FDA Additional Selection List Cutoff Marks 2019
2019ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ HK ಮತ್ತು RPC ವೃಂದದ ಪ್ರಥಮ ದರ್ಜೆ ಸಹಾಯಕರು ( FDA ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆ ಪಟ್ಟಿಯ ( Additional Select List Cutoff) ಕಟ್ ಆಫ್ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.
ಆಯೋಗದ ಅಧಿಸೂಚನೆ ಸಂಖ್ಯೆ: PSC E(2)3070/2019-20, ದಿನಾಂಕ:31-01-2020ರ ಅಧಿಸೂಚನೆ ಹಾಗೂ ಉಲ್ಲೇಖಿತ 02 ರಿಂದ 06ರ ವರೆಗಿನ ಸೇರ್ಪಡೆ/,ತಿದ್ದುಪಡಿ/ಪರಿಷ್ಕೃತ ಅಧಿಸೂಚನೆಗಳನ್ನು ಪ್ರಕಟಿಸಲಾಗಿತ್ತು. ತದನಂತರ ಉಲ್ಲೇಖಿತ 7ರಲ್ಲಿ ಅಂತಿಮ ಆಯ್ಕೆ ಪಟ್ಟಿ ಮತ್ತು ಉಲ್ಲೇಖಿತ 8ರ ಅನ್ವಯ ದಿನಾಂಕ 17-02-2023 ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪ್ರಸ್ತುತ ಕರ್ನಾಟಕ ನಾಗರಿಕ ಸೇವೆಗಳ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978 ರನ್ವಯ ಹೈದರಾಬಾದ್ ಕರ್ನಾಟಕ ವೃಂದದ 12 ಮತ್ತು ಉಳಿಕೆ ಮೂಲ ವೃಂದದ 17 ವಿವಿಧ ಇಲಾಖೆಗಳಿಂದ ಹೆಚ್ಚುವರಿ ಆಯ್ಕೆ ಪಟ್ಟಿಗಾಗಿ ಪ್ರಸ್ತಾವನೆಗಳು ಸ್ವೀಕೃತವಾಗಿದ್ದು, ನಿಯಮಾನುಸಾರ ಶೇಕಡ 30ರ ವರ್ಗೀಕರಣಕ್ಕೆ ಸೀಮಿತಗೊಳಿಸಿ, ಪ್ರಸ್ತಾವನೆಗಳು ಸ್ವೀಕೃತವಾದ ಕಾಲಾನುಕ್ರಮಣಿಕೆಯನುಸಾರ ಹೈದರಾಬಾದ್ ಕರ್ನಾಟಕ ವೃಂದದ 12 ಮತ್ತು ಉಳಿಕೆ ಮೂಲ ವೃಂದದ 17 ವಿವಿಧ ಇಲಾಖೆಗಳಿಂದ 24+103 ಸಹಾಯಕರು/ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯ ಕಟ್ ಆಫ್ ಅಂಕಗಳನ್ನು ಸಿದ್ದಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ KPSCಯು ಪ್ರಕಟಿಸಿದೆ.
No comments:
Post a Comment
If You Have any Doubts, let me Comment Here