The 2023 theme, 'Engineering for a Sustainable Future,' highlights engineers' role in addressing global challenges. Sir M Visvesvaraya was born on September 15, 1861. Every year, on September 15, National Engineers' Day is observed with great enthusiasm.
ದಿನಾಂಕ 15-09-2023ರಂದು ರಾಷ್ಟ್ರೀಯ ಅಭಿಯಂತರರ ದಿನ. ಭಾರತದ ಸರ್ವಶ್ರೇಷ್ಠ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ರಾಷ್ಟ್ರೀಯ ಅಭಿಯಂತರರ ದಿನ (ನ್ಯಾಷನಲ್ ಇಂಜಿನಿಯರ್ಸ್ ಡೇ) ಎಂದು ಆಚರಿಸಲಾಗುತ್ತಿದೆ.
ಭಾರತದ ಸುಪ್ರಸಿದ್ಧ ಇಂಜಿನಿಯರ್'ಗಳಲ್ಲಿ ಒಬ್ಬರಾದ ಡಾ.ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು 1861ರ ಸೆ.15ರಂದು ಜನಿಸಿದ್ದರು. ಇವರು ಭಾರತದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಮೇಧಾವಿ.
ಇತಿಹಾಸ ಮತ್ತು ಮಹತ್ವ: ವಿಶ್ವೇಶ್ವರಯ್ಯನವರ ಕೊಡುಗೆಗಳನ್ನು ಗೌರವಿಸಲು ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಗುರುತಿಸಲು ಭಾರತದಲ್ಲಿ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ. ಇದು ಇಂಜಿನಿಯರ್‌ಗಳ ಜಾಣ್ಮೆ ಮತ್ತು ಸೃಜನಶೀಲತೆಯನ್ನು ಕೊಂಡಾಡುವ ದಿನವಷ್ಟೇ ಅಲ್ಲದೆ, ನಮ್ಮ ಸಮಾಜದಲ್ಲಿ ಅವರ ಮಹತ್ವವನ್ನು ಗುರುತಿಸುವ ದಿನವೂ ಆಗಿದೆ.
ಆಧುನಿಕ ಭಾರತದ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯ ಅವರ ಪಾತ್ರ
ವಿಶ್ವೇಶ್ವರಯ್ಯ ಅವರು ಸಿವಿಲ್ ಇಂಜಿನಿಯರ್, ರಾಜನೀತಿತಜ್ಞ ಮತ್ತು ಲೋಕೋಪಕಾರಿಯಾಗಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಮೈಸೂರು ಅರಮನೆ, ಗ್ವಾಲಿಯರ್‌ನ ಟೈಗ್ರಾ ಅಣೆಕಟ್ಟು, ಮೈಸೂರಿನ ಕೃಷ್ಣರಾಜಸಾಗರ ಅಣೆಕಟ್ಟು, ಬೆಂಗಳೂರು ನೀರು ಸರಬರಾಜು ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಹೈದರಾಬಾದನ್ನು ನಗರವನ್ನಾಗಿ ಮಾಡಿದ ಸಂಪೂರ್ಣ ಶ್ರೇಯಸ್ಸು ಡಾ. ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ. ಸಮುದ್ರ ಕೊರೆತದಿಂದ ವಿಶಾಖಪಟ್ಟಣ ಬಂದರನ್ನು ರಕ್ಷಿಸುವ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ವಿಶ್ವೇಶ್ವರಯ್ಯ ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣದ ಜವಾಬ್ದಾರಿಯಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದರು. ಇದು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಸಹಾಯ ಮಾಡಿತು. ವಿಶ್ವೇಶ್ವರಯ್ಯ ಅವರು 1955ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಸೇರಿದಂತೆ ಹಲವಾರು ಗೌರವಗಳನ್ನು ಪಡೆದರು.ಅವರು 1912ರಿಂದ 1918ರವರೆಗೆ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದರು. ರಾಜ್ಯದಲ್ಲಿ ಗಮನಾರ್ಹ ಆಡಳಿತ ಸುಧಾರಣೆಗಳನ್ನು ತಂದರು. ಈ ಮೂಲಕ ದೇಶದಾದ್ಯಂತ ಪ್ರಸಿದ್ಧರಾದರು.
ಭಾರತ, ಶ್ರೀಲಂಕಾ ಮತ್ತು ತಾಂಜಾನಿಯಾದಲ್ಲಿ ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ. ನ್ಯಾಷನಲ್ ಇಂಜಿನಿಯರ್ಸ್ ಡೇ 2023ರ ಥೀಮ್: ಸುಸ್ಥಿರ ಭವಿಷ್ಯಕ್ಕಾಗಿ ಇಂಜಿನಿಯರಿಂಗ್. ಇಂಜಿನಿಯರ್‌ಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಹಾಗೂ ಮೂಲಸೌಕರ್ಯ, ಉತ್ಪಾದನೆ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಿಗೆ ಮಹತ್ತರ ಕೊಡುಗೆ ನೀಡುತ್ತಾರೆ.
ಹೀಗಿರುತ್ತದೆ ಅಭಿಯಂತರರ ದಿನಾಚರಣೆ
ಇಂದು ಸೆಮಿನಾರ್‌ಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ವಿಶ್ವವಿದ್ಯಾನಿಲಯಗಳು, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ವೃತ್ತಿಪರ ಸಂಸ್ಥೆಗಳು ಈ ದಿನ ವಿಚಾರಸಂಕಿರಣ, ಕಾರ್ಯಾಗಾರ ಮತ್ತು ಉಪನ್ಯಾಸಗಳನ್ನು ಆಯೋಜಿಸುತ್ತಾರೆ. ಇವುಗಳು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ.ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ತೊಡಗಿಸಿಕೊಳ್ಳಲು ಮತ್ತು ಅವರ ಜ್ಞಾನ-ಕೌಶಲ್ಯಗಳನ್ನು ಪರೀಕ್ಷಿಸಲು ಇಂಜಿನಿಯರಿಂಗ್ ಸಂಬಂಧಿತ ಸ್ಪರ್ಧೆಗಳು ಅಥವಾ ರಸಪ್ರಶ್ನೆಗಳನ್ನು ಆಯೋಜಿಸಲಾಗುತ್ತದೆ.
No comments:
Post a Comment
If You Have any Doubts, let me Comment Here