BEd Second Round Seat Allotment Date
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2023-24ನೇ ಸಾಲಿನ ಬಿ.ಇಡಿ ಕೋರ್ಸಿನ ಪ್ರವೇಶಾತಿಗೆ ಸಂಬಂಧ, ಎರಡನೇ ಸುತ್ತಿನ ಅರ್ಹತಾ ಪಟ್ಟಿಯನ್ನು ಜ.12 ರಂದು ಬಿಡುಗಡೆ ಮಾಡಲಿದೆ. ಅರ್ಜಿ ಸಲ್ಲಿಸಿರುವವರು ನಾಳೆ ಇಲಾಖೆಯ ಅಂತರ್ಜಾಲಕ್ಕೆ ಭೇಟಿ ನೀಡಿ ಚೆಕ್ ಮಾಡಬಹುದು.
2023-24ನೇ ಸಾಲಿನ ಬಿ.ಇಡಿ ಕೋರ್ಸಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ 2ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ಜನವರಿ 12, 2024 ರಂದು ಬಿಡುಗಡೆ ಮಾಡಲಾಗುತ್ತದೆ.
ಬಿ.ಇಡಿ ಶಿಕ್ಷಣ ಕೋರ್ಸ್‌ಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ಸರ್ಕಾರಿ ಕೋಟಾದ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಅರ್ಹತೆ ಪಡೆಯದಿದ್ದಲ್ಲಿ, ಜನವರಿ 12ರಂದು ಬಿಡುಗಡೆ ಮಾಡುವ ಎರಡನೇ ಸುತ್ತಿನ ಅರ್ಹತಾ ಪಟ್ಟಿಯನ್ನು ತಪ್ಪದೇ ಚೆಕ್ ಮಾಡಿಕೊಳ್ಳಿ.
ಅಭ್ಯರ್ಥಿಗಳು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸ www.schooleducation.karnataka.gov.in / https://dosel.karnataka.gov.in ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಅರ್ಹತಾ ಪಟ್ಟಿ ಚೆಕ್ ಮಾಡಬಹುದು.
No comments:
Post a Comment
If You Have any Doubts, let me Comment Here