JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Friday, November 24, 2023

Alvas Schools Admission Online Application For the Year 2024-25

  Jnyanabhandar       Friday, November 24, 2023
Alvas School Admission Online Application For the Year 2024-25


2024-25ನೇ ಶೈಕ್ಷಣಿಕ ವರ್ಷಕ್ಕೆ 6,7,8 ಮತ್ತು 9ನೇ ತರಗತಿಯ ಪ್ರವೇಶಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದರೆ ವತಿಯಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಆಸಕ್ತರು ಈ ಕೆಳಗೆ ನೀಡಿರುವ ಸೂಚನೆಗಳನ್ನು ಓದಿಕೊಂಡು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.

1.ಪ್ರಸ್ತುತ 6, 7, 8, ಮತ್ತು 9ನೇ ತರಗತಿಗಳಿಗೆ ವಿದ್ಯಾರ್ಥಿ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯನ್ನು ಕಡ್ಡಾಯವಾಗಿ ಮತ್ತು ಪೂರ್ಣವಾಗಿ ಭರ್ತಿ ಮಾಡುವುದು, ಅರ್ಜಿ ಇಲ್ಲದೆ ನೇರವಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ.

2.ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಯ ಎಸ್.ಎ.ಟಿ.ಎಸ್ (ಶಾಲಾ ಮುಖ್ಯಸ್ಥರಿಂದ ಖಚಿತಪಡಿಸಿಕೊಂಡು) ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸುವುದು, ಅರ್ಜಿಯೊಂದಿಗೆ ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ನಿಗದಿತ ಸ್ಥಳದಲ್ಲಿ JPEJ ಮಾದರಿಯಲ್ಲಿ ಲಗತ್ತಿಸುವುದು.
3. ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಅಥವಾ ಇನ್ನಿತರ ಶಾಲೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಕಳುಹಿಸಬೇಕಿಲ್ಲ.

4.ಒಂದೇ ವಿದ್ಯಾರ್ಥಿಯು ಪದೇ ಪದೇ ಅರ್ಜಿ ಹಾಕಲು / ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

5.ಕ್ರೀಡಾ / ಸಾಂಸ್ಕೃತಿಕ ವಿಭಾಗದಲ್ಲಿ ಆಯ್ಕೆ ಬಯಸುವ ವಿದ್ಯಾರ್ಥಿಗಳು ಜಿಲ್ಲಾ ರಾಜ್ಯ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು.

6.ಸಂಬಂಧಪಟ್ಟ ಪ್ರಮಾಣ ಪತ್ರಗಳ ನಕಲು ಪ್ರತಿಯನ್ನು ಪತ್ರಿಕೆ ಪ್ರಕಟಣೆ ನೀಡಿದ ಬಳಿಕ ಪ್ರತ್ಯೇಕ ಅರ್ಜಿ ಸಲ್ಲಿಸುವುದು.ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಡಿ.

7.ಪ್ರಸ್ತುತ ವಿದ್ಯಾರ್ಥಿಗಳು ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೋ, ಅದರ ಮುಂದಿನ ತರಗತಿಗೆ ಆಯ್ಕೆ ಬಯಸುವುದರಿಂದ ಪ್ರಸ್ತುತ ಓದುತ್ತಿರುವ ಎಲ್ಲಾ ವಿಷಯಗಳಲ್ಲಿ ಹಾಗೂ ಮಾನಸಿಕ ಸಾಮರ್ಥ್ಯ ವಿಷಯಗಳನ್ನು ಅಧ್ಯಯನ ಮಾಡಬೇಕು.

6 ಮತ್ತು 7ನೇ ತರಗತಿಗೆ 120 , 8 ಮತ್ತು 9ನೇ ತರಗತಿಗೆ 150 ಅಂಕಗಳ ಆಧಾರದಲ್ಲಿ ಚಟುವಟಿಕೆಗಳು ಇರುತ್ತದೆ.
ಅರ್ಜಿಯನ್ನು ಪೂರ್ಣವಾಗಿ Onlineನಲ್ಲಿ ಭರ್ತಿ ಮಾಡಿ Submit ಆದ ಬಳಿಕ ಎರಡು ಪ್ರತಿಯನ್ನು ಪ್ರಿಂಟ್ ಮಾಡಿಕೊಳ್ಳುವುದು.

ನಂತರದಲ್ಲಿ ಒಂದು ಪ್ರತಿ ಅರ್ಜಿಯನ್ನು ಸಂಸ್ಥೆಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದು. ಯಾವ ಕಾರಣಕ್ಕೂ ಕೈ ಬರಹದ ಅರ್ಜಿ ಸ್ವೀಕರಿಸಲಾಗುವುದಿಲ್ಲ.

ಮೊದಲ ಹಂತದ ಆಯ್ಕೆ ಪ್ರಕ್ರಿಯೆಯು ಓ. ಎಮ್. ಆರ್ ಮಾದರಿಯಲ್ಲಿ ಇರಲಿದ್ದು, ಎರಡನೇ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬರವಣಿಗೆ ಆಧಾರಿತ ಚಟುವಟಿಕೆಯನ್ನು ನಡೆಸಲಾಗಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಮರುದಿನ ನೇರ ಸಂದರ್ಶನದಲ್ಲಿ ಭಾಗವಹಿಸಿ ದಾಖಲಾತಿ ಮಾಡಿಕೊಳ್ಳುವುದು.
ಆಯ್ಕೆ ಪ್ರಕ್ರಿಯೆಯು ದಿನಾಂಕ 03-03-2024 ರ ಆದಿತ್ಯವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆನ್ಲೈನ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿ 8.00 ಗಂಟೆಗೆ ಸರಿಯಾಗಿ ಹಾಜರಾಗುವುದು. ಪ್ರವೇಶ ಪತ್ರ ಇಲ್ಲದೆ ಬಂದವರನ್ನು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲ.

ಪೆನ್ನು, ಪೆನ್ಸಿಲ್, ರಬ್ಬರ್, ಸ್ಕೇಲ್ ಬಿಟ್ಟು ಬೇರೆ ಯಾವುದೇ ಅಗತ್ಯ ಪರಿಕರಗಳು ಬೇಕಿಲ್ಲ. ಯಾವುದೇ ಫೋಟೋ, ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳು ಬೇಕಿಲ್ಲ.

*ಬಿಳಿದ್ರಾವಣ ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಪ್ರವೇಶ ಪತ್ರವನ್ನು ದಿನಾಂಕ 15-02-2024 ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ಆಧಾರ್ ಕಾರ್ಡ್ ಮತ್ತು SATS ಸಂಖ್ಯೆ ಮುಖ್ಯವಾಗಿರುತ್ತದೆ ಅದರ ಆಧಾರದಲ್ಲಿ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳುವುದು.



ಅರ್ಜಿ ಸಲ್ಲಿಸಲು ನೇರವಾದ ಲಿಂಕ್. Click Here To APPLY

ಆಳ್ವಾಸ್ ಶಿಕ್ಷಣ ಸಂಸ್ಥೆಯ ವೆಬ್ಸೈಟ್ www.alvasschools.com
logoblog

Thanks for reading Alvas Schools Admission Online Application For the Year 2024-25

Previous
« Prev Post

No comments:

Post a Comment

If You Have any Doubts, let me Comment Here