🙏🙏🙏🙏🙏🙏🙏🙏
*ಕಲ್ಪನಾ ಚಾವ್ಲ*
💐 ಭಾರತೀಯ ಮೂಲದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲ ರವರ ಪುಣ್ಯಸ್ಮರಣೆ ದಿನ 💐
ಕಲ್ಪನಾ ಚಾವ್ಲ (ಮಾರ್ಚ್ 17, 1962 - ಫೆಬ್ರವರಿ 1, 2003) - ಮೊದಲ ಭಾರತ ಸಂಜಾತ ಮಹಿಳಾ ಗಗನಯಾತ್ರಿ ಹಾಗೂ ಅಮೆರಿಕನ್ ಪ್ರಜೆ. ಅಂತರಿಕ್ಷ ನೌಕೆ ಕೊಲಂಬಿಯಾ ಭೂ ವಾತಾವರಣದಲ್ಲಿ ಸುಟ್ಟು ಭಸ್ಮವಾದಾಗ ಮಡಿದ ಏಳು ಗಗನಯಾತ್ರಿಗಳಲ್ಲಿ ಒಬ್ಬರು
ಕಲ್ಪನಾ ಚಾವ್ಲ.
17 ಮಾರ್ಚ್ 1962 ರಂದು ಪಂಜಾಬ್ ನ
ಕರ್ನಾಲ್ ನಲ್ಲಿ ಜನಿಸಿದ ಇವರು ಫೆಬ್ರವರಿ 1, 2003 ರಲ್ಲಿ ಮರಣ ಹೊಂದಿದರು. ( ಕೇವಲ 40 ವರ್ಷ )
🌹 ವಿದ್ಯಾಭ್ಯಾಸ : ಪಂಜಾಬ್ ಎಂಜಿನೆಯರಿಂಗ್ ಕಾಲೇಜು (ಬಿಇ)
ಆರ್ಲಿಂಗ್ಟನ್‌ನಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯ (ಎಂ ಎಸ್)
ಬೌಲ್ಡರ್ನಲ್ಲಿ ಕೊಲೊರಾಡೋ ವಿಶ್ವವಿದ್ಯಾಲಯ (MS, ಪಿ ಎಚ್ ಡಿ)
ಅಂತರಿಕ್ಷದಲ್ಲಿ ಕಳೆದ ಸಮಯ : 31 ದಿನಗಳು, 14 ಗಂಟೆ, 64 ನಿಮಿಷಗಳು.
🌹ಜೀವನ
ಕಲ್ಪನಾ ಚಾವ್ಲ 1982 ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನು ಅಮೇರಿಕಾ ದೇಶದಲ್ಲಿ ಅಧ್ಯಯನ ಮಾಡಿದರು. ಅಮೇರಿಕನ್ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು
🌹ಸಂಶೋಧನಾ ವೃತ್ತಿ :
1995 ರಲ್ಲಿ ಕಲ್ಪನಾ ಅಮೇರಿಕಾದಲ್ಲಿನ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಸೇರಿದರು. 1997 ರ ನವೆಂಬರ್ 19 ರಂದು ಇವರ ಮೊದಲ ಬಾಹ್ಯಾಕಾಶಯಾನ ಪ್ರಾರಂಭವಾಯಿತು. ನಂತರ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು 80 ಸಂಶೋಧನೆಗಳಲ್ಲಿ ಕಲ್ಪನಾ ನಿರತರಾಗಿದ್ದರು.
🌹ನಿಧನ :
2003 ರ ಫೆಬ್ರವರಿ 1 ರಂದು ಕೊಲಂಬಿಯಾ ಆಕಾಶನೌಕೆ ಎಸ್.ಟಿ.ಎಸ್.-87 ರಲ್ಲಿ ಗಗನಯಾತ್ರೆ ಮುಗಿಸಿ ಭೂಮಿಗೆ ಮರಳುವಾಗ ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು. ಈ ನೌಕೆಯಲ್ಲಿ ಇವರೊಂದಿಗೆ ಇತರ ಆರು ಗಗನಯಾನಿಗಳಿದ್ದರು.
🌹ನೆನಪಿನಲ್ಲಿ :
# ಫೆಬ್ರವರಿ 5, 2003 ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ "ಮೆಟ್ ಸ್ಯಾಟ್" ಉಪಗ್ರಹ ಸರಣಿಯನ್ನು "ಕಲ್ಪನಾ" ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
# ನಕ್ಷತ್ರ ಗ್ರಹ "51826 ಕಲ್ಪನಾಚಾವ್ಲಾ" ಎಂದು ನಾಮಕರಣ ಮಾಡಲಾಗಿದೆ.
# ನ್ಯೂಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ "ಲಿಟಲ್ ಇಂಡಿಯಾ" ಪ್ರದೇಶದ 74 ನೇ ರಸ್ತೆಯನ್ನು "ಕಲ್ಪನಾ ಚಾವ್ಲಾ ಪಥ" ಎಂದು ಹೆಸರಿಸಲಾಗಿದೆ.
# ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ ಟೆಕ್ಸಾಸ್ ವಿಶ್ವವಿದ್ಯಾಲಯ ದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
# ನಾಸಾ ಸಂಸ್ಥೆಯ ಒಂದು ಸೂಪರ್ ಕಂಪ್ಯೂಟರ್ ಅನ್ನು ಕಲ್ಪನಾರವರಿಗೆ ಸಮರ್ಪಿಸಲಾಗಿದೆ.
# ಅಮರ ಚಿತ್ರ ಕಥೆ ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
# ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ ಕೊಲಂಬಿಯಾ ಪರ್ವತಗಳು ಸರಣಿಯ ಏಳು ಪರ್ವತ ಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.
ಈ ಮಹಾನ್ ಸಾಧಕ ಚೇತನಕ್ಕೆ ನಮ್ಮ ನಮನಗಳು
No comments:
Post a Comment
If You Have any Doubts, let me Comment Here