Criteria to be followed while issuing medical certificate regarding disability.
ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಅಂಗವಿಕಲತೆಯ ಬಗ್ಗೆ ವೈದಕೀಯ ಪ್ರಮಾಣ ಪತವನ್ನು ನೀಡುವಾಗ ಅನುಸರಿಸಬೇಕಾದ ಮಾನದಂಡಗಳ ಕುರಿತು ಹೊಸ ಸುತ್ತೋಲೆ ಹೊರಡಿಸಿದೆ.
ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು. ಬೆಂಗಳೂರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಉಚ್ಚ ನ್ಯಾಯಾಲಯದ ಆದೇಶ ದಿನಾಂಕ 22/09/2022 ಉಲ್ಲೇಖ ಮಾಡಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರ ನೀಡುವಾಗ ತಿದ್ದಿ ಬರೆಯುವುದು, ಓದಲು ಸಾಧ್ಯವಾಗದಂತೆ ಬರೆಯುವುದು ಮತ್ತು ಪ್ರಮಾಣ ಪತ್ರದಲ್ಲಿ ನಮೂದಿಸಿದ ಅಂಗವಿಕಲತೆ ಕ್ಯಾಲ್ಕುಲೇಷನ್ ಸೀಟ್ ಲಗತಿಸದೆ ಇರುವುದು ಕಂಡುಬಂದಿರುತ್ತದೆ ಇಂತಹ ಸಂದರ್ಭದಲ್ಲಿ ಇತರೆ ಇಲಾಖೆಗಳಿಗೆ ನೇಮಕಾತಿ ಸಂದರ್ಭದಲ್ಲಿ ವೈದ್ಯಕೀಯ ರಜೆ ಖಾತರಿಗೊಳಿಸುವ ಸಲುವಾಗಿ ಸ್ವಯಂ ನಿವೃತ್ತಿ ಸಂದರ್ಭದಲ್ಲಿ ಬಂದ ಬದಲಾವಣೆ ಸಂದರ್ಭದಲ್ಲಿ ಮರುಪರಿಶೀಲನೆ ಕೋರಿಕೆ ನೀಡಿರುತ್ತಾರೆ.
ಇಂತಹ ಸಂದರ್ಭದಲ್ಲಿ ಇತರೆ ವೈದ್ಯಕೀಯ ಮಂಡಳಿಗಳಿಗೆ ನಿರ್ದೇಶಿಸಿದಾಗ ಅಥವಾ ಅದಕ್ಕ ಆಸ್ಪತ್ರೆಯ ವೈದ್ಯಕೀಯ ಮಂಡಳಿಗಳಿಗೆ ನಿರ್ದೇಶಿಸಿದಾಗ ವ್ಯತ್ಯಾಸ ಕಂಡು ಬಂದಿರುತ್ತದೆ. ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಅಂಗವಿಕಲತೆಯ ಶೇಕಡವಾರು ಹೆಚ್ಚಿನ ಬದಲಾವಣೆಯಲ್ಲಿ ವಿಚಾರಣೆಗಾಗಿ ಮೂಲ ಅಂಗವಿಕಲತೆಯ ಪ್ರಮಾಣ ಪತ್ರಕ್ಕೆ ಬೇಕಾದ ಪೂರಕ ದಾಖಲೆಗಳು ವೇದಿಕೆಯ ಪರೀಕ್ಷೆಗಳ ವಿವರ (ಆಡಿಯೋಲಾಜಿ ವರದಿ, MRI, Vision Test/ ಇತ್ಯಾದಿಗಳು ಆಸ್ಪತ್ರೆಯಲ್ಲಿ ವೈದ್ಯಕೀಯ ದಾಖಲಾತಿಯ ವಿಭಾಗದಲ್ಲಿ ನಿಯಮಾನುಸಾರ ಕಾಯ್ದಿರಿಸಬೇಕಾಗುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ WP No 5622/2022 ದಿ.22-09-2022ರ ಆದೇಶದಲ್ಲಿ ಅಂಗವಿಕಲತೆಯ ಸಂಬಂಧ ನೀಡಲಾಗುತ್ತಿರುವ ಹಲವಾರು ವೈದ್ಯಕೀಯ ಮಂಡಳಿ ಪ್ರಮಾಣ ಪತ್ರಗಳನ್ನು ಗ್ರಹಿಸಿಕೊಳ್ಳಲು ಅರ್ಥೈಸಿಕೊಳ್ಳಲು ಆಗುತ್ತಿಲ್ಲ. ಹಲವು ಕಾಲಂಗಳಲ್ಲಿ ಯಾವ ಶಾರೀರಿಕ ಭಾಗಗಳು ಊನವಾಗಿರುತ್ತದೆ ಎಂಬುದನ್ನು ಭರ್ತಿ ಮಾಡದ ಕಾರಣ ಹಾಗೂ ದುರ್ಬಲತೆ ದಕ್ಕೆಯಾಗಿರುವ ಬಗ್ಗೆ ಬರವಣಿಗೆಯಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ವಾದಿ/ಪ್ರತಿವಾದಿಗಳ ವಾದಗಳನ್ನು ಸರಾಗವಾಗಿ ಅರ್ಥೈಸಿಕೊಳ್ಳುವುದರಲ್ಲಿ ಅನಾನುಕೂಲವಾಗುತ್ತಿರುತ್ತದೆ ಎಂದು ಅಭಿಪ್ರಾಯಪಟ್ಟು ವೈದ್ಯಕೀಯ ಮಂಡಳಿ ಪ್ರಮಾಣ ಪತ್ರಗಳನ್ನು ನೀಡುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಉಲ್ಲೇಖಿಸಿ ನಿರ್ದೇಶನ ನೀಡಿರುತ್ತದೆ.
ಸರ್ಕಾರದ ಅಧಿಕೃತ ಮಾನದಂಡಗಳನ್ನು ತಿಳಿಯಲು ಈ ಕೆಳಗಿನ ಫೈಲ್ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here