಿದೆ.
5. ಮೇಲ್ಕಂಡ ವೆಬ್‌ಸೈಟಿನಲ್ಲಿ ಪರಿಶೀಲಿಸಿದಾಗ, ಖಜಾನೆ ಇಲಾಖೆಯ 200 ಅಧಿಕಾರಿಗಳು/ಸಿಬ್ಬಂದಿಗಳ ಸರಾಸರಿ ವೇತನದ ಶೇ 6.25 ರಷ್ಟು ಕನಿಷ್ಠ ಮಾಸಿಕ ವಿಮಾ ಕಂತಿಗಿಂತ ಕಡಿಮೆ ಕಡಿತಗೊಳಿಸುತ್ತಿರುವುದು ಕಂಡುಬಂದಿರುತ್ತದೆ. ಈ ಕುರಿತು ಪರಿಶೀಲಿಸಿ ಕನಿಷ್ಠ ವಿಮಾ ಕಂತಿಗೆ ಪಾಲಿಸಿಯನ್ನು ಪಡೆದು ಕನಿಷ್ಠ ಕಂತನ್ನು ಕಡಿತಗೊಳಿಸುವ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದು ಅಂತ ತಿಳಿಸಿದೆ
No comments:
Post a Comment
If You Have any Doubts, let me Comment Here