JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, March 30, 2024

Karnataka 1st PUC Result 2024

  Jnyanabhandar       Saturday, March 30, 2024
Karnataka 1st PUC Result 2024

The KSEAB 1st PUC result will be declared on March 30, 2024, on the official websites. Students can check their Karnataka PUC result 2024 at karresults.nic.in.

ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ(KSEAB) ಯು 2023-24 ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಮಾರ್ಚ್‌ 30ರ ಶನಿವಾರದಂದು ಪ್ರಕಟಿಸಲಿದೆ. ಮಂಡಳಿಯ ವೆಬ್‌ಸೈಟ್‌ karresults.nic.inನಲ್ಲಿ ಫಲಿತಾಂಶಗಳು ಅಂದು ಬೆಳಿಗ್ಗೆ 9ರಿಂದ 11 ರೊಳಗೆ ಪ್ರಕಟವಾಗಲಿದ್ದು, ರೋಲ್‌ ನಂಬರ್‌ ಆಧರಿಸಿ ಫಲಿತಾಂಶಗಳನ್ನು ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ವೀಕ್ಷಣೆಗೆ ಅವಕಾಶವಿದೆ.

ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯು ಈ ಬಾರಿಯ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ಫೆಬ್ರವರಿ 12 ರಿಂದ 27 ರವರೆಗೆ ನಡೆಸಿತ್ತು. ಕರ್ನಾಟಕದಲ್ಲಿ ಏಕಕಾಲಕ್ಕೆ ಪ್ರಥಮ ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಪರೀಕ್ಷೆಗಳನ್ನು ಎದುರಿಸಿದ್ದರು.

ಈ ಪರೀಕ್ಷೆಗಳ ಮೌಲ್ಯಮಾಪನವೂ ಮುಗಿದಿದ್ದು, ಫಲಿತಾಂಶವನ್ನು ಈ ಬಾರಿ ಬೇಗನೇ ಪ್ರಕಟಿಸಲು ಮಂಡಳಿ ಮುಂದಾಗಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿಯೇ ಫಲಿತಾಂಶಗಳು ಲಭ್ಯವಾಗಲಿದ್ದು, ಮಾರ್ಚ್‌ 30ರಂದು ಮೊಬೈಲ್‌ ಮೂಲಕ ಇಲ್ಲವೇ ಇಂಟರ್‌ನೆಟ್‌ ಸೆಂಟರ್‌ಗಳು ಇಲ್ಲವೇ ಮನೆಯಲ್ಲಿಯೇ ಕುಳಿತು ನೆಟ್‌ನಲ್ಲಿ ವೀಕ್ಷಿಸಲು ಅವಕಾಶವಿದೆ.

ಅದೇ ದಿನ ಕಾಲೇಜುಗಳಲ್ಲಿಯು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕಾಲೇಜುಗಳಲ್ಲಿಯೂ ಫಲಿತಾಂಶಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು.

ಪ್ರತಿ ವರ್ಷ ಪ್ರಥಮ ಪಿಯುಸಿಯ ವಾರ್ಷಿಕ/ ಸಪ್ಲಿಮೆಂಟರಿ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಪದವಿಪೂರ್ವ ಶಿಕ್ಷಣ ಇಲಾಖೆ ಮೂಲಕ ರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿಯು ಆಯೋಜಿಸುತ್ತಾ ಬರುತ್ತಿದೆ. ಇದಕ್ಕಾಗಿ ಪ್ರತ್ಯೇಕ ವೇಳಾಪಟ್ಟಿಯನ್ನು ಮೊದಲೇ ಪ್ರಕಟಿಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಬಹುತೇಕ ವಿಷಯಗಳ ಪರೀಕ್ಷೆಗಳು ನಡೆದಿವೆ. ಕೆಲವು ಪರೀಕ್ಷೆಗಳು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 12.30ರವರೆಗೆ ನಡೆದಿವೆ.

ಇದಲ್ಲದೇ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಇಲ್ಲವೇ ಪರೀಕ್ಷೆಯನ್ನು ಬರೆಯಲಾಗದವರಿಗೆ ಮೇ ತಿಂಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆಗೆ ಶುಲ್ಕ ತುಂಬಲು ಏಪ್ರಿಲ್‌ 20ರವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಆಯಾ ಜಿಲ್ಲಾ ಮಟ್ಟದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಸಪ್ಲಿಮೆಂಟರಿ ಪರೀಕ್ಷೆ ವಿವರ ಪ್ರಕಟಿಸುವಂತೆ ಸೂಚಿಸಲಾಗಿದೆ. ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ತುಂಬಿ ಪರೀಕ್ಷೆ ಎದುರಿಸಲು ಬೇಕಾದ ಸಹಕಾರ ನೀಡುವಂತೆಯೂ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.


How To Check First PUC Result?

Go to official website karnic.nic.in

On the homepage, click on the link that reads Karnataka PUC 1 Result 2024

In the new window, enter your credentials to view the result.

The results will be displayed upon submission of the credentials.

Download and print a copy for future reference.


logoblog

Thanks for reading Karnataka 1st PUC Result 2024

Previous
« Prev Post

No comments:

Post a Comment

If You Have any Doubts, let me Comment Here