JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, November 2, 2023

Karnataka Various Districts Titles

  Jnyanabhandar       Thursday, November 2, 2023
Which title for which district of Karnataka

ವಿಶ್ವದ ಎಲ್ಲಾ ಭಾಷೆಗಳ ರಾಣಿ 'ಕನ್ನಡ', ಹೀಗಾಗಿ ಕನ್ನಡವನ್ನ ಜಗತ್ತಿನಾದ್ಯಂತ ಸುಂದರ ಭಾಷೆ ಎಂದು ಕರೆಯುತ್ತಾರೆ. ಹಾಗೇ ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸ ಕೂಡ ಇದ್ದು, ಕರ್ನಾಟಕ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕನ್ನಡ ಭಾಷೆಯನ್ನು ಕೋಟಿ ಕೋಟಿ ಜನರು ಕಲಿಯುತ್ತಿದ್ದಾರೆ.ಇದರ ಜೊತೆಗೆ ಕನ್ನಡ ನಾಡು ಭೌಗೋಳಿಕವಾಗಿ ಹಲವು ವಿಶೇಷತೆಗಳನ್ನು ಹೊಂದಿದೆ.

ಅಂದ ಹಾಗೆ ಕರ್ನಾಟಕ ರಾಜ್ಯ ಭೌಗೋಳಿಕವಾಗಿ ಒಂದೇ ರೀತಿ ಇಲ್ಲ. ದಕ್ಷಿಣ ಭಾಗದಲ್ಲಿ ಒಂದು ರೀತಿಯ ವಾತಾವರಣ ಇದ್ದರೆ, ಉತ್ತರ ಕರ್ನಾಟಕದಲ್ಲಿ ಒಂದು ರೀತಿ ವಾತಾವರಣ ಕಾಣಬಹುದು. ಇದರ ಜೊತೆಗೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗ ಹಸಿರಿನ ಸಿರಿಯನ್ನು ಪಸರಿಸುತ್ತದೆ. ಇದೇ ಕಾರಣಕ್ಕೆ ಕರ್ನಾಟಕದ ಒಂದೊಂದು ಜಿಲ್ಲೆಯೂ ಒಂದು ಬಿರುದು ಪಡೆದಿದೆ. ಹಾಗಾದರೆ ಕರ್ನಾಟಕದ ಜಿಲ್ಲೆಗಳಿಗೆ ಇರುವ ಬಿರುದು ಏನು? ರಾಜ್ಯದ ಯಾವ ಜಿಲ್ಲೆ ಯಾವುದಕ್ಕೆ ಹೆಗ್ಗಳಿಕೆ ಪಡೆದಿದೆ ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕರ್ನಾಟಕದ ಯಾವ ಜಿಲ್ಲೆಗೆ ಯಾವ ಬಿರುದು?

1). ವಿಜಯಪುರ - ಗುಮ್ಮಟ ನಗರಿ

2). ಧಾರವಾಡ - ಪೇಡಾ ನಗರಿ

3). ಗದಗ - ಮುದ್ರಣ ನಗರಿ

4). ಗೋಕಾಕ - ಕರದಂಟು ನಗರಿ

5). ಬೆಳಗಾವಿ - ಕುಂದಾ ನಗರಿ

6). ಮಂಗಳೂರು - ಬಂದರು ನಗರಿ

7). ಮಡಿಕೇರಿ - ಮಂಜಿನ ನಗರಿ

8). ಬೆಂಗಳೂರು - ಉದ್ಯಾನ ನಗರಿ

9). ಹಾವೇರಿ - ಏಲಕ್ಕಿ ನಗರಿ

10). ಉಡುಪಿ - ಕೃಷ್ಣ ನಗರಿ

11). ದಾವಣಗೆರೆ - ಬೆಣ್ಣೆ ನಗರಿ

12). ಗಂಗಾವತಿ - ಭತ್ತದ ಕಣಜ

13). ಮೈಸೂರು - ಸಾಂಸ್ಕೃತಿಕ ನಗರಿ

14). ಬಾಗಲಕೋಟೆ - ಕೋಟೆ ನಾಡು

15). ಬಳ್ಳಾರಿ - ಗಣಿ ನಾಡು

16). ಚಿತ್ರದುರ್ಗ - ಕೋಟೆ ನಾಡು

17). ತುಮಕೂರು - ಕಲ್ಪತರು ನಾಡು

18). ಕೋಲಾರ - ಚಿನ್ನದ ನಾಡು

19). ಚನ್ನಪಟ್ಟಣ - ಬೊಂಬೆ ನಾಡು

20). ಮಂಡ್ಯ - ಸಕ್ಕರೆ ನಾಡು

21). ರಾಮನಗರ - ರೇಷ್ಮೆ ನಾಡು

22). ಚಿಕ್ಕಮಗಳೂರು - ಕಾಫಿ ನಾಡು

23). ಬಾದಾಮಿ - ಚಾಲುಕ್ಯರ ನಾಡು

24). ತಲಕಾಡು - ಗಂಗರ ನಾಡು

25). ರಾಯಚೂರು - ಬಿಸಿಲ ನಾಡು

26). ಶಿವಮೊಗ್ಗ - ಮಲೆನಾಡಿನ ಹೆಬ್ಬಾಗಿಲು

27). ಕಲಬುರಗಿ - ತೊಗರಿ ಕಣಜ

28). ಕಾರವಾರ - ಜಲಪಾತಗಳ ತವರೂರು

29). ಭದ್ರಾವತಿ - ಕೈಗಾರಿಕೆಗಳ ನಗರಿ

30). ಯಾದಗಿರಿ - ಗಿರಿಗಳ ನಾಡು

31). ಬೀದರ್ - ಸೂಫಿ ಸಂತರ ನಾಡು

32). ಬನವಾಸಿ - ಕದಂಬರ ನಾಡು

ಜಗತ್ತಿಗೆ ಗೊತ್ತು ಕನ್ನಡ ನಾಡಿನ ಗತ್ತು!

ಕನ್ನಡ ಭಾಷೆ & ಕನ್ನಡ ನಾಡಿನ ಸಂಸ್ಕೃತಿ ಬಗ್ಗೆ ಜಗತ್ತಿಗೆ ಗೊತ್ತು. ಸಾವಿರಾರು ವರ್ಷಗಳಿಂದ ಕನ್ನಡಿಗರ ಜೊತೆಗೆ ವ್ಯವಹರಿಸುತ್ತಿರುವ ವಿವಿಧ ದೇಶಗಳಲ್ಲಿ, ಕನ್ನಡ ಭಾಷೆ ಇತಿಹಾಸ ಸಾರುವ ಸಾಕ್ಷ್ಯಗಳು ಸಿಗುತ್ತವೆ. ಇಂತಿಪ್ಪ ಕನ್ನಡ ನಾಡು ಹರಿದು ಹಂಚಿಹೋಗಿ, ಹಲವು ರಾಜ್ಯಗಳಲ್ಲಿ ಸೇರಿಕೊಂಡಿತ್ತು. ಆದರೆ ಹೀಗೆ ಬೇರೆಯಾಗಿದ್ದ ಕರ್ನಾಟಕ ಒಗ್ಗೂಡಿ, ಕರ್ನಾಟಕ ಎಂಬ ಹೆಸರು ಪಡೆದು ಅರ್ಧಶತಮಾನ ಕಳೆದಿದೆ. ಈ ಸಂಭ್ರಮದಲ್ಲಿ ಕನ್ನಡ ನಾಡಿನ ಕೀರ್ತಿ ಕೂಡ ಇಡೀ ಜಗತ್ತಿನಾದ್ಯಂತ ನಳನಳಿಸುತ್ತಿದೆ.


logoblog

Thanks for reading Karnataka Various Districts Titles

Previous
« Prev Post

No comments:

Post a Comment

If You Have any Doubts, let me Comment Here