B.Ed-2023-24 Fourth round seat allotment lists
ಬಿಇಡಿ ಕೋರ್ಸ್'ನ 4ನೇ ಸುತ್ತಿನ ಸರ್ಕಾರಿ ಕೋಟಾ ಸೀಟು ಹಂಚಿಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ ಮಾಹಿತಿ ನೀಡಿದ್ದು, 2023-24ನೇ ಸಾಲಿನ ಬಿಇಡಿ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ 4ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ದಿನಾಂಕ 07-02-2024ರಂದು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಚಲನ್ ಡೌನ್ ಲೋಡ್ ಮಾಡಿಕೊಂಡು, ದಾಖಲಾತಿ ಶುಲ್ಕವನ್ನು ಎಸ್ ಬಿಐ ಬ್ಯಾಂಕಿನಲ್ಲಿ ಪಾವತಿಸಿ ದಿನಾಂಕ 09-02-2024ರ ಒಳಗಾಗಿ ಚಲನ್ ಪ್ರತಿಯನ್ನು ಸಂಬಂಧಿಸಿದ ನೋಡಲ್ ಸೆಂಟರ್ ನಲ್ಲಿ ಸಲ್ಲಿಸಿ ಪ್ರವೇಶ ಪತ್ರವನ್ನು ಪಡೆಯುವಂತೆ ತಿಳಿಸಿದೆ.
ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ 12-02-2024 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ www.schooleducation.karnataka.gov.in ಗೆ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಹೇಳಿದೆ.
Click Here To Download File arts List
No comments:
Post a Comment
If You Have any Doubts, let me Comment Here