Postponement of Transfer Counseling of School Head Teachers
ಶಾಲಾ ಶಿಕ್ಷಣ ಇಲಾಖೆಯು 2023-24ನೇ ಸಾಲಿನ ಮುಖ್ಯ ಶಿಕ್ಷಕ ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಜ.30ರಂದು ನಡೆಸಲು ನಿರ್ಧರಿಸಿದ್ದ ವಲಯ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಫೆ.3ಕ್ಕೆ ಮುಂದೂಡಿದೆ.
ಫೆ.3ರಂದು 'ಬಿ' ವಲಯದಿಂದ 'ಎ' ವಲಯಕ್ಕೆ ಹಾಗೂ 'ಸಿ' ವಲಯದಿಂದ 'ಬಿ' ವಲಯಕ್ಕೆ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯಲಿದೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಹಾಗೂ ಮುಖ್ಯ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನವನ್ನು ಬಡ್ತಿ ನೀಡಲು ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ-2020ರ ಸೆಕ್ಷನ್ 3ರ ಪ್ರಕಾರ 'ಸಿ' ವಲಯದಲ್ಲಿರುವ ಶಾಲೆಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ 'ಸಿ' ವಲಯದ ಶಿಕ್ಷಕರ ಹುದ್ದೆಗಳನ್ನು ಸಂಬಂಧಿಸಿದ ಶಾಲೆಗಳಲ್ಲಿ ತೆರವುಗೊಳಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಜ.30ರಂದು ಜಿಲ್ಲಾ ಹಂತದಲ್ಲಿ ವಲಯ ವರ್ಗಾವಣೆ ಕೌನ್ಸೆಲಿಂಗ್ ಅವನ್ನು ನಿಗದಿ ಮಾಡಲಾಗಿತ್ತು. ಆದರೆ, ಕೌನ್ಸೆಲಿಂಗ್ ಪ್ರಕ್ರಿಯೆಯು ಜಿಲ್ಲಾ ಉಪ ನಿರ್ದೇಶಕರ ಕೋರಿಕೆ ಮೇರೆಗೆ ನಿರ್ಧರಿಸಬೇಕಿರುವ ಕಾರಣಫೆ.3ರಂದು ನಡೆಸಲು ತೀರ್ಮಾನಿಸಲಾಗಿದೆ.
No comments:
Post a Comment
If You Have any Doubts, let me Comment Here