ರಾಜ್ಯದ ಎಲ್ಲಾ ಜಿಲ್ಲಾ / ಉಪ ಖಜಾನೆಗಳ ಅಧಿಕಾರಿ/ನೌಕರರಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳನ್ನು ಸಲ್ಲಿಸುವಾಗ ಅಗತ್ಯ ನಮೂನೆಗಳು, ಮೊಹರು, ಸಹಿ ಇಲ್ಲದೆ ಹಾಗೂ ಇನ್ನೂ ಅನೇಕ ರೀತಿಯ ವಿಚಾರಗಳನ್ನು ನಿಯಮಾನುಸಾರ ಪರಿಶೀಲಿಸದೆ ಯತಾವತ್ತಾಗಿ ಪ್ರಸ್ತಾವನೆಗಳನ್ನು ಆಯುಕ್ತಾಲಯಕ್ಕೆ ಸಲ್ಲಿಸುತ್ತಿರುವುದು ಕಂಡುಬಂದಿದ್ದು, ಈಗಾಗಲೇ ಅನೇಕ ಬಾರಿ ಸುತ್ತೋಲೆಗಳನ್ನು ಹೊರಡಿಸಿದ್ದರೂ ಸಹ ಅದೇ ರೀತಿಯಲ್ಲಿ ಮುಂದುವರೆಯುತ್ತಿರುವುದು ಕಂಡು ಬಂದಿರುತ್ತದೆ,
ಇನ್ನು ಮುಂದೆ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳ ಮೇಲು ಸಹಿ ಹಾಗೂ ಅನುದಾನ ಬಿಡುಗಡೆಗೆ ಪ್ರಸ್ತಾವನೆಯನ್ನು ಆಯುಕ್ತಾಲಯಕ್ಕೆ ಸಲ್ಲಿಸುವ ಮೊದಲು ಆಕ್ಷೇಪಣೆಗೆ ಅವಕಾಶ ನೀಡದಂತೆ ಈ ಕೆಳಕಂಡ ಅಂಶಗಳನ್ನು ತಮ್ಮ ಹಂತದಲ್ಲಿಯೇ ಕೂಲಂಕುಶವಾಗಿ ಪರಿಶೀಲಿಸಿ ಬಿಲ್ಲು ಗಳನ್ನು ದೃಢೀಕರಿಸಿ ಸಲ್ಲಿಸಲು ಸೂಚಿಸಿದ ಬಗ್ಗೆ.
Click here to Download the PDF file 🗄️🗃️🗃️🗃️🗃️
ಸರ್ಕಾರಿ ನೌಕರರ ಆರೋಗ್ಯ ವೆಚ್ಚ ಮರುಪಾವತಿ, ಗಳಿಕೆ ರಜೆ ನಗದೀಕರಣ, ಇತರೆ ರೂಲ್ಸ್ ಬಗ್ಗೆ ಇಲ್ಲಿದೆ ಮಾಹಿತಿ
ಸರ್ಕಾರಿ ನೌಕರರ ಆರೋಗ್ಯ ವೆಚ್ಚ ಮರುಪಾವತಿ ನಿಯಮಗಳು ಏನಿವೆ? ಸರ್ಕಾರಿ ನೌಕರರಿಗೆ ಗಳಿಕೆ ರಜೆ ನಗದೀಕರಣ ರೂಲ್ಸ್ ಏನಿವೆ, ಕಾಲಮಿತಿ ವೇತನ ಬಡ್ತಿ ರೂಲ್ಸ್ ಏನು ಹೇಳುತ್ತವೆ, ಮೂಲ ವೇತನ ಕುರಿತು ನಿಯಮಗಳು ಏನಿವೆ ಎಂದು ಕೆಲವು ಸಂದರ್ಭಗಳಿಗೆ ತಕ್ಕಂತೆ ರೂಲ್ಸ್ ಏನು ಹೇಳುತ್ತವೆ ಎಂದು ಪ್ರಶ್ನೆ ಹಾಗೂ ಉತ್ತರಗಳನ್ನು ಇಲ್ಲಿ ನೀಡಲಾಗಿದೆ
ಸರ್ಕಾರಿ ನೌಕರಿಗೆ ಸೇರುವವರು ಅವರಿಗೆ ಮುಂದೆ ಯಾವೆಲ್ಲ ನಿಯಮಗಳು ಅನ್ವಯವಾಗುತ್ತದೆ, ತಮ್ಮ ಸ್ವತಂತ್ರ, ಸೇವೆ, ಸೌಲಭ್ಯಗಳಿಗೆ ಏನೆಲ್ಲಾ ನಿಯಮಗಳಿವೆ ಎಂದು ಒಮ್ಮೆಯೇ ತಿಳಿಯಲು ಸಾಧ್ಯವಿಲ್ಲ. ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಹಿರಿಯರಲ್ಲಿ ಕೇಳಿ ತಿಳಿಯುವ ಅಥವಾ ಸೇವಾ ನಿಯಮಾವಳಿಗಳನ್ನು ಓದಿ ತಿಳಿಯುವ ಕೆಲಸ ಮಾಡಬೇಕಾಗುತ್ತದೆ. ಒಂದಂತು ನಿಜ, ಸರ್ಕಾರಿ ಸೇವಾ ನಿಯಮಾವಳಿಗಳನ್ನು ಎಲ್ಲವನ್ನು ಒಮ್ಮೆಲೇ ಓದಿ ಮುಗಿಸಲು ಬಹುಸಂಖ್ಯಾತರು ಮುಂದಾಗುವುದಿಲ್ಲ. ತಮಗೆ ಅಗತ್ಯ ಬಿದ್ದಂತೆ ಯಾವುದಾದರೂ ರೂಲ್ಸ್ ಬೇಕಾದಲ್ಲಿ ತಿಳಿಯಲು ಯತ್ನಿಸುವುದು ಸರ್ವೇ ಸಾಮಾನ್ಯ. ಆದ್ದರಿಂದ ಇಂದಿನ ಲೇಖನದಲ್ಲಿ ಕೆಲವು ರೂಲ್ಸ್‌ಗಳ ಬಗ್ಗೆ ಪ್ರಶ್ನೆಗಳನ್ನು ಹಾಗೂ ಅವುಗಳಿಗೆ ಉತ್ತರವನ್ನು ಸಹ ನೀಡಲಾಗಿದೆ.
No comments:
Post a Comment
If You Have any Doubts, let me Comment Here