Biennial Elections to the council of States to fill the seats of members retiring in April 2024
15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರುವರಿ 27 ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ ಘೋಷಿಸಿದೆ. ಈ ಕುರಿತು ಆಯೋಗ ಅಧಿಸೂಚನೆ ಪ್ರಕಟಿಸಿದೆ.
15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರುವರಿ 27 ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಸೋಮವಾರ ಘೋಷಿಸಿದೆ. ಈ ಕುರಿತು ಆಯೋಗ ಅಧಿಸೂಚನೆ ಪ್ರಕಟಿಸಿದೆ.
ನಾಮಪತ್ರ ಸಲ್ಲಿಸಲು ಫೆಬ್ರುವರಿ 15 ಕೊನೆಯ ದಿನಾಂಕ. ಫೆಬ್ರುವರಿ 16ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಫೆಬ್ರುವರಿ 20ರಂದು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಬಹುದಾಗಿದೆ.
ಫೆ.27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
15 ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸ್ಥಾನಗಳ ಸಂಖ್ಯೆ:
ಆಂಧ್ರ ಪ್ರದೇಶ - 3
ಬಿಹಾರ- 6
ಛತ್ತೀಸಗಢ- 1
ಗುಜರಾತ್-4
ಹರಿಯಾಣ- 1
ಹಿಮಾಚಲ ಪ್ರದೇಶ- 1
ಕರ್ನಾಟಕ- 4
ಮಧ್ಯಪ್ರದೇಶ-5
ಮಹಾರಾಷ್ಟ್ರ-6
ತೆಲಂಗಾಣ-3
ಉತ್ತರ ಪ್ರದೇಶ- 10
ಉತ್ತರಾಖಂಡ-1
ಪಶ್ಚಿಮ ಬಂಗಾಳ-5
ಒಡಿಶಾ-3
ರಾಜಸ್ಥಾನ-3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾಗಿರುವ ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್‌ನ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಹಾಗೂ ಸಯ್ಯದ್ ನಾಸಿರ್ ಹುಸೇನ್ ಅವರು ಏಪ್ರಿಲ್ 2ರಂದು ನಿವೃತ್ತರಾಗಲಿದ್ದಾರೆ.
No comments:
Post a Comment
If You Have any Doubts, let me Comment Here