JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, September 2, 2023

5th Class Jeevada Moulya Kannada Lesson Notes

  Jnyanabhandar       Saturday, September 2, 2023
5th Class Jeevada Moulya Kannada Notes

ಈ ಲೇಖನದಲ್ಲಿ ನಾವು ಕನ್ನಡ ಮಾದ್ಯಮದ 5ನೇ ತರಗತಿ ಕನ್ನಡ ಜೀವದ ಮೌಲ್ಯ ಪಾಠದ ಸಂಪೂರ್ಣ ವ್ಯಾಕರಣ ಮಾಹಿತಿ ಮತ್ತು ವಿವರಣೆಯೊಂದಿಗೆ ಪಾಠದ ಹಿಂದಿನ ಎಲ್ಲಾ ಪ್ರಶ್ನೆಗಳನ್ನು ವಿವರಿಸಿದ್ದೇವೆ.




ತರಗತಿ : 5ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಜೀವದ ಮೌಲ್ಯ

ಕೃತಿಕಾರರ ಪರಿಚಯ

ಕಾನ್‌ಸ್ಟನ್ಸ್ ಜೆ ಫಾಸ್ಟರ್‌ ಎಂಬವರು ೨೦ ನೇ ಶತಮಾನದಲ್ಲಿದ್ದ ಓರ್ವ ಇಂಗ್ಲೀಷ್ ಲೇಖಕರು . ಇವರು ಮುಖ್ಯವಾಗಿ ಮಕ್ಕಳ ಕಲಿಕೆ , ಮಕ್ಕಳನ್ನು ನೋಡಿಕೊಳ್ಳುವುದು , ಶಿಶು ಆರೈಕೆ ಮುಂತಾದ ವಿಷಯಗಳ ಬಗ್ಗೆ ಹಲವು ಕೃತಿಗಳನ್ನು ರಚಿಸಿದ್ದಾರೆ . ” ದ ಅಬ್ರಾಕ್ಟಿವ್ ಚೈಲ್ಡ್ ” , ” ದ ಲಚ್ ವರ್ಲ್ಡ್ ” , ” ಫಾದರ್ಸ್ ಆಂಡ್ ಪೇರೆಂಟ್ಸ್ ಟೂ ” , ” ಡೆವಲಪಿಂಗ್ ರೆಸ್ಪಾನ್ಸಿಅಟಿ ಇನ್ ಅಲ್ಟನ್ ” ಮುಂತಾದವು ಅವರ ಕೃತಿಗಳು . ಫಾಸ್ಟರ್ ಅವರು ಇಂಗ್ಲೀಷ್ ಭಾಷೆಯಲ್ಲಿ ಬರೆದ ಕತೆಯನ್ನು ಎಲ್ . ಎಸ್ . ನಾಯ್ಕ ಎಂಬವರು ” ಜೀವದ ಮೌಲ್ಯ ” ಎಂಬ ಹೆಸರಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ .


ಅ. ಪದಗಳ ಅರ್ಥ

ಪರಿಹರಿಸಲಾಗದ- ಗುಣಪಡಿಸಲಾಗದ
ಅವಿವೇಕ-ವಿವೇಕ ಇಲ್ಲದಿರುವುದು
ಲೇಸು-ಒಳ್ಳೆಯದು
ನಿಶ್ಚಿತ ಅಭಿಪ್ರಾಯ-ಖಚಿತವಾದ ಅನಿಸಿಕೆ
ಆರೈಕೆ-ಉಪಚಾರ
ಛಲ-ನಿಶ್ಚಿತ, ಗೊಂದಲವಿಲ್ಲದ
ಸೆಳೆತ-ಎಳೆಯುವಿಕೆ
ವಿಷಮ-ಗಂಭೀರ
ಚಿಕಿತ್ಸಕ-ರೋಗವನ್ನು ಗುಣಪಡಿಸುವವರು, ಆರೈಕೆ ಮಾಡುವವರು
ಆಸ್ಪದ- ಅವಕಾಶ
ಪ್ರಸವ-ಹೆರಿಗೆ

ಆ. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಡಾಕ್ಟರ್‌ ತೇಡ್ಡಿಯಸ್‌ ಮಾರ್ಲಿನನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ ಯಾವುದನ್ನು ಅವಿವೇಕ ಎಂದು ಭಾವಿಸಿದ್ದನು?

ಒಬ್ಬ ವ್ಯಕ್ತಿಗೆ ಗುಣವಾಗದ ಕಾಯಿಲೆ ಇದ್ದರೆ ಆತನನ್ನು ಬದುಕಿಸಿ ಉಳಿಸಿ ಸಾಧಿಸುವುದೇನಿದೆ? ಹಾಗೆ ಅವರಿಗೆ ವೈದ್ಯಕೀಯ ಉಪಚಾರ ಮಾಡುತ್ತ ಬದುಕಿಸುವುದು ಶುದ್ದ ಅವಿವೇಕ ಎಂದು ಭಾವಿಸಿದ್ದನು.

2. ತೇಡ್ಡಿಯಸ್ ನ ಸಹಪಾಠಿಗಳು ಏನೆಂದು ಹೇಳುತ್ತಿದ್ದರು?

ಅಂಗಹೀನರಾದ ಹತಭಾಗ್ಯರ ಆರೈಕೆಗಾಗಿ ನಾವಿರುವುದು ಎಂದು ತೇಡ್ಡಿಯಸ್ ನ ಸಹಪಾಠಿಗಳು ಹೇಳುತ್ತಿದ್ದರು.

3. ಜರ್ಮನಿಂದ ವಲಸೆ ಬಂದ ಹೆಂಗಸಿಗೆ ಡಾ. ತೇಡ್ಡಿಯಸ್‌ ಹೇಗೆ ಸಹಾಯ ಮಾಡಿದನು?

ಜರ್ಮನಿಂದ ವಲಸೆ ಬಂದ ಹೆಂಗಸಿಗೆ ಡಾ. ತೇಡ್ಡಿಯಸ್‌ ಪ್ರಸವದಲ್ಲಿ ನೇರವಾಗಿ ಸಹಾಯ ಮಾಡಿದನು.

4. ಮಗುವಿಗೆ ಯಾವ ನ್ಯೂನತೆ ಇತ್ತು?

ಮಗುವಿಗೆ ಕುಂಟ ಕಾಲಿನ ನ್ಯೂನತೆ ಇತ್ತು.

5. ಬಾರ್ಬರ ಯಾವ ಸಮಸ್ಯೆಯಿಂದ ನರಳುತ್ತಿದ್ದಳು?

ಕುತ್ತಿಗೆ ಸೆಳೆತ ಮತ್ತು ಕೈ ಕಾಲುಗಳ ನೋವಿನಿಂದ ನರಳುತ್ತಿದ್ದಳು. ಅದು ಅಪರೂಪವಾದ ವಿಷಮ ಅಂಟುರೋಗವಾಗಿದೆ.

6. ಬಾರ್ಬರಳನ್ನು ಪರೀಕ್ಷಿಸಿದ ವೈದ್ಯರು ಏನು ಹೇಳಿದರು?

ಬಾರ್ಬರಳನ್ನು ಪರೀಕ್ಷಿಸಿದ ವೈದ್ಯರು ಆ ಕಾಯಿಲೆಗೆ ಯಾವ ಮದ್ದೂ ಇಲ್ಲ ಅದು ನಿಧಾನವಾಗಿ ಹೆಚ್ಚುತ್ತಾ ಕೊನೆಗೆ ದೊಡ್ಡ ಪ್ರಮಾಣದ ಪಾರ್ಶ್ವವಾಯು ಆಗಬಹುದು ಎಂದು ಹೇಳಿದರು.

7. ಡಾಕ್ಟರ್‌ ತೇಡ್ಡಿಯಸ್‌ ತನ್ನೊಳಗೆ ಏನನ್ನು ಜ್ಞಾಪಿಸಿಕೊಂಡರು?

ತಾನು ತರುಣ ವಿದ್ಯಾರ್ಥಿಯಾಗಿದ್ದಾಗ ” ಈ ಒಂದು ಮಗು ಇಲ್ಲವಾದರೆ ಜಗತ್ತಿಗೇನು ನಷ್ಟ” ಎಂದು ಅಂದಿದ್ದನ್ನು ಜ್ಞಾಪಿಸಿಕೊಂಡನು.

8. ಡಾಕ್ಟರ್‌ ಮಾರ್ಲಿನನು ಬಾರ್ಬರಳನ್ನು ಉಪಚರಿಸಿದ ವೈದ್ಯನಿಗೆ ಏನೆಂದು ಹೇಳಿದನು?

“ನೀನು ಪುಟ್ಟ ಹುಡುಗಿಯ ಕಾಲು ಸರಿಪಡಿಸುತ್ತಿರುವುದಷ್ಟೇ ಅಲ್ಲ. ಕುರುಡರಾಗಿದ್ದ ಒಬ್ಬ ಹಿರಿಯನ ಕಣ್ಣನ್ನೂ ತೆರೆಸಿರುವೆ” ಎಂದು ಹೇಳಿದನು.

ಇ. ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಮಗುವಿಗೆ ಉಸಿರಾಡುವಂತೆ ಸಹಕರಿಸುವಾಗ ಮಾರ್ಲಿನನ ಮನಸ್ಸಿನಲ್ಲಿ ಬಂದ ಆಲೋಚನೆಗಳೇನು?
ಮಗುವಿಗೆ ಉಸಿರಾಡುವಂತೆ ಸಹಕರಿಸುವಾಗ ಮಾರ್ಲಿನನ ಮನಸ್ಸಿನಲ್ಲಿ “ಏನು ದುರಂತವೀ ಶಿಶು ಅದು ಬೆಳೆದಾಗ ಜೀವನವಿಡೀ ಕುಂಟು ಕಾಲಿನಲ್ಲೇ ನಡೆಯಬೇಕು. ಇತರ ಮಕ್ಕಳು ಅಣಕಿಸಿ ಗೇಲಿ ಮಾಡುವರು. ಈ ಮಗು ಜೀವಿಸುವಂತೆ ಮಾಡುವುದೇಕೆ? ಇದು ಸತ್ತರೆ ಜಗತ್ತಿಗೆ ಏನು ನಷ್ಟ” ಎಂಬ ಆಲೋಚನೆಗಳು ಬಂದವು.

2. ಮಾರ್ಲಿನನ ಮೊಮ್ಮಗಳಿಗೆ ಕಂಡುಬಂದ ಕಾಯಿಲೆ ಯಾವುದು? ಅದರ ಲಕ್ಷಣಗೇನಿತ್ತು?

ಮಾರ್ಲಿನನ ಮೊಮ್ಮಗಳಿಗೆ ಕಂಡುಬಂದ ಕಾಯಿಲೆ ಮೊದಲು ಅದು ಪೋಲಿಯೋ ಎಂದು ಪರಿಗಣಿಸಲ್ಪಟ್ಟಿತ್ತು. ಆದರೆ ಅದು ಕ್ರಮೇಣವಾಗಿ ಉಂಟಾಗುವ ಒಂದು ವಿಷಮ ಅಂಟುರೋಗವೆಂದು ತಿಳಿದುಬಂತು. ಅದು ಹೆಚ್ಚುತ್ತಾ ಹೋಗಿ ಕೊನೆಗೆ ದೊಡ್ಡ ಪ್ರಮಾಣ ಪಾರ್ಶ್ವವಾಯುವಾಗಿ ಪರಿಣಮಿಸುವ ಲಕ್ಷಣವನ್ನು ಹೊಂದಿತ್ತು.

3. ಮಾರ್ಲಿನನನ್ನು ಭೇಟಿಯಾದ ಪ್ರವೀಣರಲ್ಲೊಬ್ಬ ಯಾವ ಸಲಹೆಯನ್ನು ಕೊಟ್ಟನು?

ಮಾರ್ಲಿನನನ್ನು ಭೇಟಿಯಾದ ಪ್ರವೀಣರಲ್ಲೊಬ್ಬ ” ಒಬ್ಬ ತರುಣ ಡಾಕ್ಟರ್‌ನಿದ್ದಾನೆ. ಅವನು ಇಂಥ ಒಂದಷ್ಟು ಪ್ರಕರಣಗಳನ್ನು ನೋಡಿದ್ದಾನೆ. ಔಷಧಿಯನ್ನು ಕೊಟ್ಟಿದ್ದಾನೆ. ಆ ಕುರಿತು ಒಂದು ಲೇಖನವನ್ನು ಒಂದು ಪತ್ರಿಕೆಯಲ್ಲಿ ಬರೆದಿದ್ದಾನೆ. ಅವನ ಹೆಸರು ಟಿ.ಜೆ. ಮಿಲ್ಲರ್‌ ನಾನು ನಿನ್ನ ಸ್ಥಾನದಲ್ಲಿದ್ದರೆ ಅವನ ಸಹಾಯ ಪಡೆಯುತ್ತಿದ್ದೆ.” ಎಂಬ ಸಲಹೆಯನ್ನು ಕೊಟ್ಟನು.

4. ಡಾಕ್ಟರ್‌ ಮಿಲ್ಲರ್‌ , ಮಾರ್ಲಿನನನ್ನು ಭೇಟಿಯಾದಾಗ ವೈದ್ಯಕೀಯ ವೃತ್ತಿಯ ಬಗ್ಗೆ ಹೇಳಿದ ಮಾತುಗಳೇನು?

ಡಾಕ್ಟರ್‌ ಮಿಲ್ಲರ್‌ , ಮಾರ್ಲಿನನನ್ನು ಭೇಟಿಯಾದಾಗ ವೈದ್ಯಕೀಯ ವೃತ್ತಿಯ ಬಗ್ಗೆ “ನನ್ನ ಬಳಿ ಬರುವ ರೋಗಿಗಳೆಲ್ಲರೂ ಒಂದಿಲ್ಲೊಂದು ಅಂಗದ ಸಮಸ್ಯೆ ಇರುವವರೇ ಅಗೆಲ್ಲಾ ನನಗೆ ನಾನೂ ಅವರಲ್ಲೊಬ್ಬ, ಅವರ ಮನೆಯ ಸದಸ್ಯ ಎಂಬ ಭಾವನೆ ಬರುತ್ತದೆ. ನನ್ನನ್ನು ಅವರು ಡಾಕ್ಟರ್‌ ಅಂಕಲ್‌ ಎಂದು ಕರೆದಾಗ ನನಗೆ ನನ್ನ ಹೆಸರು ತೇಡ್ಡಿಯಸ್‌ ಎಂಬುದು ಮರೆತು ಹೋಗುತ್ತದೆ” ಎಂದು ಹೇಳಿದನು.

5. ಮಾರ್ಲಿನನ ಕಂಠ ಬಿಗಿದು ಬರಲು ಕಾರಣವೇನು?

ಡಾ. ಮಿಲ್ಲರ್‌ ಮಕ್ಕಳನ್ನು ಭೂಮಿಗಿಳಿಸಿದ ವೈದ್ಯರ ಹೆಸರನ್ನು ಆ ಮಕ್ಕಳ ಅಡ್ಡ ಹೆಸರಾಗಿ ಬಳಸುವುದು ನಮ್ಮೂರಿನ ಸಂಪ್ರದಾಯ. ಹಾಗೆಯೇ ನನ್ನನ್ನು ಭೂಮಿಗಿಳಿಸಿದ ಒಬ್ಬ ತರುಣ ವೈದ್ಯಕೀಯ ವಿದ್ಯಾರ್ಥಿಯ ಹೆಸರನ್ನೇ ನನಗೆ ಇಡಲಾಯಿತು” ಎಂದು ಹೇಳಿದ್ದನ್ನು ಕೇಳಿ ಮಾರ್ಲಿನನ ಕಂಠ ಬಿಗಿದು ಬಂದಿತು.

6. ಕೊನೆಯಲ್ಲಿ ಮಾರ್ಲಿನನು , ಮಿಲ್ಲರ್‌ ನಿಗೆ ಯಾವ ರೀತಿ ಕೃತಜ್ಞತೆ ಹೇಳಿದನು?

ಕೊನೆಯಲ್ಲಿ ಮಾರ್ಲಿನನು, ಮಿಲ್ಲರ್ ನಿಗೆ “ನೀನು ಪುಟ್ಟ ಹುಡುಗಿಯ ಕಾಲು ಸರಿಪಡಿಸುತ್ತಿರುವುದಷ್ಟೇ ಅಲ್ಲ. ಕುರುಡರಾಗಿದ್ದ ಒಬ್ಬ ಹಿರಿಯನ ಕಣ್ಣನ್ನೂ ತೆರೆಸಿರುವೆ” ಎಂದು ಕೃತಜ್ಞತೆ ಹೇಳಿದನು.

ಈ. ಈ ನುಡಿಗಟ್ಟುಗಳ ಅರ್ಥವನ್ನು ಬರೆದು ವಾಕ್ಯಗಳಲ್ಲಿ ಬಳಸಿ.

1. ಕಂಠವು ಬಿಗಿದು ಬಂತು- ದುಃಖ ಹೆಚ್ಚಾಗು, ಅತಿಯಾದ ದುಃಖ, ದುಃಖ ಉಮ್ಮಳಿಸಿ ಬರುವುದು

ವಾಕ್ಯ- ಆತ್ಮೀಯ ವ್ಯಕ್ತಿಯ ಅನಿವಾರ್ಯದ ಅಗಲಿಕೆಯಿಂದ ಕಂಠವು ಬಿಗಿದು ಬಂತು.
2. ಕಣ್ಣನ್ನು ತೆರೆಸು- ತಪ್ಪನ್ನು ತಿದ್ದು, ಅಜ್ಞಾನವನ್ನು ದೂರ ಮಾಡು

ವಾಕ್ಯ- ಗೌತಮ ಬುದ್ದನು ಜಗತ್ತಿನ ಜನರ ಕಣ್ಣನ್ನು ತೆರೆಸಿದ ಮಹಾ ಪುರುಷ.

ಉ. ಬಿಟ್ಟ ಸ್ಥಳ ಭರ್ತಿ ಮಾಡಿ.

1. ಇತರ ಮಕ್ಕಳು ಅಣಕಿಸಿ ಗೇಲಿ ಮಾಡುವರು.

2. ತನ್ನ ದೀರ್ಘಕಾಲದ ವೃತ್ತಿಯಲ್ಲಿ ಇಂತಹ ರೋಗಸ್ಥಿತಿಯನ್ನು ಒಮ್ಮೆಯಾದರೂ ಕಂಡಿರಲಿಲ್ಲ.

3. ಮಕ್ಕಳನ್ನು ಭೂಮಿಗಿಳಿಸಿದ ವೈದ್ಯರ ಹೆಸರನ್ನು ಆ ಮಕ್ಕಳ ಅಡ್ಡ ಹೆಸರಾಗಿ ಬಳಸುವುದು ನಮ್ಮೂರಿನ ಸಂಪ್ರದಾಯ.

ವ್ಯಾಕರಣ ಮಾಹಿತಿ
1. ಅಂಕಿತನಾಮ – ಗುರುತಿಗಾಗಿ ಹಾಗೂ ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳಿಗೆಲ್ಲ ಅಂಕಿತನಾಮಗಳೆಲ್ಲ ಅಂಕಿತನಾಮಗಳು.

2. ರೂಢನಾಮ- ರೂಢಿಯಿಂದ ಬಂದ ಪದಗಳಿಗೆ ರೂಢನಾಮ ಎನ್ನುವರು.

3. ಅನ್ವರ್ಥನಾಮ- ರೂಪ, ಗುಣ, ವೃತ್ತಿ, ಸ್ವಭಾವಾದಿ ವಿಶೇಷವಾದ ಅರ್ಥಕ್ಕೆ ಅನುಗುಣವಾಗಿ ಬಂದ ಹೆಸರು.

ಕೊಟ್ಟಿರುವ ಪದಗಳನ್ನು ರೂಢನಾಮ, ಅಂಕಿತನಾಮ ಹಾಗು ಅನ್ವರ್ಥನಾಮಗಳಾಗಿ ವಿಂಗಡಿಸಿ ಬರೆಯಿರಿ.
ಕುರುಡ, ಹೆಂಗಸು, ಮಾರ್ಲಿನ್‌, ವೈದ್ಯ, ಮಿಲ್ಲರ್, ಶಿಶು, ರೋಗಿ, ಪ್ರವೀಣ, ಬಾರ್ಬರಾ, ವಿದ್ಯಾರ್ಥಿ

1. ರೂಢನಾಮ- ಹೆಂಗಸು, ಶಿಶು

2. ಅಂಕಿತನಾಮ – ಮಾರ್ಲಿನ್‌, ಮಿಲ್ಲರ್, ಬಾರ್ಬರಾ

3. ಅನ್ವರ್ಥನಾಮ- ವೈದ್ಯ, ರೋಗಿ, ಪ್ರವೀಣ, ಕುರುಡ, ವಿದ್ಯಾರ್ಥಿ
logoblog

Thanks for reading 5th Class Jeevada Moulya Kannada Lesson Notes

Previous
« Prev Post

No comments:

Post a Comment

If You Have any Doubts, let me Comment Here