JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, March 16, 2024

Report of The 7th Pay Commission Summary Of Recommendations

  Jnyanabhandar       Saturday, March 16, 2024
Report of The 7th Pay Commission Summary Of Recommendationsಲೋಕಸಭಾ ಚುನಾವಣೆ 2024ಕ್ಕೆ (Lok sabha Election 2024) ಕ್ಷಣಗಣನೇ ಆರಂಭವಾಗಿದೆ. ಇಂದು ಸಂಜೆ ವೇಳೆ ಕೇಂದ್ರ ಚುನಾವಣಾ ಸಂಸ್ಥೆ (Election Commission of India ) ದಿನಾಂಕವನ್ನು ಘೋಷಣೆ ಮಾಡಲಿದೆ. ಇದರ ನಡುವೆಯೇ ರಾಜ್ಯ ಸರ್ಕಾರಕ್ಕೆ ಏಳನೇ ವೇತನ ಆಯೋಗದ (7th Pay Commission) ವರದಿ ಸಲ್ಲಿಕೆ ಆಗಿದ್ದು, ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ (Good News) ಸಿಗುತ್ತಾ ಎಂಬ ಕುತೂಹಲ ಎದುರಾಗಿದೆ.

ಇಂದು ಸುಧಾಕರ್ ರಾವ್ ನೇತೃತ್ವದ ಆಯೋಗದ ವರದಿಯನ್ನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಲ್ಲಿಕೆ ಮಾಡಲಾಗಿದೆ. ಈ ವೇಳೆ ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ , ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾ ಡಾ.ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.

7ನೇ ವೇತನ ಆಯೋಗದ ವರದಿ ಸ್ವೀಕರಕರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಏಳನೇ ವೇತನ ಆಯೋಗದ ವರದಿ ಸ್ವೀಕರಿಸಿದ್ದೇವೆ, ಆರ್ಥಿಕ ಇಲಾಖೆಯವರು ಪರಿಶೀಲನೆ ನಡೆಸಲಿದ್ದಾರೆ. ಏನು ಸಲಹೆ ಕೊಡ್ತಾರೆ ಅದರ ಮೇಲೆ ಸರ್ಕಾರ ತೀರ್ಮಾನ ಮಾಡಲಿದೆ. ಕನಿಷ್ಠ ಮೂಲ ವೇತನ 17,000 ದಿಂದ 27,000ಕ್ಕೆ ಪರಿಷ್ಕರಣೆ ಮಾಡಲು ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಪರಿಶೀಲನೆಯಾಗಬೇಕು, ಆನಂತರ ನಾವು ತೀರ್ಮಾನ ಮಾಡ್ತೇವೆ. ಚುನಾವಣಾ ಆಯೋಗ ಇಂದು 3 ಗಂಟೆಗೆ ಸುದ್ದಿಗೋಷ್ಠಿ ಮಾಡಲಿದೆ, ಏನು ಹೇಳ್ತಾರೊ ಗೊತ್ತಿಲ್ಲ. ಮಧ್ಯಂತರ ವರದಿಯ ಶೇಕಡಾ 17 ರಷ್ಟು ವೇತನ ಹೆಚ್ಚಳ ಮುಂದುವರೆಯಲಿದೆ. ಸುಧಾಕರ್ ರಾವ್ ಆಯೋಗ ಶೇಕಡಾ 27.5 ರಷ್ಟು ಹೆಚ್ಚಳ ಶಿಫಾರಸ್ಸು ಮಾಡಿದೆ. ಆರ್ಥಿಕ ಇಲಾಖೆಯ ಪರಿಶೀಲನೆ ಬಳಿಕ ಅವರ ಸಲಹೆಯಂತೆ ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವೇತನ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು. ಈ ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದೆ. ನಿನ್ನೆ ನಾನು ಮೈಸೂರಿನಲ್ಲಿದ್ದ ಕಾರಣ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಇಂದು ವರದಿಯನ್ನು ಸ್ವೀಕರಿಸಲಾಗಿದೆ. ವರದಿಯಲ್ಲಿ ಕನಿಷ್ಠ ಮೂಲವೇತನವನ್ನು 17000 ರೂ ಗಳಿಂದ 27 ಸಾವಿರ ರೂಗಳಿಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಇನ್ನೂ ಅನೇಕ ಶಿಫಾರಸುಗಳಿದ್ದು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗಿದೆ. ಆರ್ಥಿಕ ಇಲಾಖೆಯು ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

How download file: click on given link start to download.

Where to click for download: after the given image, below there is a link which was mentioned as "Click to download "

How to find single page information: Click on the image, which was uploaded below the text, then magnifying that images to read, if you need to further use please download it.Click Here To Watch CM Press meet Video

logoblog

Thanks for reading Report of The 7th Pay Commission Summary Of Recommendations

Previous
« Prev Post

No comments:

Post a Comment

If You Have any Doubts, let me Comment Here