Subject: Regarding taking necessary steps to provide subject-wise online training for high school teachers in the year 2023-24.
ಈ ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ ಪ್ರೌಢಶಾಲಾ ಶಿಕ್ಷಕರ ವಿಷಯವಾರು ಆನ್‌ಲೈನ್ ತರಬೇತಿ ನೀಡಲು ಅಗತ್ಯ ಕ್ರಮವಹಿಸುವ ಕುರಿತು ಪ್ರತಿ ಜಿಲ್ಲೆಯ ನೋಡಲ್ ಅಧಿಕಾರಿಗಳು, ತಾಂತ್ರಿಕ ಸಹಾಯಕರು ಮತ್ತು ಟ್ಯಾಲ್ವ್ ಸಂಪನ್ಮೂಲ ವ್ಯಕ್ತಿಗಳ ಸಭೆ ನಡೆಸಿ, 2023-24ನೇ ಸಾಲಿನ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಬೇಕಿದೆ. ಆನ್ಲೈನ್ ತರಬೇತಿಗಳನ್ನು ಗುಣಮಟ್ಟದಲ್ಲಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ಪಾತ್ರ ಮತ್ತು ಜವಾಬ್ದಾರಿಯನ್ನು ನಿಗದಿಸಲಾಗಿದೆ.
ಸರ್ಕಾರಿ ಪ್ರೌಢ ಶಾಲೆಗಳು, ಉನ್ನತೀಕರಿಸಿದ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಗೆ ವಿಷಯವಾರು ಬೋಧಿಸುತ್ತಿರುವ ಶಿಕ್ಷಕರು ಹಾಗೂ ಇನ್ನುಳಿದ ಸ್ವ ಆಸಕ್ತ ಶಾಲಾ ಶಿಕ್ಷಕರು ಆನ್ಲೈನ್ ತರಬೇತಿಯನ್ನು ದೀಕ್ಷಾ ಪೋರ್ಟಲ್ ಮೂಲಕ SSO ಅಥವಾ ಸೈನ್ ಇನ್ ವಿತ್ ಗೂಗಲ್ ಮೂಲಕ ಪಡೆಯಲು ರಾಜ್ಯ ಹಂತದಿಂದ ಕೋರ್ಸ್‌ಗಳನ್ನು ಲಾಂಚ್ ಮಾಡಲಾಗುತ್ತಿದೆ. ಈ ಆನ್‌ಲೈನ್ ತರಬೇತಿಯು ಅತ್ಯಂತ ಮಹತ್ವವಾದ ತರಬೇತಿ ಕಾರ್ಯಕ್ರಮವಾಗಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ರಾಷ್ಟ್ರಾದ್ಯಂತ ಏಕ ಸ್ವರೂಪದಲ್ಲಿ ಎಲ್ಲಾ ಶಿಕ್ಷಕರನ್ನು ತಲುಪಲಿದೆ. ಈ ಕಾರ್ಯಕ್ರಮವು ತನ್ನ ಸ್ವರೂಪಕ್ಕೆ ಅನುಗುಣವಾಗಿ ಅನುಷ್ಠಾನವಾಗಲು ಪ್ರೌಢಶಾಲಾ ಶಿಕ್ಷಕರ ವರ್ಗವು ಕೈ ಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಅಧಿಕಾರಿಗಳಿಗೆ ವಿವಿಧ ಪಾತ್ರ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ಡಯಟ್‌ಗಳು ಅಗತ್ಯ ಪೂರ್ವಸಿದ್ಧತೆಯೊಂದಿಗೆ ಯೋಜಿಸಿ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು, ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳು ಮುತ್ತು ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಶಿಕ್ಷರಿಗೆ ತರಬೇತಿಯನ್ನು ಆನ್‌ಲೈನ್‌ನಲ್ಲಿ ಶೂನ್ಯ ಬಜೆಟ್ ಅಡಿಯಲ್ಲಿ ನೀಡಲಾಗುತ್ತಿದೆ.
2023-24ನೇ ಸಾಲಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ವಿಷಯವಾರು (ಡಿಸ್ಕವರಿ ಆಧಾರಿತ ಕಲಿಕೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ, ಶಿಕ್ಷಕರಿಗಾಗಿ ಆನ್‌ಲೈನ್ ತರಬೇತಿ ಕೋರ್ಸ್ ಗಳನ್ನು ನೀಡಿಪಡಿಸಲಾಗಿದ್ದು ಈ ತರಬೇತಿಯನ್ನು ಎಲ್ಲಾ ಶಿಕ್ಷಕರು ಪಡೆದುಕೊಳ್ಳಲು ತಿಳಿಸಿದೆ. ಕೋರ್ಸ್‌ಗಳ ವಿವರ ಈ ಕೆಳಕಂಡಂತಿದೆ.
No comments:
Post a Comment
If You Have any Doubts, let me Comment Here