Central Budget Highlights 2024
ಇಂದು ಮಧ್ಯಂತರ ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಒಂದಿಷ್ಟು ಹೊಸ ಯೋಜನೆಗಳ ಘೋಷಣೆ ಮಾಡಿದರು. ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೇ, ಕೆಲವೊಂದಿಷ್ಟು ಕೊಡುಗೆಗಳನ್ನು ಘೊಷಣೆ ಮಾಡುವ ಮೂಲಕ ಬಜೆಟ್ ಮಂಡನೆಯನ್ನು ಬೇಗನೇ ಮುಕ್ತಾಯಗೊಳಿಸಿದರು.
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2024ನೇ ಮಧ್ಯಂತರ ಬಜೆಟ್ನ ಪ್ರಮುಖಾಂಶಗಳು ಈ ಕೆಳಕಂಡಂತಿವೆ.
* ಸರ್ಕಾರವು ಸಮಗ್ರ ಜಿಡಿಪಿ, ಆಡಳಿತ, ಅಭಿವೃದ್ಧಿ ಮತ್ತು ಕಾರ್ಯಕ್ಷಮತೆಯ ಮೇಲೆ ಹೆಚ್ಚು ಕೇಂದ್ರೀಕರಿಸಿದೆ.
* ಕಳೆದ 10 ವರ್ಷಗಳಲ್ಲಿ 250 ಮಿಲಿಯನ್ಗೂ ಅಧಿಕ ಮಂದಿಯನ್ನು ನಮ್ಮ ಸರ್ಕಾರ ಬಡತನ ರೇಖೆಯಿಂದ ಹೊರಗಡೆ ತಂದಿದೆ.
* ಬೆಳೆ ವಿಮೆ ಯೋಜನೆಯ ಲಾಭ 40 ಮಿಲಿಯನ್ ರೈತರನ್ನು ತಲುಪಲಿದೆ.
* ಹಣದುಬ್ಬರವು ನಿಯಂತ್ರಣದಲ್ಲಿದೆ ಮತ್ತು ಆರ್ಥಿಕ ಬೆಳವಣಿಗೆಯು ಏರಿದೆ.
* ನಮ್ಮ ಸರ್ಕಾರ ಕೈಗೊಂಡಿರುವ ತೆರಿಗೆ ಸುಧಾರಣೆ ಕ್ರಮಗಳಿಂದ ತೆರಿಗೆ ಮೂಲವು ವಿಸ್ತರಿಸಿದೆ ಮತ್ತು ತೆರಿಗೆ ಸಂಗ್ರಹ ಹೆಚ್ಚಾಗಿದೆ.
* ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಅಭೂತಪೂರ್ವ ಆರ್ಥಿಕ ಅಭಿವೃದ್ಧಿಯನ್ನು ನೀವೆಲ್ಲ ನೋಡಲಿದ್ದೀರಿ.
ಜಗತ್ತಿನ ಪ್ರಮುಖ ರಾಷ್ಟ್ರಗಳ ನಡುವೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯು ಆಳವಾದ ಪರಿವರ್ತನೆ ಮೂಲಕ ಸಾಗುತ್ತಿದೆ.
* 2047ರ ವೇಳೆಗೆ ದೇಶವನ್ನು ವಿಕಸಿತ ಭಾರತ ಮಾಡುವ ಗುರಿಯನ್ನು ಸರ್ಕಾರದ ಹೊಂದಿದೆ.
* ರಕ್ಷಣಾ ಉದ್ದೇಶಗಳಿಗಾಗಿ ಆಳವಾದ ತಂತ್ರಜ್ಞಾನವನ್ನು ಬಲಪಡಿಸಲು ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ.
* ಮಧ್ಯಮ ವರ್ಗದ ಅರ್ಹ ಜನರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯ ಮಾಡಲಿದೆ.
* ಮುಂದಿನ ಐದು ವರ್ಷದಲ್ಲಿ ಸರ್ಕಾರ 2 ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಾಣ ಮಾಡಲಿದೆ ಮತ್ತು ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.
* ದೇಶದಲ್ಲಿ ಸ್ವ-ಸಹಾಯ ಗುಂಪುಗಳ ಯಶಸ್ಸು 1 ಕೋಟಿ ಮಹಿಳೆಯರಿಗೆ ಲಖಪತಿ ದೀದಿಗಳಾನ್ನಾಗಿ ಮಾಡಿದೆ.
ಹಣಕಾಸು ವರ್ಷ 2024 ವಿತ್ತೀಯ ಕೊರತೆಯು GDP ಯ 5.8% ನಲ್ಲಿ ಗುರಿಗಿಂತ ಕಡಿಮೆಯಾಗಿದೆ; 2025ರ ಹಣಕಾಸು ವರ್ಷದಲ್ಲಿ 5.1% ಕ್ಕೆ ನಿಗದಿಪಡಿಸಲಾಗಿದೆ ಮತ್ತು 2026ರ ಹಣಕಾಸು ವರ್ಷದ ವೇಳೆಗೆ ಅದನ್ನು 4.5% ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.
* ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ (ನೇರ ಮತ್ತು ಪರೋಕ್ಷ ತೆರಿಗೆ)
* ಸ್ಟಾರ್ಟ್ಅಪ್, ಚಿನ್ನದ ಮೇಲಿನ ಹೂಡಿಕೆಗಳು, ಪಿಂಚಣಿ ನಿಧಿಗಳ ಮೇಲಿನ ತೆರಿಗೆ ಪ್ರಯೋಜನಗಳನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಗುವುದು.
* ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸರ್ಕಾರ ಗಣನೀಯವಾಗಿ ಹೂಡಿಕೆ ಮಾಡಲಿದೆ.
* ದ್ವೀಪ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ್ ತನ್ನ ಪ್ರವಾಸಿ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರದಿಂದ ವಿಶೇಷ ಗಮನವನ್ನು ಪಡೆಯುತ್ತದೆ.
No comments:
Post a Comment
If You Have any Doubts, let me Comment Here