An order has been implemented for honorarium, insurance for guest lecturers by the state government
ರಾಜ್ಯ ಸರ್ಕಾರದಿಂದ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನ ಹೆಚ್ಚಿಸಿ ಹಾಗೂ ವಿಮಾ ಸೌಲಭ್ಯ ಜಾರಿಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಅರೆಕಾಲಿಕ ಉಪನ್ಯಾಸಕರುಗಳಿಗೆ ಗರಿಷ್ಠ ಮಾಸಿಕ ಕಾರ್ಯಭಾರ 32 ಗಂಟೆಗೆ ಗರಿಷ್ಠ ಕಾರ್ಯಭಾರಕ್ಕೆ ಮಾಸಿಕ ಗೌರವಧನ ರೂ.15,000ಗಳನ್ನು ಹಾಗೂ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿನ ಅರೆಕಾಲಿಕ ಉಪನ್ಯಾಸಕರುಗಳಿಗೆ ಗರಿಷ್ಠ ರೂ.12,500ಗಳನ್ನು ಪಾವತಿಸಲಾಗುತ್ತಿದೆ ಎಂದಿದ್ದಾರೆ.
ಪ್ರಸ್ತುತ ಸಲ್ಲಿಸುತ್ತಿರುವ ಸೇವಾ ಅವಧಿಗೆ ಅನುಗುಣವಾಗಿ ಗೌರವಧನವನ್ನು 5 ವರ್ಷಕ್ಕಿಂತ ಕಡಿಮೆ ಸೇವಾವಧಿಗೆ ರೂ.5,000, 5 ವರ್ಷದಿಂದ 10 ವರ್ಷಗಳ ಸೇವಾವಧಿಗೆ 6000, 10 ವರ್ಷದಿಂದ 15 ವರ್ಷಗಳ ಸೇವಾವಧಿಗೆ ರೂ.7000 ಹಾಗೂ 15 ವರ್ಷ ಮೇಲ್ಪಟ್ಟು ಸೇವಾವಧಿಗೆ ರೂ.8000 ಹೆಚ್ಚಿಸಿ ಆದೇಶಿಸಿದ್ದಾರೆ.
ಇದಲ್ಲೇದ 60 ವರ್ಷ ಮೀರಿದಂತ ಅತಿಥಿ ಉಪನ್ಯಾಸಕರುಗಳಿಗೆ ಭದ್ರತಾ ರೂಪದಲ್ಲಿ ವಾರ್ಷಿಕ ರೂ.50,000ದಂತೆ ಗರಿಷ್ಠ 5 ಲಕ್ಷಗಳ ಮೊತ್ತದ ಇಡಿಗಂಟಿನ ಸೌಲಭ್ಯ ಮಂಜೂರು ಮಾಡಲಾಗಿದೆ. ಅಲ್ಲದೇ 5 ಲಕ್ಷಗಳ ವರೆಗೆ ಆರೋಗ್ಯ ವಿಮಾ ಸೌಲಭ್ಯವನ್ನು ಅತಿಥಿ ಉಪನ್ಯಾಸಕರಿಗೆ ಜಾರಿಗೊಳಿಸಿ ಆದೇಶಿಸಿದೆ.
No comments:
Post a Comment
If You Have any Doubts, let me Comment Here