Details of GPT Vacancies after Universal Transfer 2022-23
15000 GPSTR ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಶಾಲೆಗಳ ಆಯ್ಕೆಗೆ ಕೌನ್ಸೆಲಿಂಗ್'ಗೆ ಹೋಗುವ ಅಭ್ಯರ್ಥಿಗಳಿಗೆ ರಾಜ್ಯಾದ್ಯಂತ 2022-23ನೇ ಸಾಲಿನ ವರ್ಗಾವಣೆ ನಂತರ ಖಾಲಿ ಇರುವ GPT ಹುದ್ದೆಗಳ ಮಾಹಿತಿ ಪ್ರಕಟವಾಗಿದೆ. ಈ ಮಾಹಿತಿಯು 09-08-2023ರ ನಂತರ ಖಾಲಿ ಇರುವ ಹುದ್ದೆಗಳ ಮಾಹಿತಿ ಆಗಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ 2022ರ ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದ ರೀಟ್ ಅಫೀಲು ಸಂಖ್ಯೆ WA.No.305/2023ರಲ್ಲಿ ದಿನಾಂಕ 12-10-2023ರ ವಿಭಾಗಿಯ ಪೀಠದ ತೀರ್ಪಿನಂತೆ ದಿನಾಂಕ 08-03-2023 ರಂದು ಪ್ರಕಟಿತ ಒಂದು ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸಿಲಿಂಗ್ ಅಭ್ಯರ್ಥಿಗಳ ವಿವರಗಳನ್ನು ದಿನಾಂಕ 19-10-2023 ಪ್ರಕಟಿಸಲಾಗುವುದು. ಸದರಿ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಕ್ರಮವಾಗಿ ಗಣಿತ-ವಿಜ್ಞಾನ, ಸಮಾಜ ವಿಜ್ಞಾನ, ಜೀವವಿಜ್ಞಾನ ಮತ್ತು ಆಂಗ್ಲಭಾಷೆ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಅನ್ನು ದಿನಾಂಕ 21-10-2023 ರಿಂದ ಬೆಳಗ್ಗೆ 10.30 ಗಂಟೆಯಿಂದ (ರಾಜ್ಯದ 371Jಗೆ ಸಂಬಂಧಿಸಿದಂತೆ ನ್ಯಾಯಾಲಯದ ಪ್ರಕರಣಗಳು ಬಾಕಿ ಇರುವ ಕಾರಣ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳನ್ನು ಹೊರತುಪಡಿಸಿ ಮತ್ತು ಬಿಬಿಎಂಪಿ ವ್ಯಾಪ್ತಿಯ ಶೇ.8 ಹುದ್ದೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳನ್ನು ಹೊರತುಪಡಿಸಿ) ಜಿಲ್ಲೆಗಳಲ್ಲಿನ ಆಯಾ ಜಿಲ್ಲಾ ನೇಮಕಾತಿ ಪ್ರಾಧಿಕಾರಿಯವರಾದ ಜಿಲ್ಲಾ ಉಪನಿರ್ದೇಶಕರವರ ಕಚೇರಿಯಲ್ಲಿ ನಡೆಸಲಾಗುವುದು.
ಖಾಲಿ ಇರುವ ಹುದ್ದೆಗಳ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
GPT Updated Vacancies On 20-10-2023
No comments:
Post a Comment
If You Have any Doubts, let me Comment Here