KSRTC Technical Assistant Document Verification Call Letter 2023
KSRTC ಯಲ್ಲಿನ Technical Assistant ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-26 ರಿಂದ ನಡೆಯುವ ದೇಹದಾರ್ಡ್ಯತೆ & Document Verification ಗೆ Call Letter ಡೌನ್‌ಲೋಡ್ ಮಾಡಲು ಲಿಂಕ್ ಇದೀಗ ಪ್ರಕಟಗೊಂಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿತ್ತು. ಈ ಹುದ್ದೆಗಳಿಗೆ ಡಿ.26ರಿಂದ ದಾಖಲಾತಿ ಮತ್ತು ದೇಹದಾರ್ಢ್ಯತೆ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಕರೆಪತ್ರವನ್ನು ಬಿಡುಗಡೆ ಮಾಡಲಾಗಿದ್ದು, ಅರ್ಜಿ ಸಲ್ಲಿಸಿದ್ದವರು ಡೌನ್ ಲೋಡ್ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ KSRTC ಮಾಹಿತಿ ಹಂಚಿಕೊಂಡಿದ್ದು, ಜಾಹಿರಾತು ಸಂಖ್ಯೆ 01/2018 ದಿನಾಂಕ 17/3/2018ರಲ್ಲಿ ಅಧಿಸೂಚಿಸಿರುವ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಸಂಬಂಧಿಸಿದಂತೆ CAT ಪರೀಕ್ಷೆಯಲ್ಲಿ ಕನಿಷ್ಠ 30 ಅಂಕ ಪಡೆದ ಅಭ್ಯರ್ಥಿಗಳಿಗೆ ದಿನಾಂಕ: 26/12/2023 ರಿಂದ 28/12/2023 ರವರೆಗೆ ನಡೆಯುವ ದಾಖಲಾತಿ ಮತ್ತು ದೇಹದಾರ್ಢ್ಯತೆ ಪರಿಶೀಲನೆ ಬಗ್ಗೆ ಕರೆಪತ್ರ ಡೌನ್ಲೋಡ್ ಮಾಡಿಕೊಳ್ಳಲು ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ SMS ಮೂಲಕ ತಿಳಿಸಲಾಗಿದೆ ಎಂದಿದೆ.
ಮುಂದುವರೆದು, ಕೂಡಲೇ ಅರ್ಹ ಅಭ್ಯರ್ಥಿಗಳು ನಿಗಮದ ವೆಬ್ ಸೈಟ್ ksrtcjobs.karnataka.gov.in ನಲ್ಲಿ ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಹಾಗೂ ಪರಿಶೀಲನೆಗೆ ಸಂಬಂಧಪಟ್ಟ ದಿನಾಂಕಗಳಂದು ಹಾಜರಾಗಲು ಮತ್ತೊಮ್ಮೆ ತಿಳಿಸಲಾಗಿದೆ.
No comments:
Post a Comment
If You Have any Doubts, let me Comment Here