JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Tuesday, December 19, 2023

Regarding the demand for installation of new technology biometric and CCTV

  Jnyanabhandar       Tuesday, December 19, 2023

Regarding the demand for installation of new technology biometric and CCTV

        ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು "ರಾಜ್ಯ ಸರ್ಕಾರಿ ನೌಕರರಿಗೆ" 7ನೇ ವೇತನ ಯೋಜನೆ ಜಾರಿಗೆ ತರುತ್ತಿರುವುದು ಶ್ಲಾಘನೀಯ ಮತ್ತು ಅದು ರಾಜ್ಯ ಸರ್ಕಾರಿ ನೌಕರರ ಹಕ್ಕು ಕೂಡ. ಸರ್ಕಾರಕ್ಕೂ ಮತ್ತು ಸರ್ಕಾರಿ ನೌಕರರಿಗೆ ಅಭಿನಂದನೆಗಳನ್ನು ತಿಳಿಸೋಣ.
ಆದರೆ, 7ನೇ ವೇತನ ಜಾರಿಗೆ ತರುವ ಮುನ್ನ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಇಲಾಖೆಗಳ ಸಚಿವಾಲಯಗಳಿಂದ ಹಿಡಿದು ಗ್ರಾಮ ಪಂಚಾಯಿತಿ ಕಚೇರಿಯವರೆಗೆ ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ಹೊಸ ತಂತ್ರಜ್ಞಾನ ಇರುವಂತಹ ಬಯೋಮೆಟ್ರಿಕ್ ಮತ್ತು ಸಿಸಿಟಿವಿ ಅಳವಡಿಸಬೇಕು.

ಬಯೋಮೆಟ್ರಿಕ್ ಉಪಕರಣವು
CCTV ಎದುರಿನಲ್ಲಿರಬೇಕು.
ಬಯೋಮೆಟ್ರಿಕ್ ಉಪಕರಣವು
ದಿನಾಂಕ/ತಿಂಗಳು/ವರ್ಷ ಸಮಯ,
GPRS ಆಧಾರಿತವಾಗಿರಬೇಕು.
FACE ಆಧಾರಿತವಾಗಿರಬೇಕು.
Finger print ಆಧಾರಿತವಾಗಿರಬೇಕು.
Aadhaar ಆಧಾರಿತವಾಗಿದ್ದು,
ಪ್ರತಿ ದಿನದ ಹಾಜರಾತಿ ನೇರವಾಗಿ HRMS ಗೆ ಲಿಂಕ್ ಆಗುವಂತಿರಬೇಕು, ಪ್ರತಿ ತಿಂಗಳ 25ನೇ ದಿನಾಂಕದೊಳಗೆ ಆಯಾ ಇಲಾಖೆಗಳ ಜಿಲ್ಲಾ ಕಚೇರಿಗಳಿಗೆ ಹಾಜರಾತಿಯ ಚೆಕ್-ಇನ್ ಮತ್ತು ಚೆಕ್-ಔಟ್ ದಾಖಲೆಗಳನ್ನು ಕಳುಹಿಸಿ HRMS ತಂತ್ರಾಂಶದ ಅನುಗುಣವಾಗಿ ವೇತನ (ಸಂಬಳ) ನೀಡುವಂತಾಗಬೇಕು.

ಮಾಹಿತಿಗಳ ಪ್ರಕಾರ 7ನೇ ವೇತನ ಪ್ರಮಾಣ 25 ರಿಂದ 30% ಹೆಚ್ಚಳವಾಗಲಿದೆ ಎಂಬ ಸುದ್ದಿ ಇದ್ದು ಇದನ್ನು ರಾಜ್ಯದ 5.25 ಲಕ್ಷ ನೌಕರರು ಪಡೆದುಕೊಳ್ಳಲಿದ್ದಾರೆ ಆದ್ದರಿಂದ ಸರ್ಕಾರವು ಖಾಸಗಿ ಕಂಪನಿಗಳಲ್ಲಿ ಇರುವಂತಹ ಹೊಸ ತಂತ್ರಜ್ಞಾನ ಬಯೋಮೆಟ್ರಿಕ್ ಹಾಜರಾತಿ ಪದ್ದತಿ ಜಾರಿಗೆ ತಂದರೆ ಉತ್ತಮ. ಜನರ ತೆರಿಗೆ ಹಣಕ್ಕೆ ಮತ್ತು ವೇತನಕ್ಕೆ ನ್ಯಾಯ ಸಿಗುತ್ತದೆ.

ಇಲ್ಲದಿದ್ದರೆ 10:00 ಗಂಟೆಗೆ ಆಫೀಸಿಗೆ ಬರುವವರು 11 ಗಂಟೆಗೆ, 12 ಗಂಟೆಗೆ ಬಂದರೆ ಮತ್ತು ಮಧ್ಯಾಹ್ನ 2 ಗಂಟೆಗೆ ಬರುವವರು 3 ಗಂಟೆಗೆ, 4 ಗಂಟೆಗೆ ಬಂದರೆ ಹೇಳೋರು ಇರುವುದಿಲ್ಲದೇ ಕೇಳುವವರು ಇರುವುದಿಲ್ಲದೇ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಕೊಳ್ಳುತ್ತಾರೆ. ಕೆಲವರು ಅವರವರೇ ಅಡ್ಜಸ್ಟ್ಮೆಂಟ್ ಮಾಡಿಕೊಂಡು ರಜಾ ಹಾಕಿಕೊಳ್ಳುತ್ತಾರೆ. ದಾಖಲೆಗಳಲ್ಲಿ ಸುಳ್ಳು ಹಾಜರಾತಿ ತೋರಿಸುತ್ತಾರೆ ಮತ್ತು ವೇತನ ಪಡೆಯುತ್ತಾರೆ. ಕೆಲವು ಅಧಿಕಾರಿಗಳು ಕಚೇರಿ ಕೆಲಸಕ್ಕಿಂತ ಹೆಚ್ಚಾಗಿ ರಾಜಕಾರಣಿಗಳ ಹಿಂದೆ ಸುತ್ತಾಡುತ್ತಾ ಕಾಲ ಕಳೆಯುತ್ತಾ ವೇತನ ಪಡೆಯುತ್ತಾರೆ.
ಕೆಲವರು ಯಾವುದೇ ದಾಖಲೆಗಳಿಲ್ಲದೆ, ಸ್ವಂತ ಕೆಲಸಗಳಿಗೆ ಸುಳ್ಳು ಹೇಳಿಕೊಂಡು ಮೀಟಿಂಗ್ ಇದೆ, ಟ್ರೈನಿಂಗ್ ಇದೆ, ಅಧಿಕಾರಿಗಳನ್ನು ನೋಡಬೇಕು, ಬ್ಯಾಂಕಿಗೆ ಹೋಗಬೇಕು, ಜಿಲ್ಲಾ ಕಚೇರಿಗೆ ಹೋಗಬೇಕು ಈ ರೀತಿಯ ನಾನಾ ಸಬೂಬುಗಳನ್ನು ಹೇಳಿ ಕಾಲಹರಣ ಮಾಡಿ ವೇತನ ಪಡೆಯುತ್ತಾರೆ



logoblog

Thanks for reading Regarding the demand for installation of new technology biometric and CCTV

Previous
« Prev Post

No comments:

Post a Comment

If You Have any Doubts, let me Comment Here