JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, September 24, 2023

PPF Withdrawal Rules

  Jnyanabhandar       Sunday, September 24, 2023
PPF Withdrawal Rules 

One can make partial withdrawals from a PPF account for specific reasons, so it's important to know what these reasons are before you request a withdrawal. These reasons include funding higher education, covering medical expenses, buying or building a home, and covering the costs of your children's weddings..

ಪಬ್ಲಿಕ್ ಪ್ರಾವಿಡೆಂಟ್ ಫಂಡ್ 15 ವರ್ಷದ ಅವಧಿಯದ್ದಾಗಿದ್ದು, 7 ವರ್ಷದ ಬಳಿಕ ಸ್ವಲ್ಪ ಭಾಗವನ್ನು ವಿತ್ಡ್ರಾ ಮಾಡುವ ಅವಕಾಶ ನೀಡಲಾಗುತ್ತದೆ. ಸರಿಯಾದ ಕಾರಣಗಳು, ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಿ ನೀವು ಶೇ. 50ರಷ್ಟು ಹಣವನ್ನು ಪಿಪಿಎಫ್ ಅಕೌಂಟ್ನಿಂದ ಹಿಂಪಡೆಯಲು ಸಾಧ್ಯ ಇದೆ.

ಈ ರೀತಿ ಮೆಚ್ಯೂರಿಟಿಗೆ ಮುನ್ನವೇ ಹಣ ವಿತ್ಡ್ರಾ ಮಾಡುವುದು ಹೇಗೆ, ಏನು ಮಾನದಂಡ, ಯಾವ ದಾಖಲೆಗಳು ಬೇಕು, ಕ್ರಮಗಳೇನು ಇತ್ಯಾದಿ ವಿವರ ಇಲ್ಲಿವೆ. 

ಸರ್ಕಾರದಿಂದ ನಡೆಸುವ ಹೂಡಿಕೆ ಯೋಜನೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF- Public Provident Fund) ಒಂದು. ತೆರಿಗೆ ಲಾಭ, ಉತ್ತಮ ಬಡ್ಡಿದರ ಇತ್ಯಾದಿ ಕೆಲವಿಷ್ಟು ಪ್ರಮುಖ ಲಾಭಗಳನ್ನು ಈ ಸ್ಕೀಮ್ನಿಂದ ಪಡೆಯಬಹುದು. ದೀರ್ಘಾವಧಿ ಹೂಡಿಕೆಗೆ (Long term investment) ಹೇಳಿ ಮಾಡಿಸಿದ ಯೋಜನೆ ಇದಾಗಿದೆ. ಆದರೆ, ಕೆಲವೊಮ್ಮೆ ತುರ್ತು ಅಗತ್ಯ ಎದುರಾಗಿ ಹೂಡಿಕೆ ಹಣ ಹಿಂಪಡೆಯಬೇಕಾಗಬಹುದು. ಪಿಪಿಎಫ್ನಲ್ಲಿ ಅದಕ್ಕೂ ಅವಕಾಶ ಇದೆ. ಈ ರೀತಿ ಮೆಚ್ಯೂರಿಟಿಗೆ ಮುನ್ನವೇ ಹಣ ವಿತ್ಡ್ರಾ (PPF withdrawal) ಮಾಡುವುದು ಹೇಗೆ, ಏನು ಮಾನದಂಡ, ಯಾವ ದಾಖಲೆಗಳು ಬೇಕು, ಕ್ರಮಗಳೇನು ಇತ್ಯಾದಿ ವಿವರ ಇಲ್ಲಿವೆ.

ಅವಧಿಗೂ ಮುನ್ನ PPF ಹಣ ಹಿಂಪಡೆಯಲು ಇರುವ ಮಾನದಂಡಗಳೇನು?

ಪಿಪಿಎಫ್ ಸ್ಕೀಮ್ ಪಡೆದರೆ ಅದು ಮೆಚ್ಯೂರ್ (PPF Maturity) ಆಗಲು 15 ವರ್ಷ ಬೇಕು. ಪ್ರತೀ ವರ್ಷ 500 ರೂನಿಂದ ಒಂದೂವರೆ ಲಕ್ಷ ರೂವರೆಗೆ ಪಿಪಿಎಫ್ ಅಕೌಂಟ್ಗೆ ಹಣ ಜಮೆ ಮಾಡಬಹುದು. 15 ವರ್ಷ ಬಳಿಕ ಬೇಕೆಂದರೆ 5 ವರ್ಷ ವಿಸ್ತರಣೆ ಮಾಡಬಹುದು. ಪಿಪಿಎಫ್ಗೆ ಸರ್ಕಾರ ವರ್ಷಕ್ಕೆ ಶೇ. 7.1ರಷ್ಟು ಬಡ್ಡಿ ನೀಡುತ್ತದೆ. ಈ ಬಡ್ಡಿದರವನ್ನು ಸರ್ಕಾರ ಪ್ರತೀ ವರ್ಷ ಪರಿಷ್ಕರಿಸುತ್ತದೆ.

ಹೂಡಿಕೆ ಆರಂಭಿಸಿ 7 ವರ್ಷದ ಬಳಿಕ ಹಣ ವಿತ್ಡ್ರಾ ಮಾಡಲು ಅವಕಾಶ ಇರುತ್ತದೆ. ಆದರೆ, ಪೂರ್ತಿ ಹಣ ತೆಗೆಯಲು ಆಗುವುದಿಲ್ಲ. ಹಿಂದಿನ ವರ್ಷದಲ್ಲಿ ನಿಮ್ಮ ಪಿಪಿಎಫ್ ಅಕೌಂಟ್ನಲ್ಲಿ ಎಷ್ಟು ಮೊತ್ತ ಇತ್ತೋ ಅದರ ಅರ್ಧದಷ್ಟು ಹಣವನ್ನು ಮಾತ್ರ ವಿತ್ಡ್ರಾ ಮಾಡಿಕೊಳ್ಳಲು ಸಾಧ್ಯ.
ಸಂಬಳದಲ್ಲೇ 30 ವರ್ಷದಲ್ಲಿ 100 ಕೋಟಿ ರೂ ಕೂಡಿಡುವುದು ಹೇಗೆ? ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಪಿಪಿಎಫ್ ಅಕೌಂಟ್ನಿಂದ ಹಣ ಹಿಂಪಡೆಯುವ ಕ್ರಮಗಳೇನು?

ನೀವು ಪಿಪಿಎಫ್ ಅಕೌಂಟ್ ಹೊಂದಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ವಿತ್ಡ್ರಾ ಮಾಡಲು ಸಾಧ್ಯ. ಗುರುತಿನ ದಾಖಲೆಗಳು ಜೊತೆಯಲ್ಲಿರಬೇಕು. ವಿತ್ಡ್ರಾಯಲ್ ಫಾರ್ಮ್ ಅನ್ನು ಪಡೆದು ಅದನ್ನು ಭರ್ತಿ ಮಾಡಬೇಕು. ಹಣ ಹಿಂಪಡೆಯಲು ನೀವು ನೀಡಿದ ಕಾರಣಕ್ಕೆ ಪೂರಕವಾದ ದಾಖಲೆಗಳೂ ಇರಬೇಕು.

ಇವೆಲ್ಲವೂ ಸರಿಯಾಗಿದ್ದಲ್ಲಿ ನಿಮ್ಮ ಪಿಪಿಎಫ್ ಹಣ ವಿತ್ಡ್ರಾಗೆ ಸಲ್ಲಿಸಲಾದ ಅರ್ಜಿ ಬೇಗ ವಿಲೇವಾರಿ ಆಗುತ್ತದೆ.
logoblog

Thanks for reading PPF Withdrawal Rules

Previous
« Prev Post

No comments:

Post a Comment

If You Have any Doubts, let me Comment Here