Scheduled Caste and Scheduled Tribe applicants are provided for free training for UPSC, KAS, Banking and other competitive examinations in top training institutions.
Instructions:
☞ Online application for 2023-24 is now open, applicants must read the notification once and then apply using their login.
☞ Last date to Apply Application is 29/11/2023 at 5:30 PM
ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಮತ್ತು ವಸತಿಯುತ ಸಂಯೋಜಿತ ಪದವಿಯೊಂದಿಗೆ ಯುಪಿಎಸ್‌ಸಿ / ಕೆಎಎಸ್ ತರಬೇತಿಗೆ ನಿಯೋಜಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
UPSC, KAS, BANKING, SSC, RRB, GROUP-C ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ.
ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನು, ಅವರು ಕೋಚಿಂಗ್ ಪಡೆಯುವ ನಗರ/ ಸಿಟಿಗಳ ಆಧಾರದಲ್ಲಿ ಕೆಳಗಿನಂತೆ ನೀಡಲಾಗುತ್ತದೆ.
ದೆಹಲಿ : 10,000
ಹೈದೆರಾಬಾದ್ : ರೂ.8000
ಕರ್ನಾಟಕ : ರೂ.6000
ಚೆನ್ನೈ : ರೂ.5000
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಅವಧಿ ಕೆಳಗಿನಂತಿದೆ.
ಯುಪಿಎಸ್‌ಸಿ : 9 ತಿಂಗಳು
ಕೆಎಎಸ್ : 7 ತಿಂಗಳು
ಎಸ್‌ಎಸ್‌ಸಿ : 3 ತಿಂಗಳು
ಬ್ಯಾಂಕಿಂಗ್: 3 ತಿಂಗಳು
ಆರ್‌ಆರ್‌ಬಿ: 3 ತಿಂಗಳು
ಗ್ರೂಪ್ ಸಿ: 3 ತಿಂಗಳು
ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು
ಅಭ್ಯರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರಬೇಕು.
ಕೆಇಎ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸೆಲೆಕ್ಟ್ ಮಾಡಲಾಗುತ್ತದೆ.
ಈ ಹಿಂದೆ ಇದೇ ಇಲಾಖೆ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಹಾಕಲು ಅರ್ಹರಲ್ಲ.
ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
ಸಾಮಾನ್ಯ ಪ್ರವೇಶ ಪರೀಕ್ಷಾ ದಿನಾಂಕವನ್ನು ಇಲಾಖಾ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ.
ತರಬೇತಿಯನ್ನು ದೆಹಲಿ, ಹೈದೆರಾಬಾದ್, ಬೆಂಗಳೂರು, ಚೆನ್ನೈ ಮೊದಲಾದ ನಗರಗಳಲ್ಲಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆಯಿಂದ ಕೊಡಿಸಲಾಗುತ್ತದೆ.
ಉಚಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಅರ್ಜಿ ಸಲ್ಲಿಸುವ ವಿಧಾನ.
Step-1 ಸಮಾಜ ಕಲ್ಯಾಣ ಇಲಾಖೆ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ವೆಬ್‌ಸೈಟ್‌ಗೆ ಭೇಟಿ ನೀಡಿ.
Step-2 ಓಪನ್ ಆದ ಪೇಜ್‌ನಲ್ಲಿ 'Student Login' ಎಂದಿರುವಲ್ಲಿ ಕ್ಲಿಕ್ ಮಾಡಿ.
Step-3 ನಂತರ ಮತ್ತೊಂದು ಹೊಸ ವೆಬ್‌ಪೇಜ್ ಓಪನ್ ಆಗುತ್ತದೆ.
Step-4 ಇಲ್ಲಿ 'Create Account' ಎಂದಿರುವಲ್ಲಿ ಕ್ಲಿಕ್ ಮಾಡಿ.
Step-5 ಪ್ರಸ್ತುತ ತೆರೆಯುವ ವೆಬ್‌ಪುಟದಲ್ಲಿ ಕೇಳಲಾದ ಮಾಹಿತಿ ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.
Step-6 ನಂತರ ನೀವು ಬಯಸುವ ಪರೀಕ್ಷೆ ತರಬೇತಿಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ನೇರವಾದ ಲಿಂಕ್
No comments:
Post a Comment
If You Have any Doubts, let me Comment Here