YuvaNidhi Scheme Document Information
ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯನ್ನು ಡಿಸೆಂಬರ್ 26ರ ಬೆಳಗ್ಗೆ 11.30ರಿಂದ ನೋಂದಣಿ ಆರಂಭವಾಗಲಿದೆ ಎಂದು ಮಾನ್ಯ ಸಚಿವರಾದ ಶರಣ ಪ್ರಕಾಶ ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ವೆಟ್ ಹಾಲ್ ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಯುವನಿಧಿ ಯೋಜನೆಯ ಲೋಗೋ ಹಾಗೂ ನೋಂದಣಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಆರು ತಿಂಗಳವರೆಗೆ ಯಾವುದೇ ಕೆಲಸ ಸಿಗದಿದ್ದರೆ ಅಥವಾ ಅವರು ಎಲ್ಲಾದ್ರೂ ಸ್ವಉದ್ಯೋಗ ಕೈಗೊಳ್ಳದಿದ್ದರೆ, ಉನ್ನತ ಶಿಕ್ಷಣಕ್ಕೆ ಹೋಗದಿದ್ದರೆ ಯುವನಿಧಿ ಯೋಜನೆಗೆ ಅರ್ಹರು. ಯುವನಿಧಿ ಯೋಜನೆಯಡಿ ಡಿಪ್ಲೋಮಾ ಪದವಿ ಪಡೆದವರಿಗೆ 1,500 ರೂ. ಪದವೀಧರರಿಗೆ 3,000 ರೂ.ಗಳನ್ನು ನಿರುದ್ಯೋಗ ಭತ್ಯೆಯನ್ನು ಎರಡು ವರ್ಷಗಳವರೆಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಜನವರಿ 12 ರಂದು ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆಯನ್ನು ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲಿ ಅರ್ಜಿ ಸಲ್ಲಿಸಬಹುದು?
ಪತ್ರಿ ತಿಂಗಳು 25 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಓನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಓನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಎಸ್ ಎಸ್ ಎಲ್ ಸಿ ಅಂಕ ಪಟ್ಟಿ
ಪಿಯುಸಿ ಅಂಕಪಟ್ಟಿ
ಸಿಇಟಿ ರಿಜಿಸ್ಟ್ರೇಶನ್
ರೇಷನ್ ಕಾರ್ಡ್
ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ
ಬ್ಯಾಂಕ ಖಾತೆಯ ವಿವರ
ಇ-ಮೇಲ್ ಐಡಿ
ಮೊಬೈಲ್ ಸಂಖ್ಯೆ
ಭಾವಚಿತ್ರ
No comments:
Post a Comment
If You Have any Doubts, let me Comment Here