International Women's Day 2024
ಪ್ರತಿ ವರ್ಷ ಮಾರ್ಚ್ 8ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇದು ಲಿಂಗ ಸಮಾನತೆ ಹಾಗೂ ಜಗತ್ತಿನಾದ್ಯಂತ ಮಹಿಳೆಯರ ಕೊಡುಗೆಗಳನ್ನು ಗೌರವಿಸುವ ದಿನ. ಈ ದಿನವು ಮಹಿಳಾ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟದ ಜ್ಞಾಪಕಾರ್ಥವಾಗಿದೆ ಮತ್ತು ಸಮಾಜದ ಎಲ್ಲಾ ವಲಯಗಳಲ್ಲಿ ಲಿಂಗ ಸಮಾನತೆಯ ಅಗತ್ಯವನ್ನು ಎತ್ತಿ ಹಿಡಿಯುತ್ತದೆ.
ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಾರ್ಷಿಕವಾಗಿ ಮಾರ್ಚ್ 8ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವ ಜಾಗತಿಕ ದಿನವಾಗಿದೆ. ಈ ದಿನವು ಲಿಂಗ ಸಮಾನತೆಯ ಕರೆಯನ್ನು ನೀಡುತ್ತದೆ. ಇದು ಮಹಿಳೆಯರು ಮಾಡಿದ ಸಾಧನೆಗಳು ಮತ್ತು ಪ್ರಗತಿಯನ್ನು ಆಚರಿಸುವುದಷ್ಟೇ ಅಲ್ಲದೆ, ಸಮಾನತೆಗಾಗಿ ನಡೆಯುತ್ತಿರುವ ಹೋರಾಟಗಳನ್ನು ಎತ್ತಿ ತೋರಿಸುತ್ತದೆ.
ಅಂತಾರಾಷ್ಟ್ರೀಯ ಮಹಿಳಾ ದಿನದಂದು ಲಿಂಗ ಸಮಾನತೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮಾನವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನಗಳನ್ನು ಎತ್ತಿ ಹಿಡಿಯಲಾಗುತ್ತದೆ. ಗ್ಲೋರಿಯಾ ಸ್ಟೀನೆಮ್ ಹೇಳಿದಂತೆ, “ಸಮಾನತೆಗಾಗಿ ಮಹಿಳೆಯರ ಹೋರಾಟದ ಕಥೆಯು ಕೇವಲ ಸ್ತ್ರೀವಾದಿ ಅಥವಾ ಯಾವುದೇ ಒಂದು ಸಂಘಟನೆಗೆ ಸೇರಿದ್ದಲ್ಲ; ಅದು ಮಾನವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವ ಎಲ್ಲರ ಸಾಮೂಹಿಕ ಪ್ರಯತ್ನಗಳಿಗೆ ಸೇರಿದ್ದಾಗಿದೆ.”
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2024ರ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ…
ಅಂತಾರಾಷ್ಟ್ರೀಯ ಮಹಿಳಾ ದಿನದ ಥೀಮ್:
ವಿಶ್ವಸಂಸ್ಥೆಯು 2024ರ ಮಹಿಆಳ ದಿನಾಚರಣೆಯ ಧ್ಯೇಯವಾಕ್ಯವನ್ನು 'ಇನ್‌ಕ್ಲೂಷನ್ ಇನ್‌ಸ್ಪೈರ್' ಎಂದು ಘೋಷಿಸಿದೆ. ಈ ಥೀಮ್ ಮಹಿಳೆಯರು ಎಲ್ಲ ವಲಯಗಳಲ್ಲೂ ಗೌರವಾನ್ವಿತ ಬದುಕು ಕಟ್ಟಿಕೊಳ್ಳುವ ಸಾಮರ್ಥ್ಯದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ. ಈ ಅಭಿಯಾನದ ಮೂಲಕ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆ ಮತ್ತು ಸಬಲೀಕರಣದ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಲಿಂಗ ಸಮಾನತೆಯನ್ನು ಮುನ್ನಡೆಸುವಲ್ಲಿನ ಪಾತ್ರವನ್ನು ಒತ್ತಿಹೇಳಲಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸ:
ಅಂತಾರಾಷ್ಟ್ರೀಯ ಮಹಿಳಾ ದಿನವು 20ನೇ ಶತಮಾನದ ಆರಂಭದಲ್ಲಿ ಶುರುವಾಯಿತೆಂದು ಹೇಳಲಾಗುತ್ತದೆ. ಇದು ಉತ್ತರ ಅಮೆರಿಕಾ ಮತ್ತು ಯುರೋಪ್ನಲ್ಲಿ ಕಾರ್ಮಿಕ ಚಳುವಳಿಗಳಿಂದ ಹುಟ್ಟಿಕೊಂಡಿತು. ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಫೆಬ್ರವರಿ 28, 1909ರಂದು ಯುನೈಟೆಡ್ ಸ್ಟೇಟ್ನಲ್ಲಿ ಆಚರಿಸಲಾಯಿತು. ನ್ಯೂಯಾರ್ಕ್‌ನಲ್ಲಿ 1908ರ ಗಾರ್ಮೆಂಟ್ ಕಾರ್ಮಿಕರ ಮುಷ್ಕರವನ್ನು ಸ್ಮರಣಾರ್ಥವಾಗಿ ಸಮಾಜವಾದಿ ಪಕ್ಷ ಆಫ್ ಅಮೇರಿಕಾ ಆಯೋಜಿಸಿತು. ನ್ಯೂಯಾರ್ಕ್‌ನಲ್ಲಿ ಸಮಾಜವಾದಿ ಮಹಿಳೆಯರು ಮತ್ತು ಜವಳಿ ಮಹಿಳಾ ಕಾರ್ಮಿಕರು ಕಡಿಮೆ ಗಂಟೆಗಳ ಕೆಲಸ, ಹೆಚ್ಚಿನ ವೇತನ ಮತ್ತು ಮತದಾನದ ಅವಕಾಶಕ್ಕೆ ಒತ್ತಾಯಿಸಿ ಪ್ರತಿಭಟಿಸಿದರು. ಆಗ ಮಹಿಳಾ ದಿನಾಚರಣೆ ಶುರುವಾಯಿತು ಎನ್ನಲಾಗುತ್ತದೆ.
ಯುರೋಪಿಯನ್ ಕಾರ್ಯಕರ್ತರು ಮಹಿಳೆಯರಿಗೆ ಪ್ರತ್ಯೇಕ ದಿನವನ್ನು ನಿಗದಿ ಮಾಡಬೇಕೆಂದು ಅಭಿಯಾನ ಪ್ರಾರಂಭಿಸಿದರು. ಸಮಾನ ವೇತನ ಮತ್ತು ಕೆಲಸದ ಹಕ್ಕುಗಳಿಗಾಗಿ ಮತದಾನ ಮತ್ತು ಮುನ್ನಡೆಸುವ ಹಕ್ಕನ್ನು ಒತ್ತಾಯಿಸಿದರು. ವರದಿಯ ಪ್ರಕಾರ, 1 ದಶಲಕ್ಷಕ್ಕೂ ಹೆಚ್ಚು ಜನರು ಈ ರ್ಯಾಲಿಗಳಲ್ಲಿ ಭಾಗವಹಿಸಿದ್ದರು. ನಂತರ 1910ರಲ್ಲಿ ಕೋಪನ್ ಹೇಗನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರಸ್ತಾಪಿಸಿದರು. ಈ ಕಲ್ಪನೆಯನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. 1911ರಲ್ಲಿ ಹಲವಾರು ಯುರೋಪಿಯನ್ ದೇಶಗಳಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಣೆ ಮಾಡಲಾಯಿತು.
ವಿಶ್ವಸಂಸ್ಥೆಯು 1975ರಲ್ಲಿ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು. ಅದಾದ 2 ವರ್ಷಗಳ ನಂತರ, 1977ರಲ್ಲಿ ವಿಶ್ವ ಸಂಸ್ಥೆ ಜನರಲ್ ಅಸೆಂಬ್ಲಿ ಮಾರ್ಚ್ 8 ಅನ್ನು ಮಹಿಳಾ ಹಕ್ಕುಗಳು ಮತ್ತು ವಿಶ್ವ ಶಾಂತಿಗಾಗಿ ವಿಶ್ವ ಸಂಸ್ಥೆಯ ದಿನವೆಂದು ಘೋಷಿಸಲು ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸಿತು.
ಅಂತಾರಾಷ್ಟ್ರೀಯ ಮಹಿಳಾ ದಿನದ ಮಹತ್ವ:
ಅಂತಾರಾಷ್ಟ್ರೀಯ ಮಹಿಳಾ ದಿನದ ಮಹತ್ವವು ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಮಹಿಳೆಯರ ವಿರುದ್ಧದ ಹಿಂಸೆ ಮತ್ತು ನಿಂದನೆಯಂತಹ ಸಮಸ್ಯೆಗಳನ್ನು ಎತ್ತಿ ಹಿಡಿಯುವ ದಿನವಾಗಿದೆ. ಇದಕ್ಕೆ ಪರಿಹಾರಕ್ಕಾಗಿ ಹೋರಾಡುವ ದಿನವಾಗಿದೆ. ಮಹಿಳಾ ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಪ್ರತಿಪಾದಿಸುವಲ್ಲಿ ಸಾಮೂಹಿಕ ಕ್ರಿಯೆ ಮತ್ತು ಸಹಯೋಗಕ್ಕಾಗಿ ಇದು ವೇದಿಕೆಯನ್ನು ಒದಗಿಸುತ್ತದೆ.
No comments:
Post a Comment
If You Have any Doubts, let me Comment Here