BMTC Recruitment 2024
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಮಿಕ್ಕಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆಗಳು, ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15 ಹುದ್ದೆ ಸೇರಿ) ಹುದ್ದೆಗಳು ಇವೆ. ಈ ಸದರಿ ಹುದ್ದೆಗಳ ವಿವರಗಳನ್ನು ಕೆಳಗಿನಂತೆ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉದ್ಯೋಗ ಸಂಸ್ಥೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆ ಹೆಸರು : ನಿರ್ವಾಹಕ (ಕಂಡಕ್ಟರ್ )
ಹುದ್ದೆಗಳ ಸಂಖ್ಯೆ : 2500.
ವಿದ್ಯಾರ್ಹತೆ: ದ್ವಿತೀಯ ಪಿಯುಸಿ
ಇತರೆ ಅರ್ಹತೆ
ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಅನ್ನು ಹೊಂದಿರತಕ್ಕದ್ದು.
ಪುರುಷರ ಎತ್ತರ 160 CM, ಮಹಿಳೆಯರ ಎತ್ತರ 150 CM ಇರಬೇಕು.
ವಯಸ್ಸಿನ ಅರ್ಹತೆಗಳು
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆ ದಿನಾಂಕ 10-04-2024 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು ವರ್ಗಾವಾರು ಕೆಳಗಿನಂತೆ ಮೀರಿರಬಾರದು.
ಸಾಮಾನ್ಯ ವರ್ಗ - 35 ವರ್ಷಗಳು.
2A / 2B / 3A / 3B ಅಭ್ಯರ್ಥಿಗಳಿಗೆ 38 ವರ್ಷಗಳು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು.
ಮಾಜಿ ಸೈನಿಕ / ಇಲಾಖಾ ಅಭ್ಯರ್ಥಿಗಳಿಗೆ 45 ವರ್ಷಗಳು.
ನಿರ್ವಾಹಕ ಹುದ್ದೆಗಳಿಗೆ ವೇತನ ಶ್ರೇಣಿ : ರೂ.18660-25300.
ತರಬೇತಿ ಅವಧಿ ಭತ್ಯೆ ಮತ್ತು ವೇತನ ಶ್ರೇಣಿ
ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಒಂದು ವರ್ಷ ಕಾಲ ವೃತ್ತಿ ತರಬೇತಿಯಾಗಿ ನಿಯೋಜಿಸಲಾಗುವುದು. ಈ ತರಬೇತಿ ಅವಧಿಯಲ್ಲಿ ಮಾಸಿಕ ಸಮಗ್ರ ತರಬೇತಿ ಭತ್ಯೆಯಾಗಿ ರೂ.9,100 ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಮಾರ್ಚ್ 10 ರಂದು ತೋರಿಸುವ ಲಿಂಕ್ ಅನ್ನು ಆಯ್ಕೆ ಮಾಡಿ, ಆನ್‌ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.
ಅಪ್ಲಿಕೇಶನ್ ಶುಲ್ಕ ವಿವರ ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕ ರೂ.750.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500.
ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅವಧಿ
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 10-03-2024
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-04-2024
ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 13-04-2024
ಬಿಎಂಟಿಸಿ ನಿರ್ವಾಹಕರ ನೇಮಕಾತಿ ವಿಧಾನ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ಎರಡು ಪತ್ರಿಕೆಗಳಿಗೆ ತಲಾ 100 ಗಳಿಗೆ ನಡೆಸಿ, ನಂತರ ಇದರಲ್ಲಿನ ಶೇಕಡ.75 ಅಂಕಗಳು ಹಾಗೂ ಶೈಕ್ಷಣಿಕ ಅರ್ಹತೆಯ ಶೇಕಡ.25 ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ 1:5 ಅನುಪಾತದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
No comments:
Post a Comment
If You Have any Doubts, let me Comment Here