JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, March 29, 2024

KSET exam Revised Final Key Answers 2023

  Jnyanabhandar       Friday, March 29, 2024
KSET exam Revised Final Key Answers 2024


ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ವರ್ಷದ ಜನವರಿಯಲ್ಲಿ ನಡೆಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET 2023)ಯ ಪರಿಷ್ಕೃತ ಕೀ ಉತ್ತರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಜನವರಿ 13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ 42 ವಿವಿಧ ವಿಷಯಗಳ ಪರೀಕ್ಷೆ ನಡೆಸಿತ್ತು.

ಇದಕ್ಕೆ ಸಂಬಂಧಿಸಿದ ಕೀ ಉತ್ತರಗಳನ್ನು ಜನವರಿ 29ರಂದು ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 7ರ ತನಕ ಅವಕಾಶ ನೀಡಿತ್ತು. ಬಳಿಕ ಕೆಲವು ಅಭ್ಯರ್ಥಿಗಳು ದಿನಾಂಕವನ್ನು ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಲಾವಕಾಶವನ್ನು ಫೆಬ್ರವರಿ 17ರ ತನಕ ಮುಂದೂಡಲಾಗಿತ್ತು.

ಅದರಂತೆ ಪರೀಕ್ಷಾ ಪ್ರಾಧಿಕಾರಕ್ಕೆ 23 ಪತ್ರಿಕೆಗಳ ಆಯ್ದ ಕೀ ಉತ್ತರಗಳಿಗೆ ಮಾತ್ರ ಆಕ್ಷೇಪಣೆ ಸಲ್ಲಿಕೆಯಾಗಿದ್ದವು. ಬಳಿಕ ವಿಷಯ ತಜ್ಞರು ಒಟ್ಟು 22 ಪತ್ರಿಕೆಗಳ ಕೆಲವು ಉತ್ತರಗಳಿಗೆ ಬದಲಾವಣೆ ಸೂಚಿಸಿದ್ದರು. ಇನ್ನು ಒಂದು ಪತ್ರಿಕೆಯಲ್ಲಿನ ಆಕ್ಷೇಪಣೆಗೆ ಯಾವುದೇ ಬದಲಾವಣೆ ತಂದಿಲ್ಲ. ಅಲ್ಲದೆ ಉಳಿದ 19 ಪತ್ರಿಕೆಗಳಿಗೆ ಯಾವುದೇ ಆಕ್ಷೇಪಣೆ ಕಂಡು ಬರದ ಹಿನ್ನೆಲೆಯಲ್ಲಿ ಕೀ ಉತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ.

"ಆಕ್ಷೇಪಣೆ ವ್ಯಕ್ತವಾದ 23 ಪತ್ರಿಕೆಗಳ ಪ್ರಶ್ನೆಗಳನ್ನು ವಿಷಯ ತಜ್ಞರು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಆ ಪೈಕಿ ಮನಃಶಾಸ್ತ್ರ ವಿಷಯವನ್ನು ಹೊರತುಪಡಿಸಿ ಉಳಿದ 22 ಪತ್ರಿಕೆಗಳ ಪರಿಷ್ಕೃತ ಕೀ ಉತ್ತರಗಳನ್ನು ಈಗ ಪಕ್ರಟಿಸಲಾಗಿದೆ" ಎಂದು ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಪರಿಷ್ಕೃತ ಕೀ ಉತ್ತರಗಳನ್ನೂ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ

Kea ವೆಬ್‌ಪೇಜ್‌ನ ಮೇಲ್ಭಾಗದಲ್ಲಿರುವ 'ಪ್ರವೇಶʼ ಆಯ್ಕೆಯನ್ನು ಕ್ಲಿಕ್‌ ಮಾಡಿ.

ಬಳಿಕ ʼಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2023' ಆಯ್ಕೆ ಮೇಲೆ ಕ್ಲಿಕ್ ಮಾಡಿ.

ನಂತರ ತೆರೆದ ವೆಬ್‌ಪೇಜ್‌ನಲ್ಲಿ ಕಂಡುಬರುವ 'KSET ಪರಿಷ್ಕೃತ ಕೀ ಉತ್ತರಗಳು' ಆಯ್ಕೆಯನ್ನು ಕ್ಲಿಕ್ ಮಾಡಿ.

ಆಗ ವಿಷಯವಾರು ಪರಿಷ್ಕೃತ ಕೀ ಉತ್ತರಗಳ ಲಿಂಕ್ ಕಂಡು ಬರುತ್ತದೆ.

ನೀವೂ ನೋಡಲು ಇಚ್ಛಿಸುವ ವಿಷಯದ ಕೀ ಉತ್ತರದ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

ತೆರೆದುಕೊಳ್ಳುವ ಪಿಡಿಎಫ್‌ ಪುಟದಲ್ಲಿ ಕೀ ಉತ್ತರ ಪರಿಶೀಲಿಸಿಕೊಳ್ಳಬಹುದು.

ಬೆಂಗಳೂರು ನಗರ ಸೇರಿದಂತೆ ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗೆ ಒಟ್ಟು 1,17,302 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಈ ಪೈಕಿ ವಾಣಿಜ್ಯಶಾಸ್ತ್ರದ ಪರೀಕ್ಷೆಯನ್ನು ಅತಿ ಹೆಚ್ಚು ಅಂದರೆ 16,000 ಜನ ತೆಗೆದುಕೊಂಡಿದ್ದರು. ಕನ್ನಡ ವಿಷಯವನ್ನು 11 ಸಾವಿರ ಮಂದಿ ಆಯ್ದುಕೊಂಡಿದ್ದರು. ಅತಿ ಕಡಿಮೆ ಅಂದರೆ 25 ಜನ ಭಾಷಾಶಾಸ್ತ್ರದ ವಿಷಯದಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಪರೀಕ್ಷೆ ಬರೆದ ಒಟ್ಟು ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಅಂಕ ಪಡೆದ ಶೇ. 6 ಆಕಾಂಕ್ಷಿಗಳಿಗೆ ಅಂತಿಮವಾಗಿ ಕೆಸೆಟ್ ಪರೀಕ್ಷೆಯ ಅರ್ಹತೆ ಸಿಗಲಿದೆ. ಇದರಲ್ಲಿ ರೋಸ್ಟರ್ ನಿಯಮಗಳನ್ನು ಪಾಲಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

How download file: click on given link start to download.

Where to click for download: after the given image, below there is a link which was mentioned as "Click to download "

How to find single page information: Click on the image, which was uploaded below the text, then magnifying that images to read, if you need to further use please download it.

URDU ಪರಿಷ್ಕೃತ ಕೀ ಉತ್ತರಗಳು.

TOURISM ಪರಿಷ್ಕೃತ ಕೀ ಉತ್ತರಗಳು.

SOCIALOGY ಪರಿಷ್ಕೃತ ಕೀ ಉತ್ತರಗಳು.

SOCIAL WORK ಪರಿಷ್ಕೃತ ಕೀ ಉತ್ತರಗಳು.

POLITICAL SCIENCE ಪರಿಷ್ಕೃತ ಕೀ ಉತ್ತರಗಳು.

PHYSICAL SCIENCE ಪರಿಷ್ಕೃತ ಕೀ ಉತ್ತರಗಳು.

PHYSICAL EDUCATION ಪರಿಷ್ಕೃತ ಕೀ ಉತ್ತರಗಳು.

MATHEMATICAL SCIENCE ಪರಿಷ್ಕೃತ ಕೀ ಉತ್ತರಗಳು.

 MANAGEMENT ಪರಿಷ್ಕೃತ ಕೀ ಉತ್ತರಗಳು.

 LIFE SCIENCE ಪರಿಷ್ಕೃತ ಕೀ ಉತ್ತರಗಳು.

 LAW ಪರಿಷ್ಕೃತ ಕೀ ಉತ್ತರಗಳು.

 KANNADA ಪರಿಷ್ಕೃತ ಕೀ ಉತ್ತರಗಳು

 HISTORY ಪರಿಷ್ಕೃತ ಕೀ ಉತ್ತರಗಳು

 HINDI ಪರಿಷ್ಕೃತ ಕೀ ಉತ್ತರಗಳು

 GEOGRAPHY ಪರಿಷ್ಕೃತ ಕೀ ಉತ್ತರಗಳು

 GENERAL PAPER ಪರಿಷ್ಕೃತ ಕೀ ಉತ್ತರಗಳು

 ENGLISH ಪರಿಷ್ಕೃತ ಕೀ ಉತ್ತರಗಳು

 ECONOMICS ಪರಿಷ್ಕೃತ ಕೀ ಉತ್ತರಗಳು

 EARTH SCIENCE ಪರಿಷ್ಕೃತ ಕೀ ಉತ್ತರಗಳು

 COMPUTER SCIENCE ಪರಿಷ್ಕೃತ ಕೀ ಉತ್ತರಗಳು

 COMMERCE ಪರಿಷ್ಕೃತ ಕೀ ಉತ್ತರಗಳು

 CHEMICAL SCIENCE ಪರಿಷ್ಕೃತ ಕೀ ಉತ್ತರಗಳು

logoblog

Thanks for reading KSET exam Revised Final Key Answers 2023

Previous
« Prev Post

No comments:

Post a Comment

If You Have any Doubts, let me Comment Here