Assistant Professor Final Selection List 2021
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು 2020ರನ್ವಯ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಮತ್ತು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಈ ಮೂಲಕ ಪ್ರಕಟಿಸಿದೆ. ಇದರಲ್ಲಿ 2015ರ ನೇಮಕಾತಿಯಲ್ಲಿ ಭರ್ತಿ ಆಗದಿರುವ ಹುದ್ದೆಗಳಿಗೆ ಮತ್ತು ಪ್ರಸ್ತುತ ನೇಮಕಾತಿಯಲ್ಲಿನ ವಿಷಯವಾರು ಸ್ಥಳೀಯ ವೃಂದ, ಮಿಕ್ಕುಳಿದ ವೃಂದ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಿ ವರ್ಗದ ಸಿಬ್ಬಂದಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ಆಯ್ಕೆಯಾದ ಸಿಬ್ಬಂದಿಗಳ ಪ್ರತ್ಯೇಕ ಆಯ್ಕೆ ಪಟ್ಟಿ ಇರುತ್ತದೆ.
ಈ ಮೂಲಕ ಪ್ರಕಟಿಸಿದ ಆಯ್ಕೆ ಪಟ್ಟಿಯೂ ಹಾಗೂ ಅದರನ್ವಯ ಕೈಗೊಳ್ಳುವ ನೇಮಕಾತಿ ಪ್ರಕ್ರಿಯೆಯು ನೇಮಕಾತಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಅಧಿನಿಯಮಗಳು, ಆದೇಶಗಳು, ಅಧಿಸೂಚನೆಗಳು, ಸುತ್ತೊಲೆಗಳಲ್ಲಿನ ಷರತ್ತು, ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಹಾಗೂ ಈ ಬಗ್ಗೆ ಮಾನ್ಯ ಸಕ್ಷಮ ನ್ಯಾಯಾಲಯಗಳು ನೀಡುವ ನೀಡಿರುವ ತೀರ್ಪುಗಳಿಗೆ /ಆದೇಶಗಳಿಗೆ ಒಳಪಟ್ಟಿರುತ್ತದೆ. ವಿಷಯವಾರು ಪ್ರತ್ಯೇಕ ಆಯ್ಕೆ ಪಟ್ಟಿಯ ಕೊನೆಯಲ್ಲಿ ನಮೂದಿಸಿರುವ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಆಗುವ ಅಂತಿಮ ತೀರ್ಮಾನದ ಪಾಲನೆಯ ಷರತ್ತಿಗೆ ಈ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಅಭ್ಯರ್ಥಿಗಳ ಅಭ್ಯರ್ಥಿತನವು ಒಳಪಟ್ಟಿರುತ್ತದೆ.
ಸಹಾಯಕ ಪ್ರಾಧ್ಯಾಪಕರ ಅಂತಿಮ ಆಯ್ಕೆ ಪಟ್ಟಿಯನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here