KPSC Gazetted probationers Recruitment 2024
ಕರ್ನಾಟಕ ಲೋಕಸೇವಾ ಆಯೋಗವು (KPSC) ಗೆಜೆಟೆಡ್ ಪ್ರೊಬೆಷನರಿಯ (ಕೆಎಎಸ್) (KAS Recruitment 2024) ಗ್ರೂಪ್ "ಎ" ಮತ್ತು ಗ್ರೂಪ್ "ಬಿ" ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೈದರಾಬಾದ್ ಕರ್ನಾಟಕ ಹಾಗೂ ಉಳಿಕೆ ವೃಂದಗಳಲ್ಲಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಒಟ್ಟು 384 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಸುಮಾರು ಆರು ವರ್ಷಗಳ ನಂತರ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
2024ರ ಮಾರ್ಚ್ 4ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಏಪ್ರಿಲ್ 3 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಸದ್ಯ ಪೂರ್ವಭಾವಿ ಪರೀಕ್ಷಾ ದಿನಾಂಕವನ್ನು (ತಾತ್ಕಾಲಿಕ) ಪ್ರಕಟ ಮಾಡಲಾಗಿದ್ದು, 2024ರ ಮೇ 5ರಂದು ಪರೀಕ್ಷೆ ನಡೆಯಲಿದೆ. ಈ ಬಾರಿ ಮಾತ್ರ ವಯೋಮಿತಿಯಲ್ಲಿ ಮೂರು ವರ್ಷ ಹೆಚ್ಚಳ ಮಾಡಲಾಗಿದೆ. ಕನಿಷ್ಠ 21 ವರ್ಷವಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 38 (ಮೂರು ವರ್ಷ ಹೆಚ್ಚಳ), ಪ್ರವರ್ಗ 2ಎ, 2ಬಿ, 3ಎ, 3 ಬಿ ಅಭ್ಯರ್ಥಿಗಳಿಗೆ 41 ವರ್ಷ, ಎಸ್‌ಸಿ, ಎಸ್‌ಟಿ ಪ್ರವರ್ಗ 1ಕ್ಕೆ 43 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು ಇದೀಗ 384 ಗೆಜೆಟೆಡ್ ಪ್ರೊಬೇಷನರ್ 2023-24ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ನೇರ ನೇಮಕಾತಿ ಪೂರ್ವಭಾವಿ ಪರೀಕ್ಷೆಗೆ ಅಧಿಸೂಚಿಸಿದೆ. 159 ಗ್ರೂಪ್ ಎ ವೃಂದದ ಹುದ್ದೆಗಳು, 225 ಗ್ರೂಪ್ ಬಿ ವೃಂದದ ಹುದ್ದೆಗಳು ಸೇರಿ ಒಟ್ಟು 384 ಹುದ್ದೆಗಳಿವೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ
ಹುದ್ದೆ ಹೆಸರು : ಗೆಜೆಟೆಡ್ ಪ್ರೊಬೇಷನರ್ (ಕೆಎಎಸ್ ಹುದ್ದೆಗಳು)
ಹುದ್ದೆಗಳ ಸಂಖ್ಯೆ: 384
ಒಟ್ಟು ಗ್ರೂಪ್ ಎ ಹುದ್ದೆಗಳು : 159
ಒಟ್ಟು ಗ್ರೂಪ್ ಬಿ ಹುದ್ದೆಗಳು : 225
ಕೆಪಿಎಸ್‌ಸಿ ಕೆಎಎಸ್ ಹುದ್ದೆಗಳಿಗೆ ವಿದ್ಯಾರ್ಹತೆ
- ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು.
- ಮೇಲ್ಕಂಡ ಯಾವುದಾದರೂ ಪರೀಕ್ಷೆಗೆ ಹಾಜರಾಗಿದ್ದಲ್ಲಿ ಮತ್ತು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದಲ್ಲಿ ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಶೈಕ್ಷಣಿಕವಾಗಿ ಅರ್ಹರಾಗುವುದಾದಲ್ಲಿ, ಆದರೆ ಆ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳದೇ ಇದ್ದಲ್ಲಿ, ಅಂತಹ ಅಭ್ಯರ್ಥಿಗಳು ಪೂರ್ಣಭಾವಿ ಪರೀಕ್ಷೆಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 04-03-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-04-2024
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 03-04-2024
ಪೂರ್ವಭಾವಿ ಪರೀಕ್ಷಾ ದಿನಾಂಕ : 05-05-2024 (ಸಂಭಾವ್ಯ ದಿನಾಂಕ)
ಕೆಎಎಸ್ ಪರೀಕ್ಷೆಯ ಪ್ರಯತ್ನಗಳು (ಕೆಟಗರಿವಾರು)
ಸಾಮಾನ್ಯ ವರ್ಗದ ಅಭ್ಯರ್ಥಿಗಳು 5 ಬಾರಿ, ಹಿಂದುಳಿದ ವರ್ಗದ ಅಭ್ಯರ್ಥಿಗಳು 7 ಬಾರಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಪರೀಕ್ಷೆ ಅವಕಾಶಗಳ ಮಿತಿ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
- ಕೆಪಿಎಸ್‌ಸಿ ವೆಬ್‌ಸೈಟ್ www.kpsc.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
- ಮೊದಲ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ವಿವರ, ಶೈಕ್ಷಣಿಕ ಅರ್ಹತೆ ವಿವರ ಮತ್ತು ಇತರೆ ವಿವರಗಳನ್ನು ಭರ್ತಿ ಮಾಡಿ.
- ಎರಡನೇ ಹಂತವಾಗಿ ಇಲಾಖೆ ಕೇಳಲಾದ ಇತರೆ ವಿವರ ನೀಡಿ ಅಪ್ಲಿಕೇಶನ್ ಅನ್ನು ಸಬ್‌ಮಿಟ್ ಮಾಡಿ.
- ಮೂರನೇ ಹಂತದಲ್ಲಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಶುಲ್ಕ ಎಷ್ಟು? - ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600.
- ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.300.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ ರೂ.35 ಪಾವತಿಸಬೇಕು.
ಕೆಎಎಸ್ ಹುದ್ದೆಗಳ ವೇತನ ಶ್ರೇಣಿ : ರೂ.56,800 - 99,600 ವರೆಗೆ ಇರುತ್ತದೆ.
ಅರ್ಜಿ ಸಲ್ಲಿಸಲು, ಪಠ್ಯಕ್ರಮ ಮತ್ತು ಇತರೆ ಪ್ರಮುಖ ಮಾಹಿತಿಗಾಗಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here