RDWS AE and JE Important News
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ AE & JE ಹುದ್ದೆಗಳ ನೇಮಕಾತಿಯ ಆಯ್ಕೆಪಟ್ಟಿಗೆ ಕುತ್ತು ಬಂದಿದೆ.!!
⚫ ಹೈದರಾಬಾದ್ ಕರ್ನಾಟಕ ಮೀಸಲಾತಿಯ ಫೆಬ್ರವರಿ-1 ರ ಸುತ್ತೋಲೆಯನ್ನು ರದ್ದುಪಡಿಸಿದ KAT.!!
⚫ ಸುತ್ತೋಲೆಯಲ್ಲಿ ಏನಿದೆ.? KAT ಆದೇಶದಲ್ಲಿ ಏನಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ.
ಆಯೋಗದ ದಿನಾಂಕ 21.02.2022 ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ ಗ್ರೇಡ್-1 259+59 ಹುದ್ದೆಗಳ ನೇಮಕಾತಿ ಸಂಬಂಧ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಾಗಿದ್ದ ಅರ್ಜಿ ಸಂಖ್ಯೆ 2688-2689/2023 ರ ಸಂಬಂಧ ದಿನಾಂಕ 08-11-2023ರಂದು ನೀಡಿರುವ ಅಂತಿಮ ಆದೇಶದ ಕುರಿತಂತೆ ಆಯೋಗವು ದಿನಾಂಕ 5-12&2023ರ ಸಭೆಯಲ್ಲಿ ಕೂಲಂಕುಶವಾಗಿ ಚರ್ಚಿಸಿ ಮಾನ್ಯ ನ್ಯಾಯ ಮಂಡಳಿಯ ಆದೇಶವನ್ನು ಪಾಲಿಸಿದ್ದಲ್ಲಿ ಹಲವು ನೇಮಕಾತಿ ಅಧಿಸೂಚನೆಗಳಿಗೆ ತೊಂದರೆ ಯಾವುದರಿಂದ ಆದೇಶವನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ತುರ್ತಾಗಿ ಸಲ್ಲಿಸಲು ತೀರ್ಮಾನಿಸಲಾಗಿರುತ್ತದೆ ಸದರಿ ಪ್ರಕರಣದಲ್ಲಿ ನಿಯಮಗಳನ್ನು ರೂಪಿಸುವ ಸಕ್ಷಮ ಪ್ರಾಧಿಕಾರವಾದ ಸರ್ಕಾರವು ಮೊದಲನೇ ಪ್ರತಿವಾದಿಯಾಗಿದ್ದು ಮಾನ್ಯ ನ್ಯಾಯ ಮಂಡಳಿಯು ರದ್ದುಪಡಿಸಿರುವ ಆದೇಶದ ಕುರಿತಂತೆ ಸರ್ಕಾರದ ನಿಲುವು ಈ ವಿಷಯದಲ್ಲಿ ಅತಿ ಮುಖ್ಯವಾಗಿರುತ್ತದೆ ಆದ್ದರಿಂದ ಸದರಿ ವಿಷಯವನ್ನು ಅತಿ ಜರೂರು ಎಂದು ಪರಿಗಣಿಸಿ ತಮ್ಮ ನಿಲುವನ್ನು ಶೀಘ್ರವಾಗಿ ತಿಳಿಸುವಂತೆ ಉಲ್ಲೇಖ 3ರ ಪತ್ರದಲ್ಲಿ ಕೋರಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ KAT ಆದೇಶವನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here