About Appointing the Additional Hotel Warden For KREIS Girls Hostel
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(KREIS)ದಡಿಯಲ್ಲಿ ಹೆಣ್ಣು ಮಕ್ಕಳ ವಸತಿ ಶಾಲೆ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು ಸದರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ವಸತಿ ಸಹಿತ ಶಿಕ್ಷಣವನ್ನು ನೀಡಲಾಗುತ್ತಿದೆ ಸದರಿ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯನ್ನು ಕಾಯ್ದುಕೊಳ್ಳಲು ಹಾಗೂ ವಿದ್ಯಾರ್ಥಿನಿಯರ ಮುಕ್ತ ಸಮಾಲೋಚನೆಗೆ ಅನುಕೂಲವಾಗಲು ಎಲ್ಲಾ ಹೆಣ್ಣು ಮಕ್ಕಳ ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ಮಹಿಳಾ ನಿಲಯಪಾಲಕರ(warden) ನಿಯೋಜಿಸುವಂತೆ ಸೂಚಿಸಲಾಗಿದೆ.
ಸರ್ಕಾರದ ಪತ್ರದ ನಿರ್ದೇಶದನ್ವಯ ಪ್ರಸ್ತುತ ಹೆಣ್ಣು ಮಕ್ಕಳ ವಸತಿ ಶಾಲೆ ಕಾಲೇಜುಗಳಲ್ಲಿ ಖಾಲಿ ಇರುವ ನಿಲಯ ಪಾಲಕರ ಹುದ್ದೆಗೆ ಆಯಾ ವಸತಿ ಶಾಲೆಗಳ ಹಿರಿಯ ಮಹಿಳಾ ಶಿಕ್ಷಕರಿಗೆ ಜೇಷ್ಠತೆ ಆಧಾರದ ಮೇಲೆ ನಿಲಯ ಪಾಲಕರ ಪ್ರಭಾರ ವಹಿಸಲು ಆದೇಶಿಸಲಾಗಿದೆ.
ಉಲ್ಲೇಖ (3)ರ ಆದೇಶದಂತೆ ಹೆಣ್ಣು ಮಕ್ಕಳ ವಸತಿ ಶಾಲೆ ಕಾಲೇಜುಗಳಲ್ಲಿ ಪುರುಷ ನಿಲಯ ಪಾಲಕರಿದ್ದಲ್ಲಿ ಸದರಿ ವಸತಿ ಶಾಲೆ ಕಾಲೇಜಿನ ಹಿರಿಯ ಮಹಿಳಾ ಶಿಕ್ಷಕರನ್ನು ಜೇಷ್ಠತೆ ಆಧಾರದ ಮೇಲೆ ಹೆಚ್ಚುವರಿ ನಿಲಯ ಪಾಲಕರಾಗಿ(Additional Hotel Warden) ನೇಮಿಸುವುದು ಪುರುಷ ನಿಲಯ ಪಾಲಕರು ಬಾಲಕಿಯರ ವಸತಿ ನಿಲಯವನ್ನು ಪ್ರವೇಶಿಸುವ ಸಂದರ್ಭದಲ್ಲಿ ಹೆಚ್ಚುವರಿ ಮಹಿಳಾ ನಿಲಯ ಪಾಲಕರೊಂದಿಗೆ ಕಡ್ಡಾಯವಾಗಿ ಪ್ರವೇಶಿಸತಕ್ಕದ್ದು ಹೆಚ್ಚುವರಿ ಮಹಿಳಾ ನಿಲಯ ಪಾಲಕರಿಲ್ಲದೆ ಪುರುಷ ನಿಲಯ ಪಾಲಕರು ಯಾವುದೇ ಕಾರಣಕ್ಕೂ ಬಾಲಕಿಯರ ವಸತಿ ಗೃಹವನ್ನು ಪ್ರವೇಶಿಸುವಂತಿಲ್ಲ. ಪುರುಷ ನಿಲಯ ಪಾಲಕರು ಹೆಚ್ಚುವರಿ ಮಹಿಳಾ ನಿಲಯ ಪಾಲಕರ ಸಮನ್ವಯದೊಂದಿಗೆ ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸಿದೆ.
No comments:
Post a Comment
If You Have any Doubts, let me Comment Here