ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು 2023-24ನೇ ಸಾಲಿನ ಬಿ.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಇದೀಗ ಅಂತಿಮ ಸುತ್ತಿನ ಸೀಟು ಹಂಚಿಕೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ
ಇಲಾಖೆಯು ಇತ್ತೀಚೆಗೆ 4ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಿತ್ತು. ಇದೀಗ ಅಂತಿಮ ಸುತ್ತಿನ ಬಿ.ಇಡಿ ಸೀಟು ಹಂಚಿಕೆಯನ್ನು ಆಫ್‌ಲೈನ್ ಬದಲಾಗಿ ಆನ್‌ಲೈನ್ ಮೂಲಕ ಮಾಡಲಾಗುತ್ತದೆ. ಅಂತಿಮವಾಗಿ ಹಂಚಿಕೆಯಾಗದೇ ಉಳಿಕೆಯಾಗಿರುವ ಸೀಟುಗಳ ಹಂಚಿಕೆಗಾಗಿ ಅಂತಿಮ ಸುತ್ತಿನ ಸೀಟು ಹಂಚಿಕೆಯಲ್ಲಿ ಕೆಳಕಂಡ ಆಸಕ್ತ ಅಭ್ಯರ್ಥಿಗಳಿಗೆ ಕಾಲೇಜು ಆಯ್ಕೆಗಾಗಿ ಆಪ್ಶನ್ ಎಂಟ್ರಿಗೆ ಅವಕಾಶ ನೀಡಲಾಗಿದೆ.
ಸೀಟು ರದ್ದುಪಡಿಸಿಕೊಂಡು ಅಂತಿಮ ಸುತ್ತಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು, ಈವರೆಗಿನ ಸುತ್ತಿನಲ್ಲಿ ಸ್ಟಾರ್ ಬಂದಿರುವ ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವ ಅಭ್ಯರ್ಥಿಗಳು ಮತ್ತು ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಂಡಿರುವ ಎಲ್ಲಾ ಅಭ್ಯರ್ಥಿಗಳು ಈ ಅಂತಿಮ ಸುತ್ತಿನ ಸೀಟು ಹಂಚಿಕೆಯಲ್ಲಿ ಆಪ್ಶನ್ ಎಂಟ್ರಿ ಮೂಲಕ ಕಾಲೇಜು ಆಯ್ಕೆ ಮಾಡಬಹುದು.
ಬಿ.ಇಡಿ ಕೋರ್ಸಿಗೆ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯ ವೇಳಾಪಟ್ಟಿ
ಮೂಲ ದಾಖಲೆಗಳ ಪರಿಶೀಲನೆ ದಿನಾಂಕ : 12-02-2024
ಅಭ್ಯರ್ಥಿಗಳು ಕಾಲೇಜುಗಳ (ಆಪ್ಶನ್ ಎಂಟ್ರಿ) ಆಯ್ಕೆ ಮಾಡಿಕೊಳ್ಳಲು ಅವಕಾಶ ದಿನಾಂಕ : 12-02-2024 ರಿಂದ 13-02-2024
ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ : 15-02-2024
ಆನ್‌ಲೈನ್‌ನಲ್ಲಿ ಬ್ಯಾಂಕ್ ಚಲನ್ ಪಡೆದುಕೊಳ್ಳಲು ಕೊನೆಯ ದಿನಾಂಕ: 16-02-2024
ಅಭ್ಯರ್ಥಿಗಳು ಜಿಲ್ಲಾ ವ್ಯವಸ್ಥಾಪಕ ಕೇಂದ್ರಗಳಲ್ಲಿ ಪ್ರವೇಶಾತಿ ಪತ್ರ ಪಡೆಯಲು ಕೊನೆಯ ದಿನಾಂಕ: 17-02-2024
ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ: 20-02-2024
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಶಾಲಾ ಶಿಕ್ಷಣ ಇಲಾಖೆಯ ವೆಬ್ ವಿಳಾಸ www.schooleducation.karnataka.gov.in ಅಥವಾ ಸಿಟಿಇ / ಡಿಐಇಟಿ ನೋಡಲ್ ಕೇಂದ್ರಗಳನ್ನು ಸಂಪರ್ಕಿಸುವುದು.
ವಿಶೇಷ ಸೂಚನೆ
ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲಾಗುವುದಿಲ್ಲ. ಇದು ಈ ಸಾಲಿನ ಅಂತಿಮ ಸೀಟು ಹಂಚಿಕೆ ಪ್ರಕ್ರಿಯೆಯಾಗಿದ್ದು ಇದರ ನಂತರ ಯಾವುದೇ ಸೀಟು ಹಂಚಿಕೆಗೆ ಅವಕಾಶ ಇರುವುದಿಲ್ಲ.
No comments:
Post a Comment
If You Have any Doubts, let me Comment Here