Regarding the implementation of 08 Beneficiary Oriented Schemes of Department of Empowerment of Persons with Disabilities and Senior Citizens under Seva Sindhu (DBT-Direct Cash Transfer) programme.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 08 ಫಲಾನುಭವಿ ಆಧಾರಿತ ಯೋಜನೆಗಳನ್ನು ಡಿ.ಬಿ.ಟಿ (ನೇರ ನಗದು ವರ್ಗಾವಣೆ) ವೇದಿಕೆಯಲ್ಲಿ ಅಳವಡಿಸಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅನುಷ್ಠಾನಗೊಳಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 08 ಫಲಾನುಭವಿ ಆಧಾರಿತ ಯೋಜನೆಗಳನ್ನು ಸೇವಾ ಸಿಂಧು (ಡಿ.ಬಿ.ಟಿ-ನೇರ ನಗದು ವರ್ಗಾವಣೆ) ತಂತ್ರಾಂಶದಡಿ ಅನುಷ್ಠಾನಗೊಳಿಸಲಾಗಿರುತ್ತದೆ.
1) ಆಧಾರ ಯೋಜನ
2) ಮೆರಿಟ್ ವಿದ್ಯಾರ್ಥಿಗಳಿಗಾಗಿ ಪ್ರೋತ್ಸಾಹಧನ ಯೋಜನೆ
3) ಮರಣ ಪರಿಹಾರ ನಿಧಿ
4) ವೈದ್ಯಕೀಯ ಪರಿಹಾರ ನಿಧಿ
5) ಪ್ರತಿಭೆ ಯೋಜನ
6) ಸಾಧನೆ ಯೋಜನ
7) ನಿರುದ್ಯೋಗ ಭತ್ಯೆ
8) ಶಿಶುಪಾಲನಾ ಭತ್ಯೆ
ಈ ಹಿನ್ನೆಲೆಯಲ್ಲಿ ಮೇಲಿನ 08 ಯೋಜನೆಗಳನ್ನು ಸೇವಾ ಸಿಂಧು ಮೂಲಕ ಲೈವ್ ಮಾಡಲಾಗಿದ್ದು, 2023-24ನೇ ಸಾಲಿಗೆ 08 ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ (https://sevasindhu.karnataka.gov.in/Sevasindhu/Department Services) ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ:15.11.2023 ರವರೆಗೆ ಅರ್ಜಿ ಸಲ್ಲಿಸಲು ವಿಸ್ತರಿಸಲಾಗಿದ್ದು, ಅರ್ಹ ವಿಕಲಚೇತನರು ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನ ಮಾಹಿತಿ ಸಲಹಾ ಕೇಂದ್ರ ದೂ.ಸಂ.080-29787441 ಗೆ ಸಂಪರ್ಕಿಸಬಹುದು.
No comments:
Post a Comment
If You Have any Doubts, let me Comment Here