RTE Admission Application 2024
ಶಿಕ್ಷಣ ಹಕ್ಕು ಕಾಯ್ದೆ(RTE) ಮೂಲಕ ಶಾಲೆಗಳ ಪ್ರವೇಶಕ್ಕೆ ಶಾಲಾ ಶಿಕ್ಷಣ ಇಲಾಖೆ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಕೆ ಲಿಂಕ್ ಬಿಡುಗಡೆ ಮಾಡಲಾಗಿದೆ.
ಒಂದರಿಂದ ಎಂಟನೇ ತರಗತಿ ಪ್ರವೇಶಕ್ಕೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಲು ಬಯಸುವ ಪೋಷಕರು ಆರ್‌ಟಿಇ ಕಾಯ್ದೆಯಡಿ ಅರ್ಜಿ ಸಲ್ಲಿಸಬಹುದು.
ಎಲ್‌ಕೆಜಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ ನಾಲ್ಕು ವರ್ಷ ಆಗಿರಬೇಕು. ಒಂದನೇ ತರಗತಿಗೆ ಸೇರಿಸುವ ಮಕ್ಕಳಿಗೆ ಕನಿಷ್ಠ ಐದು ವರ್ಷ ಐದು ತಿಂಗಳು ಹಾಗೂ ಗರಿಷ್ಠ 7 ವರ್ಷ ನಿಗದಿಪಡಿಸಲಾಗಿದೆ.
ಏಪ್ರಿಲ್ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 26ರಂದು ಅರ್ಜಿ ಪರಿಶೀಲನೆ ಬಳಿಕ ಲಾಟರಿ ಪ್ರಕ್ರಿಯೆಯಲ್ಲಿ ಅರ್ಹರ ಪಟ್ಟಿ ಬಿಡುಗಡೆ ಮಾಡಲಾಗುವುದು. 30ರಂದು ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದ್ದು, ಮೇ 13 ರೊಳಗೆ ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಬೇಕಿದೆ. www.sdcedn.karnataka.gov.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here