KPTCL Document Verification 2022
KPTCL ನಲ್ಲಿನ AE & JE (Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 29-11-2023ರಂದು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗಲು KPTCL ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿವಿಧ ಎಸ್ಕಾಂಗಳಲ್ಲಿನ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ (ವಿದ್ಯುತ್ / ಸಿವಿಲ್) ಹುದ್ದೆಗಳ ನೇಮಕಾತಿಗೆ 2022 ರ ಜುಲೈ, ಆಗಸ್ಟ್ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಿ ಇತ್ತೀಚೆಗೆ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.
ಇದೀಗ ಸದರಿ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳನ್ನ ಪ್ರಕಟಿಸಲಾಗಿದೆ.
ದಾಖಲೆ ಪರಿಶೀಲನೆಯ ಮೊದಲ ಕ್ರಮವಾಗಿ ಅಭ್ಯರ್ಥಿಗಳು ಮೊದಲಿಗೆ ಡಿಜಿಲಾಕರ್ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಂಡು, ತಮ್ಮ ಆಧಾರ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು. ನಂತರ 10th, 12th, ಪದವಿ / ಡಿಪ್ಲೊಮ ಅಂಕಪಟ್ಟಿಗಳು / ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರ, ಹೆಚ್‌ಕೆ ಪ್ರಮಾಣ ಪತ್ರ, UDID ಕಾರ್ಡ್ ಪ್ರಮಾಣ ಪತ್ರಗಳನ್ನು Issued Documents ನಲ್ಲಿ ಪಡೆಯಬೇಕು.
ಒಂದು ವೇಳೆ ಡಿಜಿಲಾಕರ್‌ನಲ್ಲಿ ಪಡೆಯಲಾಗದ ಪ್ರಮಾಣ ಪತ್ರಗಳನ್ನು 200KB ಮೀರದಂತೆ ಪಿಡಿಎಫ್ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಲಾಗಿದೆ.
ಅಭ್ಯರ್ಥಿಗಳು ಎಲ್ಲ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ತಮ್ಮ ಆಧಾರ್ ಸಂಖ್ಯೆಯೊಂದಿಗೆ e-sign ಮಾಡುವುದು. e-sign ಮಾಡುವ ಮುನ್ನ ತಾವು ಎಲ್ಲಾ ದಾಖಲಾತಿಗಳನ್ನು ನಿಗಧಿತ ನಮೂನೆಗಳಲ್ಲಿ ಅಪ್‌ಲೋಡ್ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಅದರ ಒಂದು ಮುದ್ರಿತ ಪ್ರತಿಯನ್ನು ಸಾಫ್ಟ್ ಕಾಪಿ ಪಡೆದುಕೊಳ್ಳಬೇಕು.
No comments:
Post a Comment
If You Have any Doubts, let me Comment Here